ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರೈಲು ಸಂಚಾರದ ಬಗ್ಗೆ ಮಹತ್ವದ ಆದೇಶ ಪ್ರಕಟ

|
Google Oneindia Kannada News

ನವದೆಹಲಿ, ಜೂನ್ 25 : ಪ್ರಯಾಣಿಕ ರೈಲುಗಳ ಸಂಚಾರದ ಬಗ್ಗೆ ರೈಲ್ವೆ ಮಂಡಳಿ ಮಹತ್ವದ ತೀರ್ಮಾನ ಕೈಗೊಂಡಿದೆ. ಆಗಸ್ಟ್ 12ರ ತನಕ ರೈಲುಗಳ ಸಂಚಾರವನ್ನು ಸ್ಥಗಿತಗೊಳಿಸಲಾಗಿದೆ ಎಂದು ಹೇಳಿದೆ.

Recommended Video

ಪ್ರಪಂಚದ ಮುಂದೆ ಮತ್ತೆ ಪಾಕಿಸ್ತಾನಕ್ಕೆ ಮುಖಭಂಗ | Oneindia Kannada

ಗುರುವಾರ ನಡೆದ ರೈಲ್ವೆ ಮಂಡಳಿ ಸಭೆಯಲ್ಲಿ ಪ್ರಯಾಣಿಕ ರೈಲುಗಳ ಸಂಚಾರದ ಬಗ್ಗೆ ಚರ್ಚೆ ನಡೆದಿದೆ. ಸಾಮಾನ್ಯ ವೇಳಾಪಟ್ಟಿಯ ಪ್ಯಾಸೆಂಜರ್/ಮೇಲ್/ಎಕ್ಸ್‌ಪ್ರೆಸ್/ಸಬ್ ಅರ್ಬನ್ ರೈಲುಗಳ ಸಂಚಾರವನ್ನು ರದ್ದುಗೊಳಿಸುವ ಕುರಿತು ತೀರ್ಮಾನ ಕೈಗೊಳ್ಳಲಾಗಿದೆ.

ಆಗಸ್ಟ್ ತಿಂಗಳವರೆಗೂ ರೈಲ್ವೆ ಸಂಚಾರ ಆರಂಭಿಸುವುದೇ ಅನುಮಾನ! ಆಗಸ್ಟ್ ತಿಂಗಳವರೆಗೂ ರೈಲ್ವೆ ಸಂಚಾರ ಆರಂಭಿಸುವುದೇ ಅನುಮಾನ!

Regular Time Tabled Passenger Train Cancelled Till August 12

ಸಾಮಾನ್ಯ ವೇಳಾಪಟ್ಟಿಯ ರೈಲುಗಳಿಗೆ 1/7/2020 ರಿಂದ 12/8/2020ರ ತನಕ ಬುಕ್ ಮಾಡಿದ ಎಲ್ಲಾ ಟಿಕೆಟ್‌ಗಳ ಹಣವನ್ನು ವಾಪಸ್ ಮಾಡಲು ಒಪ್ಪಿಗೆ ನೀಡಲಾಗಿದೆ. ಈ ಮೂಲಕ ಆಗಸ್ಟ್ 12ರ ತನಕ ರೈಲುಗಳು ಸಂಚಾರ ನಡೆಸುವುದಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ.

ನೈಋತ್ಯ ರೈಲ್ವೆ 38 ಪ್ಯಾಸೆಂಜರ್ ರೈಲು ಎಕ್ಸ್‌ಪ್ರೆಸ್‌ ಆಗಿ ಬದಲಾವಣೆ ನೈಋತ್ಯ ರೈಲ್ವೆ 38 ಪ್ಯಾಸೆಂಜರ್ ರೈಲು ಎಕ್ಸ್‌ಪ್ರೆಸ್‌ ಆಗಿ ಬದಲಾವಣೆ

12/5/2020 ಮತ್ತು 1/6/2020ರಂದು ಆರಂಭವಾದ ವಿಶೇಷ ರಾಜಧಾನಿ/ ವಿಶೇಷ ಮೇಲ್/ ಎಕ್ಸ್‌ಪ್ರೆಸ್ ರೈಲುಗಳು ಸಂಚಾರ ಎಂದಿನಂತೆ ಇರುತ್ತದೆ ಎಂದು ರೈಲ್ವೆ ಇಲಾಖೆ ತನ್ನ ಆದೇಶದಲ್ಲಿ ತಿಳಿಸಿದೆ.

ಬೆಂಗಳೂರು-ಮೈಸೂರು ರೈಲ್ವೆ ಪ್ರಯಾಣಿಕರೇ ಗಮನಿಸಿ, ವೇಳಾಪಟ್ಟಿ ಬದಲು ಬೆಂಗಳೂರು-ಮೈಸೂರು ರೈಲ್ವೆ ಪ್ರಯಾಣಿಕರೇ ಗಮನಿಸಿ, ವೇಳಾಪಟ್ಟಿ ಬದಲು

1/7/2020 ರಿಂದ 12/8/2020ರ ತನಕ ಸಾಮಾನ್ಯ ವೇಳಾಪಟ್ಟಿಯ ರೈಲುಗಳಿಗೆ ಬುಕ್ ಮಾಡಲಾಗಿದ್ದ ಟಿಕೆಟ್‌ನ ಪೂರ್ಣ ಹಣವನ್ನು ವಾಪಸ್ ಮಾಡಬೇಕು ಎಂದು ರೈಲ್ವೆ ಇಲಾಖೆ ಸೂಚನೆ ಕೊಟ್ಟಿದೆ.

ಈಗಾಗಲೇ ಸಂಚಾರ ನಡೆಸುತ್ತಿರುವ 230 ವಿಶೇಷ ರೈಲುಗಳು, ಗೂಡ್ಸ್ ರೈಲು, ಅಗತ್ಯ ವಸ್ತುಗಳನ್ನು ಸಾಗಣೆ ಮಾಡುವ ವಿಶೇಷ ರೈಲುಗಳ ಸಂಚಾರ ಎಂದಿನಂತೆ ಇರಲಿದೆ ಎಂದು ಇಲಾಖೆ ಹೇಳಿದೆ.

English summary
Regular time-tabled passenger services including Mail/Express, passenger and suburban services stand cancelled up to 12/8/2020 said Railway board on June 25, 2020.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X