ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇಎಸ್ ಐ ಕಾಯ್ದೆ ಮಹತ್ವದ ತೀರ್ಮಾನ; 3.6 ಕೋಟಿ ಉದ್ಯೋಗಿಗಳಿಗೆ ಅನುಕೂಲ

|
Google Oneindia Kannada News

ಕೇಂದ್ರ ಸರಕಾರವು ಇಎಸ್ ಐ ವಿಚಾರವಾಗಿ ಮಹತ್ವದ ತೀರ್ಮಾನವೊಂದನ್ನು ತೆಗೆದುಕೊಂಡಿದೆ. ಇಎಸ್ ಐ ಕಾಯ್ದೆ ಪ್ರಕಾರ ಮಾಲೀಕರು ಹಾಗೂ ಸಿಬ್ಬಂದಿ ಸೇರಿ 6.5% ಕಟ್ಟಬೇಕು. ಅದನ್ನು 4 ಪರ್ಸೆಂಟ್ ಗೆ ಇಳಿಸಲಾಗಿದೆ. ಈ ಮೂಲಕ ಮಾಲೀಕರ ಕೊಡುಗೆ 4.75% ನಿಂದ 3.25%ಗೂ ಹಾಗೂ ಕಾರ್ಮಿಕರ ಕೊಡುಗೆಯನ್ನು 1.75% ನಿಂದ 0.75%ಗೂ ಇಳಿಸಲಾಗಿದೆ.

ಈ ನಿಯಮವು 1.07.2019ರಿಂದ ಅನ್ವಯ ಆಗಲಿದ್ದು, 3.6 ಕೋಟಿ ಉದ್ಯೋಗಿಗಳಿಗೆ ಹಾಗೂ 12.85 ಲಕ್ಷ ಮಾಲೀಕರಿಗೆ ಇದರ ಲಾಭ ದೊರೆಯಲಿದೆ. ಇದರ ಅನುಕೂಲ ಆಗಿ, ಸಂಘಟಿತ ವಲಯಕ್ಕೆ ಇನ್ನಷ್ಟು ಉದ್ಯೋಗಿಗಳು ಸೇರ್ಪಡೆ ಆಗುವ ಸಾಧ್ಯತೆಗಳು ಇವೆ. ಇನ್ನು ಮಾಲೀಕರಿಗೂ ಇದರ ಲಾಭ ದೊರೆಯಲಿದೆ.

ರಾಜಾಜಿನಗರ ಇಎಸ್‌ಐ ಆಸ್ಪತ್ರೆಯ 81 ವೈದ್ಯರ ದಿಢೀರ್ ವರ್ಗಾವಣೆರಾಜಾಜಿನಗರ ಇಎಸ್‌ಐ ಆಸ್ಪತ್ರೆಯ 81 ವೈದ್ಯರ ದಿಢೀರ್ ವರ್ಗಾವಣೆ

ಇಎಸ್ ಐ (ಎಂಪ್ಲಾಯಿಸ್ ಸ್ಟೇಟ್ ಇನ್ಷೂರೆನ್ಸ್) ಕಾಯ್ದೆ 1948 ವಿಮೆ ಅಡಿ ಬರುವವರಿಗೆ ವೈದ್ಯಕೀಯ, ನಗದು, ಹೆರಿಗೆ, ಅಂಗವೈಕಲ್ಯ ಹಾಗೂ ಅವಲಂಬಿತರ ಅನುಕೂಲಗಳನ್ನು ಒದಗಿಸುತ್ತದೆ. ಮಾಲೀಕರು ಹಾಗೂ ಉದ್ಯೋಗಿ ಇಬ್ಬರೂ ಕಟ್ಟುವ ಹಣದಿಂದ ಇಎಸ್ ಐ ಕಾಯ್ದೆ ಅಡಿಯಲ್ಲಿ ಇವೆಲ್ಲ ಒದಗಿಸಲಾಗುತ್ತದೆ.

Reduction in Rate of ESI Contribution of employer and employer

ಮಾಲೀಕರು- ಉದ್ಯೋಗಿ ಎಷ್ಟು ಹಣ ಪಾವತಿಸಬೇಕು, ಅರ್ಥಾತ್ ಯಾವ ಪ್ರಮಾಣದಲ್ಲಿ ಪಾವತಿಸಬೇಕು ಎಂಬುದನ್ನು ಕಾರ್ಮಿಕ ಹಾಗೂ ಉದ್ಯೋಗ ಸಚಿವಾಲಯವು ತೀರ್ಮಾನಿಸುತ್ತದೆ. 1.1.1997ರಿಂದ ಮಾಲೀಕರು 4.75% ಹಾಗೂ ಉದ್ಯೋಗಿ 1.75% ಕೊಡುಗೆ ನೀಡುತ್ತಾ ಬಂದಿದ್ದಾರೆ.

ಇದರ ಪ್ರಯೋಜನ ಇನ್ನೂ ಹೆಚ್ಚು ಮಂದಿಗೆ ತಲುಪಬೇಕು ಎಂಬ ಉದ್ದೇಶದಿಂದ ಮುಂಚೆ ಇದ್ದ ಉದ್ಯೋಗಿಯ ವೇತನ ಮಿತಿಯನ್ನು 15 ಸಾವಿರದಿಂದ 21 ಸಾವಿರಕ್ಕೆ 1.1.2017ರಿಂದ ಏರಿಕೆ ಮಾಡಲಾಗಿದೆ.

English summary
The Government of India has taken a historic decision to reduce the rate of contribution under the ESI Act from 6.5% to 4% (employers’ contribution being reduced from 4.75% to 3.25% and employees’ contribution being reduced from 1.75% to 0.75%).
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X