ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನೀರವ್ ಮೋದಿ ವಿರುದ್ಧ ರೆಡ್ ಕಾರ್ನರ್ ನೋಟಿಸ್ ಜಾರಿಗೊಳಿಸಿದ ಇಂಟರ್ಪೋಲ್

By Sachhidananda Acharya
|
Google Oneindia Kannada News

ನವದೆಹಲಿ, ಜುಲೈ 2: ಪಂಜಾಬ್ ನ್ಯಾಷನಲ್ ಬ್ಯಾಂಕಿಗೆ 13 ಸಾವಿರಕ್ಕೂ ಅಧಿಕ ಕೋಟಿ ರೂಪಾಯಿ ಪಂಗನಾಮ ಹಾಕಿ ವಿದೇಶದಲ್ಲಿ ತಲೆ ಮರೆಸಿಕೊಂಡಿರುವ ವಜ್ರದ ಉದ್ಯಮಿ ನೀರವ್ ಮೋದಿ ವಿರುದ್ಧ 'ಇಂಟರ್ ಪೋಲ್' ರೆಡ್ ಕಾರ್ನರ್ ನೋಟಿಸ್ ಜಾರಿ ಮಾಡಿದೆ.

ಸಿಬಿಐ ನೀಡಿದ ದಾಖಲೆಗಳಿಗೆ ಇಂಟರ್ ಪೋಲ್ ತೃಪ್ತಿ ವ್ಯಕ್ತಪಡಿಸಿದ್ದು ನೀರವ್ ವಿರುದ್ಧ ರೆಡ್ ಕಾರ್ನರ್ ನೋಟಿಸ್ ಹೊರಡಿಸಿದೆ.

ನೀರವ್ ಮೋದಿ ವಿರುದ್ಧ ಸದ್ಯದಲ್ಲೇ ರೆಡ್ ಕಾರ್ನರ್ ನೋಟಿಸ್ನೀರವ್ ಮೋದಿ ವಿರುದ್ಧ ಸದ್ಯದಲ್ಲೇ ರೆಡ್ ಕಾರ್ನರ್ ನೋಟಿಸ್

ಮುಂಬೈ ವಿಶೇಷ ನ್ಯಾಯಾಲಯ ನೀರವ್ ಮೋದಿ ವಿರುದ್ಧ ಹೊರಡಿಸಿರುವ ಜಾಮೀನು ರಹಿತ ವಾರಂಟ್, ಪ್ರಕರಣದಲ್ಲಿ ಸಲ್ಲಿಸಲಾಗಿರುವ ಚಾರ್ಜ್ ಶೀಟ್ ದಾಖಲೆಗಳನ್ನು ಸಿಬಿಐ ಇಂಟರ್ ಪೋಲ್ ಗೆ ಸಲ್ಲಿಸಿತ್ತು. ಈ ದಾಖಲೆಗಳನ್ನು ಇಂಟರ್ ಪೋಲ್ ಪರಿಶೀಲನೆ ನಡೆಸಿ ರೆಡ್ ಕಾರ್ನರ್ ನೋಟಿಸ್ ಹೊರಡಿಸಿದೆ.

ಯಾರೀತ? ಬಹು ಕೋಟಿ ವಂಚನೆ ಪ್ರಕರಣದ ಆರೋಪಿ ನೀರವ್ ಮೋದಿ ಯಾರೀತ? ಬಹು ಕೋಟಿ ವಂಚನೆ ಪ್ರಕರಣದ ಆರೋಪಿ ನೀರವ್ ಮೋದಿ

Red Corner Notice issues against Nirav Modi by Interpol

ನೀರವ್ ಮೋದಿಯವರ ಭಾರತೀಯ ಪಾಸ್ಪೋರ್ಟ್ ರದ್ದುಗೊಳಿಸಲಾಗಿದೆ. ಹೀಗಿದ್ದೂ ಅವರು ಬೇರೆ ಬೇರೆ ದೇಶಗಳಿಗೆ ಪ್ರಯಾಣಿಸುತ್ತಿದ್ದಾರೆ ಎಂದು ತಿಳಿದು ಬಂದಿದೆ. ಇದೀಗ ರೆಡ್ ಕಾರ್ನರ್ ನೋಟಿಸ್ ಮೂಲಕ ನೀರವ್ ಮೋದಿಯನ್ನು ವಶಕ್ಕೆ ಪಡೆಯಲು ಸಿಬಿಐ ಮುಂದಾಗಿದೆ.

ಲಂಡನ್ ನಿಂದ ಬ್ರಸೆಲ್ಸ್ ಗೆ ಪರಾರಿಯಾದ ನೀರವ್ ಮೋದಿ ಲಂಡನ್ ನಿಂದ ಬ್ರಸೆಲ್ಸ್ ಗೆ ಪರಾರಿಯಾದ ನೀರವ್ ಮೋದಿ

ರೆಡ್ ಕಾರ್ನರ್ ನೋಟಿಸ್ ನಲ್ಲಿಏನಿದೆ?

1971ರ ಫೆಬ್ರವರಿ 2ರಂದು ಜನಿಸಿದ 47 ವರ್ಷದ ನೀರವ್ ಮೋದಿ ಕಂಡಲ್ಲಿ, ಅಥವಾ ಅವರ ಬಗ್ಗೆ ಮಾಹಿತಿ ಸಿಕ್ಕಲ್ಲಿ ಸ್ಥಳೀಯ ಪೊಲೀಸರಿಗೆ ಅಥವಾ ರಾಷ್ಟ್ರೀಯ ಪೊಲೀಸರಿಗೆ ಮಾಹಿತಿ ನೀಡಿ ಎಂದು ಇಂಟರ್ ಪೋಲ್ ಕೋರಿಕೊಂಡಿದೆ. ಇಂಟರ್ ಪೋಲ್ ಅಂದರೆ ಅಂತರ್ ರಾಷ್ಟ್ರೀಯ ಪೊಲೀಸರಾಗಿದ್ದು, ಎಲ್ಲಾ ದೇಶಗಳಿಗೂ ಈ ನೋಟಿಸ್ ತಲುಪಲಿದೆ.

ಯಾರೀತ? ಬಹು ಕೋಟಿ ವಂಚನೆ ಪ್ರಕರಣದ ಆರೋಪಿ ನೀರವ್ ಮೋದಿ ಯಾರೀತ? ಬಹು ಕೋಟಿ ವಂಚನೆ ಪ್ರಕರಣದ ಆರೋಪಿ ನೀರವ್ ಮೋದಿ

ನೀರವ್ ಮೋದಿ ಯಾವುದೇ ದೇಶದಲ್ಲಿ ಅಡಗಿದ್ದರೂ ಅವರನ್ನು ಬಂಧಿಸಬಹುದಾಗಿದೆ.

ಹಿಂದಿ, ಗುಜರಾತಿ ಮತ್ತು ಇಂಗ್ಲೀಷ್ ಭಾಷೆ ಬಲ್ಲ ನೀರವ್ ಮೋದಿ ಮೇಲೆ ಲೇವಾದೇವಿ ಆರೋಪ ಇದೆ. ಮುಂಬೈನಲ್ಲಿ ಜನಿಸಿದ ಆರೋಪಿಯ ಹೆಸರು 'ನೀರವ್ ದೀಪಕ್ ಮೋದಿ' ಎಂದು ರೆಡ್ ಕಾರ್ನರ್ ನೋಟಿಸ್ ನಲ್ಲಿ ಹೇಳಲಾಗಿದೆ.

English summary
The Interpol is today issued a red corner notice (RCN) against fugitive diamantaire Nirav Modi as the international agency is satisfied with the documents provided by the CBI which is probing the USD 2 billion scam.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X