ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜೂನ್ ನಂತರ ಮೊದಲ ಬಾರಿ 10 ಸಾವಿರದಂಚಿಗೆ ಬಂದು ನಿಂತ ದೈನಂದಿನ ಕೊರೊನಾ ಪ್ರಕರಣ

|
Google Oneindia Kannada News

ನವದೆಹಲಿ, ಜನವರಿ 20: ಭಾರತದಲ್ಲಿ ಕಳೆದ 24 ಗಂಟೆಗಳಲ್ಲಿ 10,064 ಹೊಸ ಕೊರೊನಾ ಸೋಂಕಿನ ಪ್ರಕರಣಗಳು ಪತ್ತೆಯಾಗಿದ್ದು, ಏಳು ತಿಂಗಳ ನಂತರ ದಿನನಿತ್ಯದ ಪ್ರಕರಣಗಳಲ್ಲಿ ಭಾರೀ ಇಳಿಕೆಯಾಗಿರುವುದಾಗಿ ತಿಳಿದುಬಂದಿದೆ.

ಏಳು ತಿಂಗಳ ಬಳಿಕ ಹತ್ತು ಸಾವಿರದ ಅಂಚಿನಲ್ಲಿ ಹೊಸ ಸೋಂಕಿತ ಪ್ರಕರಣಗಳು ಪತ್ತೆಯಾಗಿವೆ. ಕಳೆದ ಜೂನ್ 12ರಂದು 10,956 ದಾಖಲಾಗಿತ್ತು. ಆನಂತರ ದಿನನಿತ್ಯದ ಪ್ರಕರಣಗಳು ಏರಿಕೆ ಹಾದಿಯನ್ನೇ ಹಿಡಿದಿದ್ದವು. ಇದೀಗ ಏಳು ತಿಂಗಳ ನಂತರ 10,064 ದಿನನಿತ್ಯದ ಪ್ರಕರಣ ದಾಖಲಾಗಿದೆ. ಮುಂದೆ ಓದಿ...

 ನೀರಿನಲ್ಲಿ ಹೋಮ ಮಾಡಿದಂತಾಗುತ್ತದೆ ಲಸಿಕೆ! ಅಮೆರಿಕ ಕೊಟ್ಟಿತು ಈ ಎಚ್ಚರಿಕೆ ನೀರಿನಲ್ಲಿ ಹೋಮ ಮಾಡಿದಂತಾಗುತ್ತದೆ ಲಸಿಕೆ! ಅಮೆರಿಕ ಕೊಟ್ಟಿತು ಈ ಎಚ್ಚರಿಕೆ

 ಸಕ್ರಿಯ ಪ್ರಕರಣಗಳಲ್ಲಿ ಭಾರೀ ಇಳಿಕೆ

ಸಕ್ರಿಯ ಪ್ರಕರಣಗಳಲ್ಲಿ ಭಾರೀ ಇಳಿಕೆ

ಭಾರತದಲ್ಲಿ ಒಟ್ಟಾರೆ ಸಕ್ರಿಯ ಪ್ರಕರಣಗಳ ಸಂಖ್ಯೆ 2 ಲಕ್ಷಕ್ಕೆ (2,00,528) ಇಳಿಕೆಯಾಗಿದ್ದು, ಸದ್ಯ ಒಟ್ಟು ಸೋಂಕಿತ ಪ್ರಕರಣಗಳಿಗೆ ಹೋಲಿಸಿದರೆ ಸಕ್ರಿಯ ಪ್ರಕರಣ ಪ್ರಮಾಣ ಕೇವಲ ಶೇ.1.90 ಆಗಿದೆ. ಒಂದೆಡೆ ಕೊರೊನಾ ಸೋಂಕಿತರ ಪ್ರತಿ ದಿನದ ಪ್ರಮಾಣ ಇಳಿಕೆಯಾಗುತ್ತಿದ್ದರೆ, ಮತ್ತೊಂದೆಡೆ ಹೆಚ್ಚಿನ ಜನರಿಗೆ ಎಲ್ಲ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಕೋವಿಡ್-19 ವಿರುದ್ಧ ಲಸಿಕೆ ಹಾಕಲಾಗುತ್ತಿದೆ. ಇದು ಕೊರೊನಾ ಹೊಸ ಪ್ರಕರಣಗಳು ಕಡಿಮೆಯಾಗಲು ಪರೋಕ್ಷ ಕಾರಣ ಎನ್ನಲಾಗಿದೆ.

 ಈವರೆಗೆ ಎಷ್ಟು ಮಂದಿಗೆ ಕೊರೊನಾ ಲಸಿಕೆ ನೀಡಲಾಗಿದೆ?

ಈವರೆಗೆ ಎಷ್ಟು ಮಂದಿಗೆ ಕೊರೊನಾ ಲಸಿಕೆ ನೀಡಲಾಗಿದೆ?

ಸದ್ಯ ಸಕ್ರಿಯ ಪ್ರಕರಣಗಳಿಗಿಂತ ಎರಡು ಪಟ್ಟು ಹೆಚ್ಚು ಜನರಿಗೆ ಲಸಿಕೆ ಹಾಕಲಾಗಿದೆ. ಕಳೆದ 24 ಗಂಟೆಗಳಲ್ಲಿ 3,930 ಕಡೆ ಒಟ್ಟಾರೆ 2,23,669 ಮಂದಿಗೆ ಲಸಿಕೆ ಹಾಕಲಾಗಿದ್ದು, ಈವರೆಗೆ ಒಟ್ಟು 4,54,049 ಮಂದಿ ಲಸಿಕೆ ಪಡೆದುಕೊಂಡಿದ್ದಾರೆ. ಈವರೆಗೆ 7,860 ಲಸಿಕೆ ನೀಡುವ ಕಾರ್ಯಾಚರಣೆ ನಡೆದಿದೆ ಎಂದು ತಿಳಿದುಬಂದಿದೆ.

 ಕೊರೊನಾ ಸೋಂಕಿನ ವಾರದ ಪ್ರಮಾಣದಲ್ಲೂ ಇಳಿಕೆ

ಕೊರೊನಾ ಸೋಂಕಿನ ವಾರದ ಪ್ರಮಾಣದಲ್ಲೂ ಇಳಿಕೆ

ಭಾರತದಲ್ಲಿ ವಾರದ ಒಟ್ಟಾರೆ ಪ್ರಕರಣಗಳೂ ಇಳಿಕೆಯಾಗಿದ್ದು. ಶೇ.1.97ರಷ್ಟು ಇಳಿಕೆಯಾಗಿದೆ. 13 ರಾಜ್ಯಗಳು/ ಕೇಂದ್ರಾಡಳಿತ ಪ್ರದೇಶಗಳಲ್ಲಿ ವಾರದ ಪ್ರಮಾಣದಲ್ಲಿ ಇಳಿಕೆಯಾಗಿರುವುದು ಕಂಡುಬಂದಿದೆ. ಮರಣ ಪ್ರಮಾಣವೂ ತಗ್ಗಿದ್ದು, ದೇಶದಲ್ಲಿ ಕಳೆದ 24 ಗಂಟೆಗಳಲ್ಲಿ 140ಕ್ಕೂ ಕಡಿಮೆ ಮರಣ (137 ಸಾವು) ಸಂಭವಿಸಿವೆ. ಎಂಟು ತಿಂಗಳ ಬಳಿಕ ಇದೇ ಮೊದಲ ಬಾರಿ ಇಷ್ಟು ಕಡಿಮೆ ಮರಣ ಸಂಭವಿಸಿದೆ.

 ಭಾರತದಲ್ಲಿ ಚೇತರಿಕೆ ಪ್ರಮಾಣ ಶೇ.96.66

ಭಾರತದಲ್ಲಿ ಚೇತರಿಕೆ ಪ್ರಮಾಣ ಶೇ.96.66

ಭಾರತದಲ್ಲಿ ಚೇತರಿಕೆ ಪ್ರಮಾಣ ಶೇ.96.66ಕ್ಕೆ ಏರಿಕೆಯಾಗಿದೆ. ದೇಶದಲ್ಲಿ ಒಟ್ಟು ಚೇತರಿಕೆಯಾಗಿರುವವರ ಸಂಖ್ಯೆ 1,02,28,753ಕ್ಕೆ ಏರಿಕೆಯಾಗಿದ್ದರೆ, ಸಕ್ರಿಯ ಪ್ರಕರಣಗಳ ಸಂಖ್ಯೆ 2,08,012 ರಲ್ಲಿದೆ. ದೇಶದಲ್ಲಿ ಕಳೆದ 24 ಗಂಟೆಗಳಲ್ಲಿ 17,411 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಹೊಸದಾಗಿ ಗುಣಮುಖರಾಗಿರುವ ಪ್ರಕರಣಗಳಲ್ಲಿ ಶೇ.80.41 ರಷ್ಟು ಪ್ರಕರಣಗಳು ಹತ್ತು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಕ್ಕೆ ಸಂಬಂಧಿಸಿವೆ.

English summary
The daily new cases in india have touched a new low. 10,064 daily new cases were added to the national tally in the last 24 hours after seven months,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X