ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿಶ್ವದಾಖಲೆ ಬರೆದ ಭಾರತ..! ಇಡೀ ಜಗತ್ತಿನ ಕಣ್ಣು ಭಾರತದ ಮೇಲೆ..!

|
Google Oneindia Kannada News

ಭಾರತದಲ್ಲಿ ನಿನ್ನೆ ಒಂದೇ ದಿನ 3,32,730 ಕೊರೊನಾ ಸೋಂಕಿತರು ಪತ್ತೆಯಾಗಿದ್ದಾರೆ. ಈ ಮೂಲಕ ಜಗತ್ತಿನ ಯಾವುದೇ ದೇಶದಲ್ಲಿ ದಾಖಲಾಗದ ಪ್ರತಿನಿತ್ಯದ ಸೋಂಕಿತರ ಸಂಖ್ಯೆ ನಿನ್ನೆ ಒಂದೇ ದಿನ ದಾಖಲಾಗಿದೆ. ಈ ಹಿಂದೆ ಅಮೆರಿಕ ಹೆಸರಲ್ಲಿದ್ದ ದಾಖಲೆಯೂ ಉಡೀಸ್ ಆಗಿದೆ. ದೇಶಾದ್ಯಂತ ಕೊರೊನಾ ಅಲೆ ಸ್ಫೋಟಗೊಂಡ ಹಿನ್ನೆಲೆಯಲ್ಲಿ ಜಗತ್ತಿನಾದ್ಯಂತ ಭಾರತದ ಸುದ್ದಿ ಬಿತ್ತರವಾಗುತ್ತಿವೆ.

ಅದರಲ್ಲೂ ಜಾಗತಿಕ ಮಾಧ್ಯಮಗಳ ಕಣ್ಣು ಭಾರತದ ಮೇಲೆ ನೆಟ್ಟಿದೆ. ಒಂದು ವರ್ಷದ ನಂತರ ಮತ್ತೆ ಕೊರೊನಾ ಅಬ್ಬರಿಸುತ್ತಿದೆ. ಮಾರ್ಚ್ ಮಧ್ಯದಿಂದ ಆರಂಭವಾದ ಕೊರೊನಾ 2ನೇ ಅಲೆಯ ಆರ್ಭಟ, ಈಗ ಊಹೆಗೂ ಮೀರಿ ಹೆಚ್ಚುತ್ತಿದೆ. ಹತ್ತು ರಾಜ್ಯಗಳಲ್ಲಿ ಅತಿ ಹೆಚ್ಚಿನ ಕೊರೊನಾ ಪ್ರಕರಣಗಳು ದಾಖಲಾಗುತ್ತಿವೆ.

ಕರ್ನಾಟಕದಲ್ಲಿ 26962 ಹೊಸ ಕೊರೊನಾ ಪ್ರಕರಣ ದಾಖಲುಕರ್ನಾಟಕದಲ್ಲಿ 26962 ಹೊಸ ಕೊರೊನಾ ಪ್ರಕರಣ ದಾಖಲು

ಈಗಾಗಲೇ ಹಲವು ರಾಜ್ಯಗಳಲ್ಲಿ ಡೆಡ್ಲಿ ಕೊರೊನಾ ನಿಯಂತ್ರಣಕ್ಕೆ ಲಾಕ್‌ಡೌನ್ ಅಸ್ತ್ರ ಪ್ರಯೋಗಿಸಿದ್ದರೆ, ಇನ್ನೂ ಹಲವು ರಾಜ್ಯಗಳಲ್ಲಿ ಟಫ್ ರೂಲ್ಸ್ ಜಾರಿಗೆ ಬಂದಿದೆ. ಆದರೂ ಸದ್ಯಕ್ಕೆ ಕೊರೊನಾ ಆರ್ಭಟ ನಿಯಂತ್ರಣಕ್ಕೆ ಬರುವ ಲಕ್ಷಣಗಳು ಕಾಣುತ್ತಿಲ್ಲ. ಮುಂದಿನ ದಿನಗಳಲ್ಲಿ ಸೋಂಕಿತರ ಸಂಖ್ಯೆ ಮತ್ತಷ್ಟು ಹೆಚ್ಚುವ ಸಾಧ್ಯತೆ ದಟ್ಟವಾಗಿದೆ.

ಅಮೆರಿಕದಂತೆ ಭಾರತದಲ್ಲೂ ಆತಂಕ..?

ಅಮೆರಿಕದಂತೆ ಭಾರತದಲ್ಲೂ ಆತಂಕ..?

ವಿಶ್ವದ ದೊಡ್ಡಣ್ಣ ಎಂಬ ಪಟ್ಟ ಕಟ್ಟಿಕೊಂಡಿದ್ದ ಅಮೆರಿಕ ಕೊರೊನಾ ಅಲೆಯಲ್ಲಿ ನಲುಗಿ ಹೋಗಿದೆ. ಆದರೆ ಈಗಿನ ಸ್ಥಿತಿಗತಿ ನೋಡಿದರೆ ಭಾರತದಲ್ಲೂ ಅಮೆರಿಕ ರೀತಿಯ ಪರಿಸ್ಥಿತಿ ನಿರ್ಮಾಣವಾಗುವ ಸಾಧ್ಯತೆ ಇದೆ.

ಹೀಗಾಗಿ ಜಗತ್ತಿನಾದ್ಯಂತ ಭಾರತದ ಕೊರೊನಾ ಪರಿಸ್ಥಿತಿ ಕಂಡು ಕಳವಳ ವ್ಯಕ್ತವಾಗಿದೆ. ಈಗಾಗಲೇ ಚೀನಾ ಭಾರತಕ್ಕೆ ಸಹಾಯ ಮಾಡಲು ಮುಂದಾಗಿದೆ. ಇದೇ ರೀತಿ ವಿಶ್ವದ ಅನೇಕ ರಾಷ್ಟ್ರಗಳು ಭಾರತಕ್ಕೆ ಸಹಾಯ ಹಸ್ತ ಚಾಚಲು ಮುಂದಾಗಿವೆ. ಆದರೆ ಸದ್ಯಕ್ಕೆ ಕೊರೊನಾ ಕಂಟ್ರೋಲ್‌ಗೆ ಸಿಗುವುದು ಅನುಮಾನವಾಗಿದೆ.

ಅಮೆರಿಕದಲ್ಲಿ 3 ಕೋಟಿ ಸೋಂಕಿತರು..!

ಅಮೆರಿಕದಲ್ಲಿ 3 ಕೋಟಿ ಸೋಂಕಿತರು..!

ಅಮೆರಿಕದಲ್ಲಿ ಈವರೆಗೆ 3 ಕೋಟಿ 26 ಲಕ್ಷ ಸೋಂಕಿತರು ಪತ್ತೆಯಾಗಿದ್ದಾರೆ. ಹಾಗೇ ಭಾರತದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 1 ಕೋಟಿ 65 ಲಕ್ಷದ ಗಡಿ ದಾಟಿದೆ. ಅಲ್ಲದೆ 5 ಲಕ್ಷ 84 ಸಾವಿರ ಅಮೆರಿಕನ್ನರು ಡೆಡ್ಲಿ ಸೋಂಕಿನಿಂದ ನರಳಿ ಪ್ರಾಣಬಿಟ್ಟಿದ್ದಾರೆ. ಆದರೆ ಭಾರತದಲ್ಲಿ ಕೊರೊನಾ ಸಾವಿನ ಸಂಖ್ಯೆ ಕಂಟ್ರೋಲ್‌ನಲ್ಲಿದ್ದು, ಸಂಕಷ್ಟದ ನಡುವೆ ನೆಮ್ಮದಿ ನೀಡುವ ವಿಚಾರವಾಗಿದೆ. ಆದರೆ ಬ್ರೆಜಿಲ್‌ನಲ್ಲಿ 1 ಕೋಟಿ 41 ಲಕ್ಷ ಸೋಂಕಿತರು ಪತ್ತೆಯಾಗಿದ್ದರೆ ಈ ಪೈಕಿ 3 ಲಕ್ಷ 83 ಸಾವಿರ ಜನರು ಮೃತಪಟ್ಟಿದ್ದಾರೆ.

ಈ ವಿಚಾರದಲ್ಲಿ ಭಾರತವೇ ಬೆಸ್ಟ್..!

ಈ ವಿಚಾರದಲ್ಲಿ ಭಾರತವೇ ಬೆಸ್ಟ್..!

ಹಲವು ತಿಂಗಳಿಂದಲೂ ಕೊರೊನಾ ಸೋಂಕಿತರ ಪಟ್ಟಿಯಲ್ಲಿ ಅಮೆರಿಕ ಮೊದಲ ಸ್ಥಾನದಲ್ಲೇ ಇದೆ. ಒಂದೆಡೆ ಬ್ರೆಜಿಲ್‌ನಲ್ಲಿ ಸೋಂಕಿತರ ಸಂಖ್ಯೆ ಹೆಚ್ಚಾದಾಗ ಬ್ರೆಜಿಲ್ ಪಟ್ಟಿಯಲ್ಲಿ ಮೊದಲಸ್ಥಾನಕ್ಕೆ ಹೋಗಲಿದೆ ಎಂದಿದ್ದರು ತಜ್ಞರು. ಆದರೆ ಬಡರಾಷ್ಟ್ರ ಬ್ರೆಜಿಲ್‌ನಲ್ಲೂ 'ಕೊರೊನಾ' ವೈರಸ್‌ನ ಪ್ರಭಾವ ಒಂದಷ್ಟು ತಗ್ಗಿದೆ.

ಭಾರತದಲ್ಲಿ ಕೊರೊನಾ 2ನೇ ಅಲೆ

ಭಾರತದಲ್ಲಿ ಕೊರೊನಾ 2ನೇ ಅಲೆ

ಮತ್ತೊಂದೆಡೆ ಭಾರತದಲ್ಲಿ ಕೊರೊನಾ 2ನೇ ಅಲೆ ಎದುರಾಗಿದ್ದರೂ ಅಮೆರಿಕದ ದಾಖಲೆ ಮೀರಿಸಲು ಆಗಲ್ಲ. ಅಷ್ಟರೊಳಗೆ ಭಾರತದಲ್ಲಿ 2ನೇ ಅಲೆಯ ಆರ್ಭಟ ತಣ್ಣಗಾಗುವ ವಿಶ್ವಾಸವನ್ನು ತಜ್ಞರು ವ್ಯಕ್ತಪಡಿಸುತ್ತಿದ್ದಾರೆ. ಭಾರತದಲ್ಲಿ 2ನೇ ಅಲೆ ನಿಯಂತ್ರಣಕ್ಕೆ ಜನರು ಕೂಡ ಸಾಥ್ ನೀಡಬೇಕಿದ್ದು, ಕೊರೊನಾ ನಿಯಮಗಳನ್ನು ಪಾಲಿಸಬೇಕಿದೆ.

English summary
India records 3,32,730 cases in last 24 hours & this is creates world record.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X