ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೇಂದ್ರ ಸಂಪುಟ ವಿಸ್ತರಣೆ: ದಾಖಲೆಯ ಎಸ್‌ಸಿ/ಎಸ್‌ಟಿ ಪ್ರಾತಿನಿಧ್ಯ, 11 ಮಹಿಳೆಯರು, ಮೋದಿ ಸರ್ಕಾರಕ್ಕೆ ಯುವಕರ ಶಕ್ತಿ

|
Google Oneindia Kannada News

ನವದೆಹಲಿ, ಜು. 07: ನರೇಂದ್ರ ಮೋದಿ ಸರ್ಕಾರವು ದಲಿತರ ಉತ್ತಮ ಪ್ರಾತಿನಿಧ್ಯವನ್ನು ಹೊಂದಿದ್ದು, ದಾಖಲೆಯ ಸಂಖ್ಯೆ 12 ಎಸ್‌ಸಿ ಮಂತ್ರಿಗಳನ್ನು ಸದನಕ್ಕೆ ಸೇರಿಸಲಿದೆ ಎಂದು ವರದಿಯಾಗಿದೆ. ಮಂತ್ರಿಗಳು ಬಿಹಾರ, ಮಧ್ಯಪ್ರದೇಶ, ಉತ್ತರ ಪ್ರದೇಶ, ಮಹಾರಾಷ್ಟ್ರ, ಪಶ್ಚಿಮ ಬಂಗಾಳ, ಕರ್ನಾಟಕ, ರಾಜಸ್ಥಾನ ಮತ್ತು ತಮಿಳುನಾಡು ಸೇರಿದಂತೆ 8 ರಾಜ್ಯಗಳನ್ನು ಪ್ರತಿನಿಧಿಸಲಿದ್ದಾರೆ.

ಚಮರ್‌-ರಾಮದಾಸಿಯಾ, ಖತಿಕ್, ಪಾಸಿ, ಕೋರಿ, ಮಾದಿಗ, ಮಹರ್, ಅರುಂದತಿಯಾರ್‌, ಮೇಘವಾಲ್, ರಾಜ್‌ಬಾಂಶಿ, ಮಾಟುವಾ-ನಮಾಶುದ್ರ, ಧಂಗರ್ ಮತ್ತು ದುಸಾಧ್‌ ಸೇರಿದಂತೆ 12 ಸಮುದಾಯಗಳಲ್ಲಿ ಪ್ರಾತಿನಿಧ್ಯವಿದೆ. ಎಸ್‌ಸಿ ಸಮುದಾಯದ ಒಂದೆರಡು ಮಂತ್ರಿಗಳನ್ನೂ ಸಂಪುಟ ಸೇರಲಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಸಂಪುಟ ಪುನಾರಚನೆ: ಕರ್ನಾಟಕಕ್ಕೆ ಸ್ವಲ್ಪ ಸಿಹಿ-ಸ್ವಲ್ಪ ಕಹಿ ಸುದ್ದಿ!ಪ್ರಧಾನಿ ನರೇಂದ್ರ ಮೋದಿ ಸಂಪುಟ ಪುನಾರಚನೆ: ಕರ್ನಾಟಕಕ್ಕೆ ಸ್ವಲ್ಪ ಸಿಹಿ-ಸ್ವಲ್ಪ ಕಹಿ ಸುದ್ದಿ!

ಅರುಣಾಚಲ ಪ್ರದೇಶ, ಛತ್ತೀಸ್‌ಗಢ, ಜಾರ್ಖಂಡ್, ಮಧ್ಯಪ್ರದೇಶ, ಪಶ್ಚಿಮ ಬಂಗಾಳ, ಒಡಿಶಾ ಮತ್ತು ಅಸ್ಸಾಂ ಸೇರಿದಂತೆ 8 ರಾಜ್ಯಗಳನ್ನು ಪ್ರತಿನಿಧಿಸುವ ಎಸ್‌ಟಿ ಸಮುದಾಯದ 8 ಮಂತ್ರಿಗಳು ಇರಲಿದ್ದಾರೆ ಎಂದು ಮೂಲಗಳು ಒನ್‌ಇಂಡಿಯಾಕ್ಕೆ ತಿಳಿಸಿವೆ. ಈ ಮಂತ್ರಿಗಳು ಗೊಂಡ, ಸಂತಾಲ್, ಮಿಜಿ, ಮುಂಡಾ, ಟೀ ಬುಡಕಟ್ಟು, ಕೊಕಾನಾ ಮತ್ತು ಸೋನೊವಾಲ್-ಚಾರಿ ಸಮುದಾಯದವರು ಆಗಲಿದ್ದಾರೆ. ಈ ಪೈಕಿ 3 ಮಂದಿ ಸಂಪುಟ ಸಚಿವರಾಗಲಿದ್ದಾರೆ.

Record SC/ST composition,11 women: Modi Sarkar will have infusion of energy and youth

9 ರಾಜ್ಯಗಳು ಮತ್ತು ವಿವಿಧ ಸಮುದಾಯಗಳಿಂದ ಬಂದ 11 ಮಹಿಳೆಯರು ಮಂತ್ರಿಗಳಾಗಲಿದ್ದಾರೆ. ಈ ಪೈಕಿ ಇಬ್ಬರು ಸಂಪುಟ ಸಚಿವರಾಗಲಿದ್ದಾರೆ. ಹೊಸ ಮತ್ತು ಬದಲಾವಣೆಗೆ ಮಂತ್ರಿಗಳ ಪರಿಷತ್ತಿನಲ್ಲಿ ಶಕ್ತಿ ಮತ್ತು ಯುವಜನರ ಹೆಚ್ಚಾಗಿ ಇರಲಿದ್ದಾರೆ ಎಂಬುದು ಗಮನಾರ್ಹ ಎಂದು ಪ್ರಸಾರ್ ಭಾರತಿ ಹೇಳಿದೆ.

ಇನ್ನು 5 ಒಬಿಸಿ ಸಂಪುಟ ಸಚಿವರು ಇರಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ಒಟ್ಟು 27 ಒಬಿಸಿ ಮಂತ್ರಿಗಳು ಇರಲಿದ್ದಾರೆ. ಈ ಮಂತ್ರಿಗಳು ಯಾದವ, ಕುರ್ಮಿ, ಜಾಟ್, ಗುರ್ಜಾರ್, ಖಂಡಾಯತ್, ಭಂಡಾರಿ, ಬೈರಾಗಿ, ಟೀ ಟ್ರೈಬ್, ಠಾಕೋರ್, ಕೋಲಿ, ಒಕ್ಕಲಿಗ ತುಳು ಗೌಡ, ಈಜಾವಾ, ಲೋಧ್, ಅಗ್ರಿ, ವಂಜಾರಿ, ಮೈಟೈ, ನ್ಯಾಟ್, ಮಲ್ಲಾ- ನಿಷಾದ್, ಮೋಡ್ಟೆಲಿ, ಡಾರ್ಜಿ ಸಮುದಾಯಕ್ಕೆ ಸೇರಿದವರು ಆಗಲಿದ್ದಾರೆ.

ಕೇಂದ್ರ ಸಚಿವ ಸಂಪುಟ ವಿಸ್ತರಣೆ: ಪ್ರಧಾನಿ ಮೋದಿಗೆ ಎದುರಾಯ್ತು ಮತ್ತೊಂದು ಸವಾಲು!ಕೇಂದ್ರ ಸಚಿವ ಸಂಪುಟ ವಿಸ್ತರಣೆ: ಪ್ರಧಾನಿ ಮೋದಿಗೆ ಎದುರಾಯ್ತು ಮತ್ತೊಂದು ಸವಾಲು!

ಬ್ರಾಹ್ಮಣ, ಕ್ಷತ್ರಿಯ, ಬನಿಯಾ, ಭೂಮಿಹಾರ್, ಕಾಯಸ್ಥ, ಲಿಂಗಾಯತ, ಖತ್ರಿ, ಕಡ್ವಾ, ಮತ್ತು ಲೆಯು, ಪಟೇಲ್, ಮರಾಠಾ ಮತ್ತು ರೆಡ್ಡಿ ಸಮುದಾಯಗಳ 29 ಮಂತ್ರಿಗಳಿರುತ್ತಾರೆ. ಇದಲ್ಲದೆ ಯುಪಿ, ಪಶ್ಚಿಮ ಬಂಗಾಳ, ಪಂಜಾಬ್, ಮಹಾರಾಷ್ಟ್ರ, ಅರುಣಾಚಲ ಪ್ರದೇಶದ ಅಲ್ಪಸಂಖ್ಯಾತ ಸಮುದಾಯದ 5 ಮಂತ್ರಿಗಳಿದ್ದಾರೆ. ತಲಾ 1 ಮುಸ್ಲಿಂ, ಸಿಖ್, ಕ್ರಿಶ್ಚಿಯನ್, 2 ಮಂದಿ ಬೌದ್ಧರು ಆಗಿರಲಿದ್ದಾರೆ. ಈ ಪೈಕಿ 3 ಮಂದಿ ಕ್ಯಾಬಿನೆಟ್ ಮಂತ್ರಿಗಳಾಗಲಿದ್ದಾರೆ.

ಇದಲ್ಲದೆ, ಮಂತ್ರಿಗಳ ಮಂಡಳಿಯಲ್ಲಿ 4 ಮಾಜಿ ಮುಖ್ಯಮಂತ್ರಿಗಳು, ರಾಜ್ಯ ಸರ್ಕಾರ ಮಾಜಿ ಮಂತ್ರಿಗಳು, 39 ಮಾಜಿ ಶಾಸಕರು ಇದ್ದಾರೆ. ಇದು ರಾಜ್ಯದ ಶಾಸಕಾಂಗ ಅನುಭವ ಮತ್ತು ಒಕ್ಕೂಟದ ಪ್ರಜ್ಞೆಯನ್ನು ತರಲು ಸಹಾಯ ಮಾಡುತ್ತದೆ. 14 ಮಂತ್ರಿಗಳು 50 ವರ್ಷಕ್ಕಿಂತ ಕಡಿಮೆ ವಯಸ್ಸಿನವರು ಆಗಿದ್ದು, 6 ಮಂದಿ ಕ್ಯಾಬಿನೆಟ್ ಮಂತ್ರಿಗಳು.

13 ವಕೀಲರು, 6 ವೈದ್ಯರು, 5 ಎಂಜಿನಿಯರ್‌ಗಳು, 7 ಪೌರಕಾರ್ಮಿಕರು, 7 ಪಿಎಚ್‌ಡಿ ಪಡೆದವರು, 3 ಎಂಬಿಎ ಪದವಿದರರು ಹಾಗೂ 68 ಪದವಿ ಪಡೆದವರು ಈ ಮಂತ್ರಿಗಳ ಪರಿಷತ್ತಿನ ಭಾಗವಾಗಿದ್ದಾರೆ.

ಕರ್ನಾಟಕ, ಬಾಂಬೆ-ಕರ್ನಾಟಕ, ಹೈದರಾಬಾದ್-ಕರ್ನಾಟಕ, ಕರಾವಳಿಯ ಸಚಿವರು ಸಚಿವರ ಪರಿಷತ್ತಿನಲ್ಲಿ ಪ್ರಾತಿನಿಧ್ಯವನ್ನು ಹೊಂದಿದ್ದಾರೆ. ಕೊಂಕಣ, ದೇಶ, ಖಂಡೇಶ್, ಮರಾಠವಾಡ, ವಿದರ್ಭದ ಮಹಾರಾಷ್ಟ್ರ ಮಂತ್ರಿಗಳು ಇರಲಿದ್ದಾರೆ. ಯುಪಿ -ಪುರ್ವಾಂಚಲ್, ಅವಧ್, ಬ್ರಜ್, ಬುಂದೇಲ್‌ಖಂಡ್, ರೋಹಿಲಖಂಡ್, ಪಶ್ಚಿಮ ಪ್ರದೇಶ, ಹರಿತ ಪ್ರದೇಶವನ್ನು ಪ್ರತಿನಿಧಿಸಲಿದ್ದಾರೆ.

ಪಶ್ಚಿಮ ಬಂಗಾಳದ ಪ್ರೆಸಿಡೆನ್ಸಿ, ಮದಿನಿಪುರ ಮತ್ತು ಜಲ್ಪೈಗುರಿಯವರು ಇರಲಿದ್ದಾರೆ. ಮಧ್ಯಪ್ರದೇಶದಿಂದ ಚಂಬಲ್, ಸತ್ಪುರ ಇರಲಿದ್ದಾರೆ. ಈಶಾನ್ಯದಿಂದ, 4 ರಾಜ್ಯಗಳ (ಅಸ್ಸಾಂ ಅರುಣಾಚಲ ಪ್ರದೇಶ, ಮಣಿಪುರ ಮತ್ತು ತ್ರಿಪುರದ 5 ಮಂತ್ರಿಗಳು ಪ್ರಾತಿನಿಧ್ಯವನ್ನು ಹೊಂದಿದ್ದಾರೆ.

(ಒನ್‌ಇಂಡಿಯಾ ಸುದ್ದಿ)

English summary
Record SC/ST composition,11 women: Modi Sarkar will have infusion of energy and youth. Read on.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X