ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಒಂದು ವಾರದಲ್ಲಿ ದಾಖಲೆಯ 534 ಕಿ.ಮೀ ಉದ್ದ ರಾಷ್ಟ್ರೀಯ ಹೆದ್ದಾರಿ ನಿರ್ಮಾಣ: ಕೇಂದ್ರ ಸರ್ಕಾರ

|
Google Oneindia Kannada News

ನವದೆಹಲಿ, ಜನವರಿ 18: ಜನವರಿ 8 ರಿಂದ ಒಂದು ವಾರದೊಳಗೆ 534 ಕಿ.ಮೀ ಉದ್ದ ರಾಷ್ಟ್ರೀಯ ಹೆದ್ದಾರಿಗಳನ್ನು ನಿರ್ಮಿಸಲಾಗಿದೆ ಎಂದು ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ಭಾನುವಾರ ತಿಳಿಸಿದೆ.

2020-21ರ ಆರ್ಥಿಕ ವರ್ಷದಲ್ಲಿ ಸಚಿವಾಲಯವು 2020 ರ ಏಪ್ರಿಲ್‌ನಿಂದ 2021 ರ ಜನವರಿ 15 ರವರೆಗೆ 8,169 ಕಿ.ಮೀ ರಾಷ್ಟ್ರೀಯ ಹೆದ್ದಾರಿಗಳನ್ನು ನಿರ್ಮಾಣ ಮಾಡಲಾಗಿದೆ. ಜನವರಿ 8 ರಿಂದ "534 ಕಿ.ಮೀ ಉದ್ದ ರಸ್ತೆ ನಿರ್ಮಿಸುವ ಮೂಲಕ ದಾಖಲೆಯನ್ನು ಸೃಷ್ಟಿಸಿದೆ" ಎಂದು ಸಚಿವಾಲಯ ತಿಳಿಸಿದೆ.

ಶೀಘ್ರವೇ ಮುಗಿಯಲಿದೆ ಎನ್ ಹೆಚ್ 75 ರಸ್ತೆ ಕಾಮಗಾರಿಶೀಘ್ರವೇ ಮುಗಿಯಲಿದೆ ಎನ್ ಹೆಚ್ 75 ರಸ್ತೆ ಕಾಮಗಾರಿ

ದೇಶದಲ್ಲಿ ರಾಷ್ಟ್ರೀಯ ಹೆದ್ದಾರಿಗಳ ನಿರ್ಮಾಣ ಕಾರ್ಯ ಭರದಿಂದ ಸಾಗಿದ್ದು, ದಿನಕ್ಕೆ ಸುಮಾರು 28.16 ಕಿ.ಮೀ ವೇಗದಲ್ಲಿ 8,169 ಕಿ.ಮೀ ರಾಷ್ಟ್ರೀಯ ಹೆದ್ದಾರಿಗಳನ್ನು ನಿರ್ಮಾಣವಾಗಿದೆ ಎಂದು ಹೇಳಲಾಗಿದೆ. ಇನ್ನು ಇದೇ ವೇಗದಲ್ಲಿ ಮಾರ್ಚ್ 31 ರೊಳಗೆ 11,000 ಕಿ.ಮೀ ನಿರ್ಮಾಣ ಗುರಿಯನ್ನು ದಾಟಲು ಸಾಧ್ಯವಾಗುತ್ತದೆ ಎಂದು ಸಚಿವಾಲಯವು ಭರವಸೆ ಹೊಂದಿದೆ.

Record 534 KM Of National Highways Constructed In A Week: Central Government

ಈ ಅವಧಿಯಲ್ಲಿ (ಏಪ್ರಿಲ್ 2020 ರಿಂದ ಜನವರಿ 15, 2021 ರವರೆಗೆ) ರಸ್ತೆ ಸಾರಿಗೆ ಸಚಿವಾಲಯವು 7,597 ಕಿ.ಮೀ ರಾ. ಹೆದ್ದಾರಿ ನಿರ್ಮಿಸಿದೆ. 2019-20ರಲ್ಲಿ ಇದೇ ಅವಧಿಯಲ್ಲಿ 3,474 ಕಿ.ಮೀ ರಾ. ಹೆದ್ದಾರಿ ನಿರ್ಮಾಣ ಮಾಡಲಾಯಿತು. ಆದರೆ ಈ ವರ್ಷ ಇದರ ಗತಿಯು ದ್ವಿಗುಣಗೊಂಡಿದ್ದು, ದಾಖಲೆಯ ಮಟ್ಟದಲ್ಲಿ ರಾ. ಹೆದ್ದಾರಿ ನಿರ್ಮಾಣಕ್ಕೆ ಮುಂದಾಗಿದ್ದೇವೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ.

English summary
The road ministry on Sunday said that a record 534 km of national highways was constructed in one week, beginning January 8, 2020.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X