ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೋದಿ ಲಾಕ್‌ಡೌನ್-2 ಭಾಷಣ: ದಾಖಲೆ ಮಟ್ಟದಲ್ಲಿ ಜನರ ವೀಕ್ಷಣೆ

|
Google Oneindia Kannada News

ನವದೆಹಲಿ, ಏಪ್ರಿಲ್ 17: ಪ್ರಧಾನಿ ನರೇಂದ್ರ ಮೋದಿಯವರು ಏಪ್ರಿಲ್ 14ರಂದು ದೇಶಾದ್ಯಂತ ಲಾಕ್‌ಡೌನ್ ವಿಸ್ತರಣೆ ಕುರಿತಂತೆ ಮಾಡಿದ್ದ ಭಾಷಣವನ್ನು 20.3 ಕೋಟಿ ಮಂದಿ ವೀಕ್ಷಿಸಿದ್ದಾರೆ ಎಂದು ಬಾರ್ಕ್ ಮಾಹಿತಿ ನೀಡಿದೆ.

ಭಾರತದಲ್ಲಿ ಸಾಂಕ್ರಾಮಿಕ ರೋಗ ಪ್ರಾರಂಭವಾದಾಗಿನಿಂದ ಮೋದಿ ಅವರು ರಾಷ್ಟ್ರವನ್ನುದ್ದೇಶಿಸಿ ನಾಲ್ಕು ಬಾರಿ ಮಾತನಾಡಿದ್ದಾರೆ. ಒಂದು ದಿನದ 'ಜನತಾಕರ್ಫ್ಯೂ, ಲಾಕ್‌ಡೌನ್ ಘೋಷಣೆ, ಚಪ್ಪಾಳೆ ತಟ್ಟುವುದು, ದೀಪ ಬೆಳಗಿಸುವುದುಸೇರಿದಂತೆ ಹಲವು ರೀತಿಯ ಉತ್ತೇಜಿತ ಕರೆ ನೀಡಿದ್ದಾರೆ.

ಕರ್ನಾಟಕದಲ್ಲಿ 8 ಹಾಟ್‌ಸ್ಪಾಟ್‌ ಗುರುತಿಸಿದ ಕೇಂದ್ರ ಸರ್ಕಾರಕರ್ನಾಟಕದಲ್ಲಿ 8 ಹಾಟ್‌ಸ್ಪಾಟ್‌ ಗುರುತಿಸಿದ ಕೇಂದ್ರ ಸರ್ಕಾರ

ಅವರು 21 ದಿನಗಳ ಲಾಕ್‌ಡೌನ್ ಘೋಷಿಸಿದಾಗ ಆ ಕಾರ್ಯಕ್ರಮವನ್ನು ದಾಖಲೆಯ 19.3 ಮಿಲಿಯನ್ ಜನರು ವೀಕ್ಷಿಸಿದ್ದರು.ಕೊರೊನಾ ಹಾವಳಿ ಪ್ರಾರಂಭಕ್ಕೆ ಮುನ್ನಿನ ದಿನಗಳಿಗೆ ಹೋಲಿಸಿದರೆ ಏಪ್ರಿಲ್ 12 ರ ವಾರದಲ್ಲಿ ಒಟ್ಟಾರೆ ಟಿವಿ ಬಳಕೆ ಶೇಕಡಾ 38 ರಷ್ಟು ಏರಿಕೆಯಾಗಿದೆ ಎಂದು ಕೌನ್ಸಿಲ್ ವರದಿ ಮಾಡಿದೆ.

Record 20.3 Crore People Watched Narendra Modis address On Lockdown 2

ಅದರಲ್ಲಿಯೂ ದೂರದರ್ಶನದಲ್ಲಿ ಪ್ರಸಾರವಾಗುತ್ತಿರುವ ರಾಮಾಯಣ ಮತ್ತು ಮಹಾಭಾರತದಂತಹ ಕ್ಲಾಸಿಕ್ ಧಾರಾವಾಹಿಗಳುಖಾಸಗಿ ವಲಯದ ಚಾನೆಲ್‌ಗಳನ್ನು ಮೀರಿ ದೂರದರ್ಶನವನ್ನು ಹೆಚ್ಚು ಜನ ವೀಕ್ಷಿಸುವಂತೆ ಮಾಡಿದೆ.

ಆರೋಗ್ಯ ಸೇತು ಆ್ಯಪ್ ಅನ್ನು ದಾಖಲೆಯ ಸಂಖ್ಯೆಯ ಜನರು ಡೌನ್‌ಲೋಡ್ ಮಾಡಿದ್ದರೂ, ಅವರಲ್ಲಿ ಹತ್ತನೇ ಒಂದು ಭಾಗ ಮಾತ್ರ ಆ್ಯಪ್ ಬಳಸುತ್ತಿದ್ದಾರೆ ಎಂದು ಮಾರುಕಟ್ಟೆ ಸಂಶೋಧನಾ ಸಂಸ್ಥೆ ಎಸಿ ನೀಲ್ಸನ್ ಹೇಳಿದೆ.

ಮಂಗಳವಾರ ಪ್ರಸಾರವಾದ 25 ನಿಮಿಷಗಳ ಭಾಷಣದಲ್ಲಿ ಮೋದಿ ಲಾಕ್‌ಡೌನ್ ಅನ್ನು 19 ದಿನಗಳವರೆಗೆ ವಿಸ್ತರಿಸಿದ್ದು, 199 ಪ್ರಸಾರಕರು ಪ್ರಸಾರ ಮಾಡಿದರು ಮತ್ತು ಸುಮಾರು 4 ಬಿಲಿಯನ್ ವೀಕ್ಷಣೆ ನಿಮಿಷಗಳನ್ನು ಸೃಷ್ಟಿಸಿದ್ದರು. ಇದು ಕೂಡ ಒಂದು ದಾಖಲೆಯಾಗಿದೆ.

English summary
Prime Minister Narendra Modi’s address extending the lockdown by 19 days was watched by a record 203 million across the country on television, exceeding previous records held by him, the BARC said on Thursday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X