India
  • search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆ ರಾಜೀನಾಮೆ ಸಂತಸ ತಂದಿಲ್ಲ: ಬಂಡಾಯ ಶಾಸಕರು

|
Google Oneindia Kannada News

ಮುಂಬೈ, ಜೂನ್ 30: ಮಹಾರಾಷ್ಟ್ರ ಮುಖ್ಯಮಂತ್ರಿ ಸ್ಥಾನಕ್ಕೆ ಉದ್ಧವ್ ಠಾಕ್ರೆ ರಾಜೀನಾಮೆ ನೀಡಿರುವುದು ನಮಗೆ ಸಂತೋಷದ ವಿಷಯವಲ್ಲ ಎಂದು ಏಕನಾಥ್ ಶಿಂಧೆ ಪಾಳೆಯದ ಬಂಡಾಯ ಶಾಸಕ ಶಿವಸೇನೆ ಇಂದು ಹೇಳಿದ್ದಾರೆ.

ಈ ಬಿರುಕು, ಶರದ್ ಪವಾರ್ ಅವರ ನ್ಯಾಶನಲಿಸ್ಟ್ ಕಾಂಗ್ರೆಸ್ ಪಕ್ಷ ಮತ್ತು ಕಾಂಗ್ರೆಸ್ ಜೊತೆಗಿನ ಪಕ್ಷದ ಮೈತ್ರಿಯ ಪತನ ಎಂದು ಹೇಳಿದ್ದಾರೆ. ಮೈತ್ರಿ ಸರ್ಕಾರದ ಪತನದಲ್ಲಿ ಶಿವಸೇನೆ ನಾಯಕ ಸಂಜಯ್ ರಾವುತ್ ಪಾತ್ರವನ್ನು ಒತ್ತಿಹೇಳಿದ್ದಾರೆ. ಪಕ್ಷದ ಮೂಲಗಳ ಪ್ರಕಾರ ಸಂಜಯ್ ರಾವತ್‌ಗೆ ಹೆಚ್ಚು ಪ್ರಾಮುಖ್ಯತೆ ನೀಡುವುದು ಬಂಡಾಯ ನಾಯಕ ಏಕನಾಥ್ ಶಿಂಧೆ ನಿರ್ಧಾರಕ್ಕೆ ಕಾರಣಗಳಲ್ಲಿ ಒಂದು ಎಂದು ಹೇಳಲಾಗಿದೆ.

ಸಿಎಂ ಸ್ಥಾನಕ್ಕೆ ಉದ್ಧವ್ ಠಾಕ್ರೆ ರಾಜೀನಾಮೆ, ಸಂಜಯ್ ರಾವತ್ ಮೊದಲ ಪ್ರತಿಕ್ರಿಯೆ!ಸಿಎಂ ಸ್ಥಾನಕ್ಕೆ ಉದ್ಧವ್ ಠಾಕ್ರೆ ರಾಜೀನಾಮೆ, ಸಂಜಯ್ ರಾವತ್ ಮೊದಲ ಪ್ರತಿಕ್ರಿಯೆ!

ಸಿಎಂ ಆಗಿದ್ದ ಉದ್ಧವ್ ಠಾಕ್ರೆ ನಾವು ಹೇಳಿದ ವಿಷಯಗಳನ್ನು ಗಮನಿಸಲಿಲ್ಲ ಎಂದು ಬಣದ ವಕ್ತಾರ ದೀಪಕ್ ಕೇಸರ್ಕರ್ ಹೇಳಿದ್ದಾರೆ. "ಎನ್‌ಸಿಪಿ ಮತ್ತು ಕಾಂಗ್ರೆಸ್ ವಿರುದ್ಧ ಹೋರಾಡುವಾಗ, ನಮ್ಮ ನಾಯಕನ ಮೇಲೂ ಕೋಪಗೊಂಡಿದ್ದಕ್ಕಾಗಿ ನಮಗೆಲ್ಲ ಬೇಸರವಾಗಿದೆ" ಎಂದಿದ್ದಾರೆ. ಇದಕ್ಕೆಲ್ಲ ಕಾರಣ, ಎನ್‌ಸಿಪಿ ಮತ್ತು ಸಂಜಯ್ ರಾವತ್, "ಕೇಂದ್ರ ಸರ್ಕಾರದ ವಿರುದ್ಧ ಪ್ರತಿದಿನ ಹೇಳಿಕೆಗಳನ್ನು ನೀಡುವುದು ಮತ್ತು ಕೇಂದ್ರ ಮತ್ತು ರಾಜ್ಯದ ನಡುವೆ ಕಂದಕ ಸೃಷ್ಟಿಸುವುದು ಅವರ ಕೆಲಸ" ಎಂದು ಬಂಡಾಯ ಶಾಸಕ ದೀಪಕ್ ಕೇಸರ್ಕರ್ ಆರೋಪಿಸಿದ್ದಾರೆ.

ಕೊನೆಗೂ ಮೈತ್ರಿ ಸರ್ಕಾರ ಕೆಡವಿದ ಬಂಡಾಯ ಶಾಸಕರು

ಕೊನೆಗೂ ಮೈತ್ರಿ ಸರ್ಕಾರ ಕೆಡವಿದ ಬಂಡಾಯ ಶಾಸಕರು

ಶಿಂಧೆ ಪಾಳಯದಲ್ಲಿರುವ 50 ಬಂಡಾಯ ಶಾಸಕರಲ್ಲಿ 40 ಶಾಸಕರು ಶಿವಸೇನೆ ಶಾಸಕರಾಗಿದ್ದಾರೆ. ಬೆಂಬಲ ವಾಪಸ್ ಪಡೆಯುವ ಮೂಲಕ ಮಹಾರಾಷ್ಟ್ರದಲ್ಲಿ ಮಹಾ ಅಘಾಡಿ ವಿಕಾಸ ಸರ್ಕಾರ ಪತನವಾಗಿದೆ.

ಸೈದ್ಧಾಂತಿಕವಾಗಿ ಹೊಂದಿಕೆಯಾಗದ ಕಾಂಗ್ರೆಸ್ ಮತ್ತು ಎನ್‌ಸಿಪಿಯೊಂದಿಗಿನ ಅಸಹಜ ಮೈತ್ರಿಯನ್ನು ಕೈಬಿಡಲು ಮತ್ತು ಬಿಜೆಪಿಯೊಂದಿಗೆ ಸೇರಿ ಸರ್ಕಾರ ರಚಿಸಲು ಬಯಸುತ್ತಾರೆ ಎಂದು ಬಣ ವಾದಿಸಿದೆ.

ಬಹುಮತ ಸಾಬೀತಿಗೂ ಮುನ್ನವೇ ಉದ್ಧವ್ ಠಾಕ್ರೆ ರಾಜೀನಾಮೆ

ಬಹುಮತ ಸಾಬೀತಿಗೂ ಮುನ್ನವೇ ಉದ್ಧವ್ ಠಾಕ್ರೆ ರಾಜೀನಾಮೆ

ಎಂಟು ದಿನಗಳ ರಾಜಕೀಯ ದೊಂಬರಾಟದ ನಂತರ, ರಾಜ್ಯಪಾಲರ ಆದೇಶದಂತೆ ಗುರುವಾರ ಅವರ ಸರ್ಕಾರವು ವಿಶ್ವಾಸಮತ ಪರೀಕ್ಷೆಯನ್ನು ತೆಗೆದುಕೊಳ್ಳಬೇಕು ಎಂದು ಸುಪ್ರೀಂ ಕೋರ್ಟ್ ತೀರ್ಪು ನೀಡಿದಾಗ ಉದ್ದವ್ ಠಾಕ್ರೆ ಬುಧವಾರ ಸಂಜೆ ಸಿಎಂ ಸ್ಥಾನಕ್ಕೆ ರಾಜಿನಾಮೆ ನೀಡಿದರು.

ಏಕನಾಥ್ ಶಿಂಧೆ ಬಂಡಾಯದ ನಂತರ ಶಿವಸೇನೆ ಶಾಸಕರ ಸಂಖ್ಯೆ 15ಕ್ಕೆ ಕುಸಿದಿದೆ. ಬಹುಮತ ಪರೀಕ್ಷೆಯನ್ನು ನಿಲ್ಲಿಸುವಂತೆ ನ್ಯಾಯಾಲಯವನ್ನು ಕೋರಿದ್ದರು. ಆದರೆ ಸುಪ್ರೀಂಕೋರ್ಟ್ ಇದನ್ನು ನಿರಾಕರಿಸಿತ್ತು.

ರಾಜೀನಾಮೆಯ ಭಾವುಕ ಭಾಷಣ; ಉದ್ಧವ್ ಠಾಕ್ರೆ ಹೇಳಿದ್ದೇನು?ರಾಜೀನಾಮೆಯ ಭಾವುಕ ಭಾಷಣ; ಉದ್ಧವ್ ಠಾಕ್ರೆ ಹೇಳಿದ್ದೇನು?

ಕಾಂಗ್ರೆಸ್, ಎನ್‌ಸಿಪಿ ಮೇಲೆ ಬಂಡಾಯ ಶಾಸಕರ ಕಿಡಿ

ಕಾಂಗ್ರೆಸ್, ಎನ್‌ಸಿಪಿ ಮೇಲೆ ಬಂಡಾಯ ಶಾಸಕರ ಕಿಡಿ

"ಕಾಂಗ್ರೆಸ್ ಮತ್ತು ಎನ್‌ಸಿಪಿಯಿಂದಾಗಿ ಅನೇಕ ಶಾಸಕರು, ಸಂಸದರು ಕೋಪಗೊಂಡಿದ್ದಾರೆ" ಎಂದು ಕೇಸರ್ಕರ್ ಹೇಳಿದ್ದಾರೆ. ಎನ್‌ಸಿಪಿಯ ರಾಜ್ಯಾಧ್ಯಕ್ಷರು ನಮ್ಮ ಕ್ಷೇತ್ರಕ್ಕೆ ಹೋಗಿ ಅವರವರ ಹೆಸರುಗಳನ್ನು ಘೋಷಿಸುತ್ತಿದ್ದರು. ನಮ್ಮಿಂದಲೇ ಎನ್‌ಸಿಪಿ ಮತ್ತು ಕಾಂಗ್ರೆಸ್‌ನವರು ಅಧಿಕಾರಕ್ಕೆ ಬಂದರು. ಆದರೆ ನಮ್ಮ ಸರ್ಕಾರದಲ್ಲಿ ನಮಗೆ ಪ್ರಾತಿನಿಧ್ಯ ದೊರೆಯುತ್ತಿರಲಿಲ್ಲ. ಠಾಕ್ರೆ ನಮ್ಮ ಮಾತಿಗೆ ಬೆಲೆ ನೀಡುತ್ತಿರಲಿಲ್ಲ ಎಂದು ಆರೋಪಿಸಿದ್ದಾರೆ.

ಪ್ರತಿದಿನ ಸಂಜಯ್ ರಾವತ್ ಕೇಂದ್ರ ಸರ್ಕಾರದ ವಿರುದ್ಧ ಟೀಕೆ ಮಾಡುತ್ತಿದ್ದರು. ಇದರಿಂದ ಜನ ಅಸಮಾಧಾನಗೊಂಡಿದ್ದರು. ರಾವತ್‌ನಂತಹ ವಕ್ತಾರರು ಯಾವುದೇ ಪಕ್ಷಕ್ಕೆ ಬರಬಾರದು ಎಂದು ನಾವು ಬಯಸುತ್ತೇವೆ ಎಂದು ಕೇಸರ್ಕರ್ ಹೇಳಿದರು.

ಮಹಾರಾಷ್ಟ್ರದಲ್ಲಿ ಬಿಜೆಪಿ ಸರ್ಕಾರ

ಮಹಾರಾಷ್ಟ್ರದಲ್ಲಿ ಬಿಜೆಪಿ ಸರ್ಕಾರ

ಆರಂಭದಲ್ಲಿ ಸೂರತ್‌ನಲ್ಲಿ ಮತ್ತು ನಂತರ ಗುವಾಹಟಿಯಲ್ಲಿ ಬೀಡು ಬಿಟ್ಟಿದ್ದ ಬಂಡಾಯ ಶಾಸಕರು, ಬಹುದಿನದ ಬಹುಮತ ಪರೀಕ್ಷೆಯ ಸಸ್ಪೆನ್ಸ್ ನಡುವೆ ಗೋವಾಕ್ಕೆ ತೆರಳಿದ್ದಾರೆ. ಏಕನಾಥ್ ಶಿಂಧೆ ಬಣವು ನ್ಯಾಯಾಲಯದಲ್ಲಿ ನಿಜವಾದ ಶಿವಸೇನೆ ಎಂದು ವಾದಿಸಿದೆ ಮತ್ತು ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಳ್ಳಲು ನಿರ್ಧರಿಸಿದೆ.

ಉದ್ದವ್ ಠಾಕ್ರೆ ರಾಜೀನಾಮೆಯೊಂದಿಗೆ, ಬಹುಮತ ಪರೀಕ್ಷೆಯು ಈಗ ಅನೂರ್ಜಿತವಾಗಿದೆ. ಬಿಜೆಪಿಯ ದೇವೇಂದ್ರ ಫಡ್ನವೀಸ್ ಸರ್ಕಾರ ರಚನೆಗೆ ಹಕ್ಕು ಸಾಧಿಸಲಿದ್ದಾರೆ. ಈ ಮೂಲಕ ಮಹಾರಾಷ್ಟ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲಿದೆ.

English summary
Shiv Sena rebel MLA from Eknath Shinde camp said that Uddhav Thackeray's resignation as Maharashtra Chief Minister is not a matter of happiness for us.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X