ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವರ್ಷದಲ್ಲಿ 7 ಚಂಡಮಾರುತಗಳ ಸೃಷ್ಟಿಗೆ ಕಾರಣವೇನು?

|
Google Oneindia Kannada News

ಬೆಂಗಳೂರು, ನವೆಂಬರ್ 13: ಈಗಾಗಲೇ ಏಳು ಚಂಡಮಾರುತಗಳು ಹಲವು ರಾಜ್ಯಗಳಿಗೆ ಬಂದು ಅಪ್ಪಳಿಸಿವೆ. ಕಳೆದ 10 ವರ್ಷಗಳಲ್ಲಿ ಸುಮಾರು ಶೇ.11ರಷ್ಟು ಸೈಕ್ಲೋನ್ ಪ್ರಮಾಣ ಏರಿಕೆಯಾಗಿದೆ. ಐದು ವರ್ಷಗಳಲ್ಲಿ ಶೇ.32ರಷ್ಟು ಸೈಕ್ಲೋನ್‌ಗಳ ಪ್ರಮಾಣದಲ್ಲಿ ಏರಿಕೆಯಾಗಿದೆ.

2018ರಿಂದ 2019ರವರೆಗೆ ಕೇವಲ ಒಂದು ವರ್ಷದ ಅವಧಿಯಲ್ಲಿ ಬಂಗಾಳಕೊಲ್ಲಿಯಲ್ಲಿ ಏಳು ಚಂಡಮಾರುತಗಳು ಸೃಷ್ಟಿಯಾಗಿ ಅನಾಹುತವನ್ನುಂಟು ಮಾಡಿತ್ತು. ಆ ಏಳು ಸೈಕ್ಲೋನ್‌ಗಳಲ್ಲಿ ಕೆಲವು ಚಂಡಮಾರುತಗಳಿಂದ ಹೆಚ್ಚು ಮಳೆಯಾಗಿತ್ತು. ಇನ್ನುಳಿದ ಚಂಡಮಾರುತಗಳು ದುರ್ಬಲ ಚಂಡಮಾರುತ ಎಂದು ಕರೆಸಿಕೊಂಡವು.

ದುರ್ಬಲ ಸೈಕ್ಲೋನ್‌ಗಳು ಯಾವುವು?

ದುರ್ಬಲ ಸೈಕ್ಲೋನ್‌ಗಳು ಯಾವುವು?

ಮಳೆಯನ್ನು ತರಿಸುವಲ್ಲಿ ನಾಲ್ಕು ಚಂಡಮಾರುತಗಳು ವಿಫಲವಾಗಿದ್ದವು. ವಾಯು, ಕ್ಯಾರ್, ಮಹಾ ಚಂಡಮಾರುತಗಳು ಕರಾವಳಿ ತಲುಪುವ ಮುನ್ನವೇ ದುರ್ಬಲವಾಗಿತ್ತು, ಇನ್ನು ಪೂಬಕ್ ಕೂಡ ಮಳೆಯನ್ನು ತರಿಸುವಲ್ಲಿ ವಿಫಲವಾಗಿತ್ತು. ಆದರೆ ಸೈಕ್ಲೋನ್ ಫೆನಿ ಹಾಗೂ ಮಹಾ ಚಂಡಮಾರುತಗಳು ಸ್ವಲ್ಪ ಮಟ್ಟಿಗೆ ಮಳೆಯನ್ನು ತರುವಲ್ಲಿ ಹಾಗೂ ಆಸ್ತಿಪಾಸ್ತಿಗಳ ನಷ್ಟಕ್ಕೆ ಕಾರಣವಾಗಿತ್ತು.

ವರ್ಷದ 7ನೇ ಸೈಕ್ಲೋನ್ ಬುಲ್ ಬುಲ್: ಎಷ್ಟು ಅಪಾಯಕಾರಿ, ಎಲ್ಲೆಲ್ಲಿ ಮಳೆ?ವರ್ಷದ 7ನೇ ಸೈಕ್ಲೋನ್ ಬುಲ್ ಬುಲ್: ಎಷ್ಟು ಅಪಾಯಕಾರಿ, ಎಲ್ಲೆಲ್ಲಿ ಮಳೆ?

ಈ ಬಾರಿ ಅರಬ್ಬಿ ಸಮುದ್ರದಲ್ಲಿ ನಾಲ್ಕು ಚಂಡಮಾರುತ

ಈ ಬಾರಿ ಅರಬ್ಬಿ ಸಮುದ್ರದಲ್ಲಿ ನಾಲ್ಕು ಚಂಡಮಾರುತ

ಈ ಬಾರಿ ಅರಬ್ಬಿ ಸಮುದ್ರದಲ್ಲಿ ನಾಲ್ಕು ಚಂಡಮಾರುತಗಳು ಸೃಷ್ಟಿಯಾಗಿದ್ದವು. 1902ರ ಬಳಿಕ ಈ ವರ್ಷವೇ ಇಷ್ಟು ಚಂಡಮಾರುತವನ್ನು ಈ ಸಮುದ್ರ ಕಂಡಿದೆ. ಆದರೆ ಬಂಗಾಳಕೊಲ್ಲಿಯಲ್ಲಿ ಸೃಷ್ಟಿಯಾಗಿದ್ದ ಚಂಡಮಾರುತ ಹೆಚ್ಚು ಪ್ರಬಲವಾಗಿತ್ತು.

ಬಂಗಾಳಕೊಲ್ಲಿಯಲ್ಲಿ ಚಂಡಮಾರುತ ಆಕ್ಟೀವ್

ಬಂಗಾಳಕೊಲ್ಲಿಯಲ್ಲಿ ಚಂಡಮಾರುತ ಆಕ್ಟೀವ್

ಬಂಗಾಳಕೊಲ್ಲಿಯಲ್ಲಿ ಚಂಡಮಾರುತ ಆಕ್ಟೀವ್ ಆಗಿದೆ. ಚಂಡಮಾರುತವು ಬಾಂಗ್ಲಾದೇಶ ತಿರುಗಿದೆ. ಬಾಂಗ್ಲಾದೇಶ, ಮಯನ್ಮಾರ್ ಹಾಗೆಯೇ ಯಮನ್, ಓಮನ್, ಸೋಮಾಲಿಯಾ, ಪಾಕಿಸ್ತಾನ, ಗುಜರಾತ್‌ನಿಂದ ಮಹಾರಾಷ್ಟ್ರ ಕರಾವಳಿಗೆ ತಲುಪಲಿದೆ.

ಹೆಚ್ಚು ಸೈಕ್ಲೋನ್ ಸೃಷ್ಟಿಗೆ ಕಾರಣವೇನು?

ಹೆಚ್ಚು ಸೈಕ್ಲೋನ್ ಸೃಷ್ಟಿಗೆ ಕಾರಣವೇನು?

ಹವಾಮಾನ ಬದಲಾವಣೆ, ಜಾಗತಿಕ ತಾಪಮಾನ ಹೆಚ್ಚಳವೇ ಬಂಗಾಳಕೊಲ್ಲಿ, ಅರಬ್ಬಿ ಸಮುದ್ರದಲ್ಲಿ ಚಂಡಮಾರುತಗಳ ಸಂಖ್ಯೆ ಏರಿಕೆಗೆ ಕಾರಣವಾಗಿದೆ.ಬುಲ್ ಬುಲ್ ಚಂಡಮಾರುತವು ಅಷ್ಟಾಗಿ ತನ್ನ ಪ್ರಭಾವವನ್ನು ತೋರಿಸಿಲ್ಲ. ಗುಜರಾತ್, ಮಹಾರಾಷ್ಟ್ರಿ, ಒಡಿಶಾದಲ್ಲಿ ತಕ್ಕ ಮಟ್ಟಿಗೆ ಮಳೆಯನ್ನು ತರಿಸಿದೆ.

English summary
A recent check on the data reveals that the number of Cyclones as well as Severe Cyclones in Arabian Sea as well as the Bay of Bengal have increased by almost 11 percent in the last one decade.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X