ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತದಲ್ಲಿ ಸಾವಿನ ಮನೆ ಸೇರುತ್ತಿರುವ ಕೊರೊನಾವೈರಸ್ ಸೋಂಕಿತರೆಷ್ಟು?

|
Google Oneindia Kannada News

ನವದೆಹಲಿ, ಜೂನ್,17: ಭಾರತದಲ್ಲಿ ಕೊರೊನಾವೈರಸ್ ಸೋಂಕು ಮಗ್ಗಲು ಬದಲಿಸುತ್ತಿರುವ ಲಕ್ಷಣಗಳು ಗೋಚರಿಸುತ್ತಿವೆ. ಕೊವಿಡ್-19 ಸೋಂಕಿನಿಂದ ಗುಣಮುಖ ಪ್ರಕರಣಗಳು ಹೆಚ್ಚಾಗುತ್ತಿರುವುದು ಭಾರತೀಯರಿಗೆ ಕೊಂಚ ಸಮಾಧಾನ ನೀಡಿತ್ತು. ಆದರೆ ಇತ್ತೀಚಿನ ಅಂಕಿ-ಅಂಶಗಳು ನಮ್ಮ ವಿಶ್ವಾಸಕ್ಕೆ ಭಾರಿ ಹೊಡೆತ ಕೊಡುವಂತೆ ಕಾಣುತ್ತಿವೆ.

ಭಾರತದಲ್ಲಿ ಕೊರೊನಾವೈರಸ್ ಸೋಂಕಿತರ ಸಾವಿನ ಪ್ರಮಾಣದಲ್ಲಿ ಗಣನೀಯ ಏರಿಕೆ ಕಂಡು ಬಂದಿರುವುದು ಸ್ಪಷ್ಟವಾಗಿ ಗೋಚರಿಸುತ್ತಿದೆ. ಮಂಗಳವಾರ ಮತ್ತು ಬುಧವಾರ ದೇಶದಲ್ಲಿ ಮಹಾಮಾರಿಗೆ 2,000ಕ್ಕಿಂತ ಹೆಚ್ಚು ಮಂದಿ ಪ್ರಾಣ ಬಿಟ್ಟಿದ್ದಾರೆ.

ಭಾರತದಲ್ಲಿ 3.30 ಲಕ್ಷ ಮಂದಿಗೆ ಕೊರೊನಾವೈರಸ್ ಅಂಟಿದರೂ ಡೋಂಟ್ ವರಿ!ಭಾರತದಲ್ಲಿ 3.30 ಲಕ್ಷ ಮಂದಿಗೆ ಕೊರೊನಾವೈರಸ್ ಅಂಟಿದರೂ ಡೋಂಟ್ ವರಿ!

ಎರಡು ದಿನದಲ್ಲಿ ಒಟ್ಟು 2,000ಕ್ಕಿಂತ ಹೆಚ್ಚು ಮಂದಿ ಕೊವಿಡ್-19ಗೆ ಬಲಿಯಾಗುತ್ತಿದ್ದರೆ ಈ ಪೈಕಿ ಮಹಾರಾಷ್ಟ್ರದ ಮುಂಬೈ ನಗರವೊಂದರಲ್ಲೇ 1000ಕ್ಕಿಂತ ಹೆಚ್ಚು ಮಂದಿ ಪ್ರಾಣ ಬಿಟ್ಟಿರುವುದು ಮತ್ತಷ್ಟು ಆತಂಕವನ್ನು ಹೆಚ್ಚಿಸಿದೆ. ಬುಧವಾರ ಭಾರತದಲ್ಲಿ ಕೊರೊನಾವೈರಸ್ ಅಟ್ಟಹಾಸದ ಕುರಿತು ಅಂಕಿ-ಅಂಶಗಳ ಸಹಿತ ವಿಸ್ತೃತ ವರದಿ ಇಲ್ಲಿದೆ ನೋಡಿ.

ಕೊರೊನಾವೈರಸ್ ಸೋಂಕು ಮತ್ತು ಸಾವಿನ ಸಂಖ್ಯೆ

ಕೊರೊನಾವೈರಸ್ ಸೋಂಕು ಮತ್ತು ಸಾವಿನ ಸಂಖ್ಯೆ

ಕಳೆದ 24 ಗಂಟೆಗಳಲ್ಲಿ ಕೊರೊನಾವೈರಸ್ ಸೋಂಕಿನಿಂದ ಭಾರತದಲ್ಲಿ ಬರೋಬ್ಬರಿ 2003 ಮಂದಿ ಉಸಿರು ಚೆಲ್ಲಿದ್ದಾರೆ. ದೇಶಾದ್ಯಂತ ಒಂದೇ ದಿನ 10,974 ಕೊರೊನಾ ವೈರಸ್ ಸೋಂಕಿತ ಪ್ರಕರಣ ಪತ್ತೆಯಾಗಿವೆ. ಇದುವರೆಗೂ ಒಟ್ಟು 3,54,065 ಮಂದಿಗೆ ಸೋಂಕು ಅಂಟಿಕೊಂಡಿದ್ದು, ಈ ಪೈಕಿ 1,86,935 ಸೋಂಕಿತರು ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ. 1,55,227 ಸೋಂಕಿತರಿಗೆ ಚಿಕಿತ್ಸೆ ಮುಂದುವರಿಸಲಾಗುತ್ತಿದೆ.

'ಮಹಾರಾಷ್ಟ್ರದಲ್ಲಿ' ಕೊರೊನಾವೈರಸ್ ಮರಣಮೃದಂಗ

'ಮಹಾರಾಷ್ಟ್ರದಲ್ಲಿ' ಕೊರೊನಾವೈರಸ್ ಮರಣಮೃದಂಗ

ಒಂದೇ ದಿನ 2003 ಮಂದಿ ಕೊರೊನಾವೈರಸ್ ಮಹಾಮಾರಿಗೆ ಬಲಿಯಾಗಿದ್ದು, ಮಹಾರಾಷ್ಟ್ರವೊಂದರಲ್ಲೇ ಬರೋಬ್ಬರಿ 1409 ಜನರು ಮಹಾಮಾರಿಯ ಸುಳಿಗೆ ಸಿಲುಕಿ ಉಸಿರು ನಿಲ್ಲಿಸಿದ್ದಾರೆ. ಇದರಿಂದ ರಾಜ್ಯದಲ್ಲಿ ಕೊರೊನಾವೈರಸ್ ಗೆ ಬಲಿಯಾದವರ ಸಂಖ್ಯೆ 5537ಕ್ಕೆ ಏರಿಕೆಯಾಗಿದೆ. ಮುಂಬೈನಲ್ಲಿ 3167, ಥಾಣೆಯಲ್ಲಿ 641 ಹಾಗೂ ಪೂಣೆಯಲ್ಲಿ 588 ಮಂದಿ ರಕ್ಕಸ ರೋಗದಿಂದ ಪ್ರಾಣ ಬಿಟ್ಟಿದ್ದಾರೆ. ಉಳಿದಂತೆ ದೆಹಲಿಯಲ್ಲಿ 437, ತಮಿಳುನಾಡಿನಲ್ಲಿ 49 ಹಾಗೂ ಹರಿಯಾಣದಲ್ಲಿ 18 ಜನರು ಕೊವಿಡ್-19ನಿಂದ ಸಾವನ್ನಪ್ಪಿದ್ದಾರೆ.

ಕೊರೊನಾವೈರಸ್ ಗೆ ನಲುಗಿದ ಟಾಪ್-10 ರಾಜ್ಯಗಳು

ಕೊರೊನಾವೈರಸ್ ಗೆ ನಲುಗಿದ ಟಾಪ್-10 ರಾಜ್ಯಗಳು

ತಮಿಳುನಾಡಿನಲ್ಲೂ ಕಳೆದ ಸೋಮವಾರ ಕೊರೊನಾವೈರಸ್ ಗೆ 44 ಹಾಗೂ ಮಂಗಳವಾರ 49 ಮಂದಿ ಪ್ರಾಣ ಬಿಟ್ಟಿದ್ದಾರೆ. ಹೀಗೆ ಪ್ರತಿನಿತ್ಯ ಕನಿಷ್ಠ 10 ರಿಂದ 15 ಜನರನ್ನು ಬಲೆ ಪಡೆಯುತ್ತಿರುವ ಹಾಗೂ ಅತಿಹೆಚ್ಚು ಕೊರೊನಾವೈರಸ್ ಸೋಂಕಿತರಿಂದ ತತ್ತರಿಸಿದ ಭಾರತದ ಟಾಪ್-10 ರಾಜ್ಯಗಳ ಪಟ್ಟಿ ಮತ್ತು ಅಂಕಿ-ಅಂಶಗಳ ವಿವರ ಇಲ್ಲಿದೆ.

ರಾಜ್ಯ ಒಟ್ಟು ಪ್ರಕರಣ ಹೊಸ ಪ್ರಕರಣ ಗುಣಮುಖ ಪ್ರಕರಣ ಸಾವಿನ ಪ್ರಕರಣ
ಮಹಾರಾಷ್ಟ್ರ 113,445 2,701 57,851 5,537
ತಮಿಳುನಾಡು 48,049 1,515 26,782 528
ನವದೆಹಲಿ 44,688 1,859 16,500 1,837
ಗುಜರಾತ್ 24,628 524 17,090 1,534
ಉತ್ತರಪ್ರದೇಶ 14,598 507 8,904 535
ರಾಜಸ್ಥಾನ 13,103 235 9,849 308
ಪಶ್ಚಿಮ ಬಂಗಾಳ 11,909 415 6,028 495
ಮಧ್ಯ ಪ್ರದೇಶ 11,069 134 8,152 476
ಹರಿಯಾಣ 8,272 550 3,748 118
ಕರ್ನಾಟಕ 7,530 317 4,456 98
ಭಾರತದಲ್ಲಿ ಕೊರೊನಾವೈರಸ್ ನಿಂದ ಮೃತಪಟ್ಟವರ ಸಂಖ್ಯೆ ಏರಿಕೆ

ಭಾರತದಲ್ಲಿ ಕೊರೊನಾವೈರಸ್ ನಿಂದ ಮೃತಪಟ್ಟವರ ಸಂಖ್ಯೆ ಏರಿಕೆ

ಭಾರತದಲ್ಲಿ ನಿಧಾನಗತಿಯಲ್ಲಿ ಕೊರೊನಾವೈರ್ ಸೋಂಕಿತರ ಸಾವಿನ ಪ್ರಮಾಣದಲ್ಲಿ ಏರಿಕೆ ಕಂಡು ಬರುತ್ತಿದೆ. ಕೊವಿಡ್-19 ಸೋಂಕಿತರ ಸಾವಿನ ಪ್ರಮಾಣ ಜೂನ್.03ರಿಂದ ಈಚೆಗೆ ಶೇ.2.8ರಿಂದ 3.36ಕ್ಕೆ ಏರಿಕೆಯಾಗಿದೆ. ಜಾಗತಿಕ ಮಟ್ಟದಲ್ಲಿ ಕೊರೊನಾವೈರಸ್ ಸೋಂಕಿತರ ಪೈಕಿ ಶೇ.5ರಷ್ಟು ಜನರು ಮಹಾಮಾರಿಗೆ ಬಲಿಯಾಗುತ್ತಿದ್ದಾರೆ. ಭಾರತೀಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಅಂಕಿ-ಅಂಶಗಳ ಪ್ರಕಾರ ಕೊರೊನಾವೈರಸ್ ಸೋಂಕಿತರ ಪೈಕಿ ಶೇ.52.8ರಷ್ಟು ಮಂದಿ ಗುಣಮುಖರಾಗಿದ್ದಾರೆ. ಒಟ್ಟು ಸೋಂಕಿತರ ಪೈಕಿ ಗುಣಮುಖರಾಗಿ ಆಸ್ಪತ್ರೆಗಳಿಂದ ಡಿಸ್ಚಾರ್ಜ್ ಆಗಿರುವವರ ಸಂಖ್ಯೆಯನ್ನಷ್ಟೇ ಇದು ಒಳಗೊಂಡಿದೆ.

English summary
How Coronavirus Death rate Spike In India. Here Complete Story About Number Of Cases And Deaths In india.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X