ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬುರ್ಖಾ ವಿವಾದ ಹುಟ್ಟುಹಾಕಿದ ದಿಗ್ವಿಜಯ್ ಸಿಂಗ್!

|
Google Oneindia Kannada News

ಮದ್ಯಪ್ರದೇಶ, ಸೆ.25 : ಎಐಸಿಸಿ ಪ್ರಧಾನ ಕಾರ್ಯದರ್ಶಿ ದಿಗ್ವಿಜಯ್ ಸಿಂಗ್ ಮತ್ತೊಂದು ವಿವಾದಾತ್ಮಹ ಹೇಳಿಕೆ ನೀಡಿದ್ದಾರೆ. ಬುಧವಾರ ಭೂಪಾಲ್ ನಲ್ಲಿ ನಡೆಯುತ್ತಿರುವ ನರೇಂದ್ರ ಮೋದಿ ಸಮಾವೇಶಕ್ಕೆ ಬಿಜೆಪಿ ಬುರ್ಖಾ ಖರೀದಿಸಲು 42 ಲಕ್ಷ ರೂ.ಗಳನ್ನು ರಿಯಲ್ ಎಸ್ಟೇಟ್ ಕಂಪನಿಗಳಿಂದ ಪಡೆದಿದೆ ಎಂದು ಆರೋಪಿಸಿದ್ದಾರೆ.

ನರೇಂದ್ರ ಮೋದಿ ಸಮಾವೇಶದಲ್ಲಿ ಭಾಗವಹಿಸುವ ಮಹಿಳೆಯರಿಗಾಗಿ 10,000 ಬುರ್ಖಾಗಳನ್ನು ರಾಜ್ಯ ಬಿಜೆಪಿ ಖರೀದಿಸಿದೆ. ಇದಕ್ಕಾಗಿ 42 ಲಕ್ಷ ರೂ.ಗಳನ್ನು ರಿಯಲ್ ಎಸ್ಟೇಟ್ ಕಂಪನಿಯೊಂದು ಪಾವತಿ ಮಾಡಿದೆ ಎಂದು ಹೇಳಿದ್ದಾರೆ.

digvijaya and modi

ಇಂಧೋರ್ ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ, ಬುರ್ಖಾ ಖರೀದಿಸಿರುವ ಬಿಲ್ ಪ್ರದರ್ಶಿಸಿರುವ ಅವರು, ಸ್ಥಳೀಯ ಟೈಲರ್ ವೊಬ್ಬರಿಗೆ ದಿಲೀಪ್ ಸಿಂಗ್ ಸುರ್ಯವಂಶಿ ಎಂಬ ರಿಯಲ್ ಎಸ್ಟೇಟ್ ಉದ್ಯಮಿ, ಬುರ್ಖಾ ಖರೀದಿಗಾಗಿ 42 ಲಕ್ಷ ಹಣ ನೀಡಿದ್ದಾರೆ ಎಂದು ಆರೋಪಿಸಿದ್ದಾರೆ.

ಆದರೆ, ದಿಲೀಪ್ ಈ ಆರೋಪವನ್ನು ನಿರಾಕರಿಸಿದ್ದಾರೆ. ನಮ್ಮ ಕಂಪನಿ ಬುರ್ಖಾ ಖರೀದಿಸಲು ಯಾವ ಟೈಲರ್ ಗಳಿಗೂ ಹಣ ನೀಡಿಲ್ಲ. ಇದೊಂದು ನಕಲಿ ಬಿಲ್ ಎಂದು ಸ್ಪಷ್ಟನೆ ನೀಡಿದ್ದಾರೆ. ಬುರ್ಖಾ ಖರೀದಿಸಿದ್ದಾರೆ ಎಂದು ಆರೋಪಿಲಾದ ಜೀನತ್ ಟೈಲರ್ ಸಹ ಬುರ್ಖಾ ಮಾರಾಟ ಮಾಡಲಾಗಿದೆ ಎಂಬ ಆರೋಪ ತಳ್ಳಿ ಹಾಕಿದೆ.

ಮದ್ಯಪ್ರದೇಶ ಬಿಜೆಪಿ ಘಟಕ ಸಹ ದಿಗ್ವಿಜಯ್ ಸಿಂಗ್ ಆರೋಪವನ್ನು ತಳ್ಳಿ ಹಾಕಿದೆ. ಕಾಂಗ್ರೆಸ್ ಈ ನಕಲಿ ಬಿಲ್ ಗಳನ್ನು ಸೃಷ್ಟಿಸಿದೆ ಎಂದು ಹೇಳಿದೆ. ಈ ವಿವಾದದ ಕುರಿತು ಟೈಲರ್ ಮತ್ತು ರಾಜ್ಯ ಬಿಜೆಪಿ ಘಟಕ ಇನ್ಸ್ ಪೆಕ್ಟರ್ ಜನರಲ್ ಗೆ ದೂರು ನೀಡಿದ್ದು, ಸೂಕ್ತ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದೆ.

ವ್ಯಕ್ತಿಯೊಬ್ಬರು ತಮಗೆ ಸರ್ಕಾರಿ ಟೆಂಡರ್ ದೊರಕಿದ್ದು, 10,000 ಬುರ್ಖಾ ಬೇಕಾಗಿದೆ ಎಂದು ಕೊಟೇಷನ್ ಕೇಳಿದ್ದರು. ನಾವು ಅದನ್ನು ಅವರಿಗೆ ನೀಡಿದೆವು, ಅದನ್ನು ಬಿಲ್ ಎಂದು ಕೆಲವರು ಬಿಲ್ ಎಂದು ಪತ್ರಿಕಾಗೋಷ್ಠಿಯಲ್ಲಿ ಬಿಡುಗಡೆ ಮಾಡಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.

ನರೇಂದ್ರ ಮೋದಿ ವಿರುದ್ಧ ಆರೋಪಗಳನ್ನು ಮಾಡುವ ದಿಗ್ವಿಜಯ್ ಸಿಂಗ್ ಮಂಗಳವಾರ ಮಾಡಿರುವ ಆರೋಪಗಳ ಸತ್ಯಾಸತ್ಯತೆ ತನಿಖೆ ನಂತರ ತಿಳಿದು ಬರಲಿದೆ. ಬುಧವಾರ ಭೂಪಾಲ್ ನಲ್ಲಿ ನರೇಂದ್ರ ಮೋದಿ ಸಮಾವೇಶ ನಡೆಯುತ್ತಿದ್ದು, ಅಡ್ವಾಣಿ ಮತ್ತು ಮೋದಿ ಒಂದೇ ವೇದಿಕೆ ಹಂಚಿಕೊಂಡಿದ್ದಾರೆ.

English summary
Congress general secretary Digvijaya Singh created a storm with a claim that the Bharatiya Janata Party (BJP) had got 10,000 burqas stitched for Narendra Modi's meeting in Bhopal on Wednesday, Sep 25 for which a real estate company had paid Rs 42 lakh to a local tailor.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X