ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಕ್ರಮ ಹಣ ನನ್ನಲ್ಲಿದ್ದರೆ ಜೀವಮಾನವಿಡಿ ಸೆರೆಯಲ್ಲಿರುತ್ತೇನೆ

By Ashwath
|
Google Oneindia Kannada News

ನವ ದೆಹಲಿ , ಮೇ 4: ಅಕ್ರಮವಾಗಿ ಸಂಪಾದಿಸಿದ ಹಣ ನಿಜಕ್ಕೂ ನನ್ನಲ್ಲಿದ್ದಾರೆ, ಜೀವಮಾನವಿಡಿ ಸೆರವಾಸ ಅನುಭವಿಸಿಲು ಸಿದ್ದ ಎಂದು 2ಜಿ ಸ್ಪೆಕ್ಟ್ರಂ ಹಗರಣದ ಆರೋಪಿ, ದೂರ ಸಂಪರ್ಕ ಖಾತೆಯ ಮಾಜಿ ಸಚಿವ ಎ.ರಾಜಾ ಹೇಳಿದ್ದಾರೆ.

ಇಂಡಿಯಾ ಟಿವಿ ನಡೆಸಿದ ಸಂದರ್ಶ‌ನದಲ್ಲಿ 2ಜಿ ಹಗರಣಕ್ಕೆ ಸಂಬಂಧಿಸಿದ ಪ್ರಶ್ನೆಗೆ ಉತ್ತರಿಸುತ್ತಾ ಎ. ರಾಜ ಈ ಹೇಳಿಕೆಯನ್ನು ನೀಡಿದ್ದಾರೆ.

2011 ರಲ್ಲಿ ಆಂಗ್ಲ ದಿನಪತ್ರಿಕೆಯೊಂದು ವಿದೇಶದಲ್ಲಿ ನಾನು ಮೂರು ಸಾವಿರ ಕೋಟಿ ಕಳ್ಳ ಹಣ ಇಟ್ಟಿದ್ದೇನೆ ಎಂದು ವರದಿ ಮಾಡಿತ್ತು. ಆ ಸುದ್ದಿ ಪ್ರಕಟವಾದ ದಿನವೇ ನಾನು ನ್ಯಾಯಾಧೀಶರ ಬಳಿ ತೆರಳಿ ಈ ವರದಿ ಬಗ್ಗೆ ಮಾತನಾಡಿದ್ದೇನೆ. ಒಂದು ವೇಳೆ ಆದಾಯ ತೆರಿಗೆ ಇಲಾಖೆ, ಜಾರಿ ನಿರ್ದೇಶನಾಲಯ, ಸಿಬಿಐ ತನಿಖೆಯಲ್ಲಿ ನಾನು ಒಂದು ರೂಪಾಯಿ ಅಥವಾ ಒಂದು ಡಾಲರ್‌ ಹಣವನ್ನು ಸ್ವೀಕರಿಸಿದ್ದೇನೆ ಎಂದು ಸಾಬೀತಾದಲ್ಲಿ ನಾನು ಇಡೀ ಜೀವಮಾನವನ್ನು ಜೈಲಿನಲ್ಲಿ ಕಳೆಯುವುದಾಗಿ ಹೇಳಿದ್ದಾರೆ.[2ಜಿ ಹಗರಣದಲ್ಲಿ ಕರುಣಾನಿಧಿ ಕುಟುಂಬಕ್ಕೆ ಸಿಕ್ಕಿದ್ದೆಷ್ಟು]

A Raja

2ಜಿ ಸ್ಪೆಕ್ಟ್ರಂ ಹಗರಣವನ್ನು ಮಾಧ್ಯಮಗಳು ದೇಶದ ಅತಿದೊಡ್ಡ ಹಗರಣ ಎಂದು ಬಿಂಬಿಸುತ್ತಿವೆ. ಆದರೆ ಎಷ್ಟು ಕೋಟಿ ಹಗರಣ ಎನ್ನುವುದಕ್ಕೆ ಯಾವುದೇ ದಾಖಲೆ ಇನ್ನು ಸಿಕ್ಕಿಲ್ಲ. ಯಾವುದೇ ದಾಖಲೆ ಆರೋಪ ಮಾಡುವುದು ಮಾಧ್ಯಮಗಳ ಕೆಲಸ ಎಂದು ಮಾಧ್ಯಮಗಳ ವಿರುದ್ಧ ರಾಜ ಸಂದರ್ಶನದಲ್ಲಿ ಹರಿಹಾಯ್ದಿದ್ದಾರೆ.

ಈ ಹಗರಣಕ್ಕೆ ಸಂಬಂಧಿಸಿದಂತೆ 2011ರ ಫೆಬ್ರವರಿ 2ರಂದು ಎ.ರಾಜ ಬಂಧಿಸಲಾಗಿತ್ತು. ಬಳಿಕ ಜಾಮೀನಿನ ಮೇಲೆ ಬಿಡುಗಡೆಯಾಗಿರುವ ಎ.ರಾಜ ಪ್ರಸ್ತುತ ತಮಿಳುನಾಡಿನ ನೀಲಗಿರಿ ಲೋಕಸಭಾ ಕ್ಷೇತ್ರದಲ್ಲಿ ಸ್ಪರ್ಧಿಸುತ್ತಿದ್ದಾರೆ.

English summary
Former Telecom Minister A Raja, accused in the 2G spectrum case, has said he is ready to live his entire life in jail if any ill-gotten money is found with him.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X