ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪತ್ರಿಕೆಯ ಅಭಿಯಾನ: ಅವಿವಾಹಿತೆಯಿಂದ ಹಾಲುಣಿಸುವ ಪ್ರಚಾರವೇಕೆ?

By Mahesh
|
Google Oneindia Kannada News

ಬೆಂಗಳೂರು, ಮಾರ್ಚ್ 01: ಎದೆ ಹಾಲಿನ ಕೊರತೆಯಿಂದಾಗಿ ಮಕ್ಕಳಲ್ಲಿ ಉಂಟಾಗುವ ಅಪೌಷ್ಟಿಕತೆ ಹಾಗೂ ಬುದ್ಧಿಶಕ್ತಿಯ ಪರಿಣಾಮದ ಬಗ್ಗೆ ತಾಯಂದರಲ್ಲಿ ಅರಿವು ಮೂಡಿಸಲು ಆರಂಭಿಸಿದ ಜಾಗತಿಕ ಸ್ತನ್ಯಪಾನ ಸಪ್ತಾಹ ಹಮ್ಮಿಕೊಳ್ಳುವುದು ಎಲ್ಲರಿಗೂ ತಿಳಿದಿರುವ ವಿಷಯ. ಆದರೆ, ಸ್ತನ್ಯಪಾನದ ಮಹತ್ವ ಸಾರುವ ಭರದಲ್ಲಿ ಮಲೆಯಾಳಂನ ಮ್ಯಾಗಜೀನ್ ವೊಂದು ಚರ್ಚೆಗೆ ಗ್ರಾಸವಾಗುತ್ತಿದೆ.

ಜಗತ್ತಿನ ಯಾವ ರಾಷ್ಟ್ರಕ್ಕೂ ಸ್ತನ್ಯಪಾನದ ಮಹತ್ವ ಗೊತ್ತಿಲ್ಲ!ಜಗತ್ತಿನ ಯಾವ ರಾಷ್ಟ್ರಕ್ಕೂ ಸ್ತನ್ಯಪಾನದ ಮಹತ್ವ ಗೊತ್ತಿಲ್ಲ!

ಸ್ತನ್ಯಪಾನದ ಮಹತ್ವ, ಪ್ರಚಾರಕ್ಕಾಗಿ ಬಂದ ಕವರ್ ಸ್ಟೋರಿ ಹಾಗೂ ಕವರ್ ಪೇಜ್ ನಲ್ಲಿ ರೂಪದರ್ಶಿಯಾಗಿ ಗಿಜು ಜೋಸೆಫ್ ಎಂಬುವರು ಕಾಣಿಸಿಕೊಂಡಿದ್ದಾರೆ.

ಮಂಗಳಮುಖಿಯಿಂದಲೇ ತನ್ನ ಮಗುವಿಗೆ ಅಮೃತಧಾರೆ!ಮಂಗಳಮುಖಿಯಿಂದಲೇ ತನ್ನ ಮಗುವಿಗೆ ಅಮೃತಧಾರೆ!

ಆಕೆಗೆ ಮದುವೆಯಾಗಿಲ್ಲ, ಮಗುವಾಗಿಲ್ಲ, ಆದರೆ, ಸ್ತನ್ಯಪಾನ ಮಾಡುವ ಭಂಗಿಯಲ್ಲಿ ಕುಳಿತು ಪೋಸ್ ನೀಡಿದ್ದಾರೆ. ಇಂಥ ಉತ್ತಮ ಅಭಿಯಾನಕ್ಕೆ ರೂಪದರ್ಶಿ ಬಳಕೆ ಅಗತ್ಯವಿತ್ತೆ? ಅದರಲ್ಲೂ ಅವಿವಾಹಿತೆಯನ್ನು ಬಳಸಿರುವುದು ಎಷ್ಟು ಸರಿ ಎಂದು ಸಾಮಾಜಿಕ ಜಾಲ ತಾಣಗಳಲ್ಲಿ ಪ್ರಶ್ನಿಸಲಾಗಿದೆ. ಆದರೆ, ರೂಪದರ್ಶಿ ಗಿಲು ಜೋಸೆಫ್ ಮಾಡಿದ್ದು ಸರಿ, ಇಂಥ ಅಭಿಯಾನದಿಂದ ಮಹಿಳೆಯರು ಭಯವಿಲ್ಲದೆ, ಪಬ್ಲಿಕ್ ಸ್ಥಳಗಳಲ್ಲಿ ಸ್ತನ್ಯಪಾನ ಮಾಡಲು ಸಾಧ್ಯವಾಗಲಿದೆ. ಇದನ್ನು ಎಲ್ಲರೂ ಅರ್ಥ ಮಾಡಿಕೊಳ್ಳಬೇಕು ಎಂದು ಹಲವಾರು ಮಂದಿ ಸಮರ್ಥನೆ ನೀಡಿದ್ದಾರೆ.

ಕವರ್ ಪೇಜ್ ನಲ್ಲಿ ಏನಿದೆ?

ಕವರ್ ಪೇಜ್ ನಲ್ಲಿ ಏನಿದೆ?

ಮಲಯಾಳಂ ನಟಿ, ಲೇಖಕಿ, ಸಾಹಿತಿ ಗಿಲು ಜೋಸೆಫ್ ಮಲಯಾಳಂ ಭಾಷೆಯ ಗೃಹಲಕ್ಷ್ಮಿ ಪತ್ರಿಕೆಗೆ ಈ ಫೋಟೋಶೂಟ್ ಮಾಡಿದ್ದಾರೆ. ಹಣೆಗೆ ಕುಂಕುಮವಿಟ್ಟು, ಕುತ್ತಿಗೆಗೆ ಮಾಂಗಲ್ಯಸರ ಹಾಕಿಕೊಂಡು ಭಾರತ ನಾರಿಯಂತೆ ವಸ್ತ್ರ ಧರಿಸಿ ಮಗುವಿಗೆ ಸ್ತನಪಾನ ಮಾಡುವ ಪೋಸ್ ನಲ್ಲಿದ್ದಾರೆ.

ಗುರಾಯಿಸಿಕೊಂಡು ನೋಡಬೇಡಿ

ವಿಶ್ವ ಸ್ತನ್ಯಪಾನ ಸಪ್ತಾಹದ ಸಮಯದಲ್ಲಿ ಪ್ರತಿ ಮಾತೆಯೂ ತನ್ನ ಪುಟ್ಟ ಕಂದನಿಗೆ, ಅಕ್ಕರೆ, ಮಮತೆ, ಪ್ರೀತಿ, ವಿಶ್ವಾಸಗಳನ್ನು ತುಂಬಿ ಕುಡಿಸುವ ಅಮೃತದ ಮಹತ್ವ ಅರಿಯೋಣ ಎಂದು ಅಭಿಯಾನ ನಡೆಸಲಾಗುತ್ತದೆ.

ಆದರೆ, ಗೃಹಲಕ್ಷ್ಮಿ ಮ್ಯಾಗಜೀನ್ ನ ಕವರ್ ಪುಟ ಹಾಗೂ ಸ್ಟೋರಿಯಲ್ಲಿ ಸ್ತನ್ಯಪಾನದ ಬಗ್ಗೆ ಅಕಾಲಿಕವಾಗಿ ಏಕೆ ಅಭಿಯಾನ ಶುರುವಾಗಿದೆ. ಅದರಲ್ಲಿ ತಾಯಿ ಮಗುವನ್ನು ಬಳಸದೆ, ರೂಪದರ್ಶಿಯನ್ನು ಬಳಸಿರುವುದರ ಬಗ್ಗೆ ಸಾಮಾಜಿಕ ಜಾಲ ತಾಣಗಳಲ್ಲಿ ಪ್ರಶ್ನಿಸಲಾಗಿದೆ.

ಇಂಥ ಅಭಿಯಾನ ಅಗತ್ಯ ಎಂದಿದ್ದಾರೆ

ಮಹಿಳೆಯರ ಸ್ತನಗಳು ಕೇವಲ ಭೋಗಕ್ಕೆ ಮಾತ್ರವಲ್ಲ, ಮಗುವಿಗೆ ಹಾಲುಣಿಸಲು ಬಳಸಲಾಗುತ್ತದೆ. ಸ್ತನ್ಯಪಾನದ ಮಹತ್ವ ಸಾರಲು ಇಂಥ ಅಭಿಯಾನ ಅಗತ್ಯ ಎಂದಿದ್ದಾರೆ.

ಅಕಾಲಿಕವಾಗಿ ಏಕೆ ಅಭಿಯಾನ ಶುರು

ಮಾತೃಭೂಮಿ ಪತ್ರಿಕೆಯ ಗೃಹಲಕ್ಷ್ಮಿ ಕಾರ್ಯವನ್ನು ಮೆಚ್ಚಬೇಕು. ಎಲ್ಲವನ್ನು ಮಡಿವಂತಿಕೆಯಿಂದ ನೋಡುವ ದೇಶದಲ್ಲಿ ಈ ರೀತಿ ವಿಶಿಷ್ಟ ಅಭಿಯಾನಕ್ಕೆ ಬೆಲೆ ಸಿಗಬೇಕಿದೆ ಎಂದು ಡಾಂಟಿಸ್ ಜೋ ಶಾಜಿ ಬರೆದುಕೊಂಡಿದ್ದಾರೆ.

ವಿಶ್ವ ಸ್ತನ್ಯಪಾನ ಸಪ್ತಾಹ: ಮಾತೆ ನೀಡಿದ ಅಮೃತದ 5 ಉಪಯೋಗ ವಿಶ್ವ ಸ್ತನ್ಯಪಾನ ಸಪ್ತಾಹ: ಮಾತೆ ನೀಡಿದ ಅಮೃತದ 5 ಉಪಯೋಗ

ಭಾರತದಲ್ಲಿನ್ನೂ ಸ್ತನ್ಯಪಾನದ ಮಹತ್ವ ಅರಿವಾಗಿಲ್ಲ!ಭಾರತದಲ್ಲಿನ್ನೂ ಸ್ತನ್ಯಪಾನದ ಮಹತ್ವ ಅರಿವಾಗಿಲ್ಲ!

English summary
Malayalam magazine Grihalakshmi is in the eye of a storm after they featured a woman model, Gilu Joseph, posing as if she were breastfeeding a baby who is not her own.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X