ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಉದ್ದಿಮೆದಾರರ ಸಾಲ WRITTEN OFF: ರಾಜಕೀಯ ನಾಯಕರ ಪ್ರತಿಕ್ರಿಯೆ

|
Google Oneindia Kannada News

ಮುಂಬೈ, ಏಪ್ರಿಲ್ 29: ಉದ್ಯಮಿ ಮೆಹುಲ್ ಚೋಕ್ಸಿ, ವಿಜಯ್‌ ಮಲ್ಯ ಅವರ ಕಂಪನಿ ಸೇರಿದಂತೆ 50 ಉದ್ಯಮಿಗಳ 68,607 ಕೋಟಿ ರೂ ಸುಸ್ತಿ ಸಾಲವನ್ನು ಭಾರತೀಯ ರಿಸರ್ವ್‌ ಬ್ಯಾಂಕ್ ರಿಟನ್ ಆಫ್ಮಾಡಿದೆ.

ಆರ್‌ಬಿಐನ ಈ ಕ್ರಮವನ್ನು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ,ಸುರ್ಜೇವಾಲಾ ಸೇರಿದಂತ ಅನೇಕ ರಾಜಕೀಯ ಮುಖಂಡರುಗಳು ಖಂಡಿಸಿದ್ದಾರೆ.

ರೈತರು ಹಾಗೂ ವಿವಿಧ ವರ್ಗಗಳಿಗೆ ಮಾಡುವ ಸಾಲ ಮನ್ನಾ ಇದಲ್ಲ. ಬ್ಯಾಂಕುಗಳು ವಸೂಲಾಗದ ಸಾಲಗಳನ್ನು ತಮ್ಮ ಬ್ಯಾಲೆನ್ಸ್‌ಶೀಟ್‌ನಿಂದ ಕೈಬಿಡಲು ಈ ಕಸರತ್ತು ನಡೆಸುತ್ತವೆ. ಆದರೆ ವಸೂಲಾತಿ ಪ್ರಕ್ರಿಯೆ ಮುಂದುವರೆಯುತ್ತದೆ.

ಮುಂದೊಂದು ದಿನ ಸಾಲ ವಸೂಲಾದರೆ ಅದನ್ನು ಲಾಭ ಎಂದು ತೋರಿಸಿಕೊಳ್ಳುತ್ತವೆ, ರೈಟಾಫ್‌ ಆದ ಸಾಲವನ್ನು ವಸೂಲಿ ಮಾಡಿರುವ ಸಾಕಷ್ಟು ನಿದರ್ಶನಗಳು ಕಣ್ಣ ಮುಂದಿವೆ.

ಬ್ಯಾಂಕ್‌ಗಳು ತಾವು ನೀಡಿರುವ ಸಾಲದ ಮರು ವಸೂಲಾತಿ ತುಂಬಾ ಕಷ್ಟ ಎಂದು ಗಮನಕ್ಕೆ ಬಂದಾಗ ಈ ಕ್ರಮ ಕೈಗೊಳ್ಳುತ್ತವೆ. ಸುಸ್ತಿ ಸಾಲಗಳನ್ನು ತಮ್ಮ ಬ್ಯಾಲೆನ್ಸ್‌ ಶೀಟ್‌ನಿಂದ ಪ್ರತ್ಯೇಕಗೊಳಿಸಲು 'ರಿಟನ್ ಆಫ್' ಪದ್ಧತಿಯನ್ನು ಬಳಸುತ್ತವೆ.

ಇದು ಲೆಕ್ಕಪತ್ರಗಳ ಅನುಕೂಲಕ್ಕಾಗಿ ಬಳಸಬಹುದಾದ ವಿಧಾನ ಮಾತ್ರ. ಇದರಿಂದ ಬ್ಯಾಂಕ್‌ಗಳಿಗೆ ತೆರಿಗೆಯಲ್ಲಿ ಉಳಿತಾಯ ಮಾಡಲು ಸಾಧ್ಯವಾಗುತ್ತದೆ. ರಿಟನ್ ಆಫ್ಎಂದರೆ ಯಾವುದೇ ಕಾರಣಕ್ಕೂ ಸಾಲ ಮನ್ನಾ ಅಲ್ಲವೇ ಅಲ್ಲ.

ಸಂಸದ ರಾಹುಲ್ ಗಾಂಧಿ ಪ್ರತಿಕ್ರಿಯೆ

ಸಂಸತ್ತಿನಲ್ಲಿ ಒಂದೇ ಒಂದು ಪ್ರಶ್ನೆ ಕೇಳಿದ್ದೆ, ದೇಶದ 50 ದೊಡ್ಡ ಕಳ್ಳರ ಹೆಸರು ಹೇಳಿ ಎಂದು, ವಿತ್ತ ಸಚಿವರು ಉತ್ತರ ಹೇಳಲು ನಿರಾಕರಿಸಿದರು. ಈ ಹಿಂದೆ ಸಂಸತ್ತಿನಲ್ಲಿ ನಡೆದ ಚರ್ಚೆಯ ವೇಳೆ ಪ್ರಮುಖ 50 ಸುಸ್ತಿದಾರರ ಪಟ್ಟಿಯನ್ನು ನೀಡುವಂತೆ ನಾನು ಕೇಳಿದ್ದೆ. ಆದರೆ ಕೇಂದ್ರ ಸರ್ಕಾರ ಆ ಸಮಯದಲ್ಲಿ ಯಾವುದೇ ಉತ್ತರ ನೀಡಿರಲಿಲ್ಲ. ಈಗ ನೋಡಿದರೆ, ಬಿಜೆಪಿಗೆ ಬೇಕಿರುವ ಸ್ನೇಹಿತರ ಹೆಸರುಗಳುಳ್ಳ 50 ಸುಸ್ತಿದಾರರ ಪಟ್ಟಿಯನ್ನು ನೀಡಿದೆ ಎಂದು ರಾಹುಲ್ ಗಾಂಧಿ ಟ್ವೀಟ್ ಮಾಡಿದ್ದಾರೆ. ಇದೇ ಕಾರಣಕ್ಕಾಗಿಯೇ ವಿತ್ತ ಸಚಿವರು ಮಾಹಿತಿ ನೀಡಲು ನಿರಾಕರಿಸಿದ್ದರು ಎನ್ನುವುದು ತಿಳಿದುಬಂದಿದೆ.

ಆರ್‌ಟಿಐ ಕಾರ್ಯಕರ್ತ ಗೋಖಲೆ ಹೇಳುವುದೇನು?

ಆರ್‌ಟಿಐ ಕಾರ್ಯಕರ್ತ ಗೋಖಲೆ ಹೇಳುವುದೇನು?

ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಕೇಳಿದ್ದ ಪ್ರಶ್ನೆಗೆ 2020ರ ಫೆ.16 ರಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಹಾಗೂ ರಾಜ್ಯ ಸಚಿವ ಅನುರಾಗ್ ಠಾಕೂರ್ ಸಂಸತ್ತಿನಲ್ಲಿ ಉತ್ತರ ನೀಡಲು ನಿರಾಕರಿಸಿದ್ದರಿಂದ ನಾನು ಆರ್‌ಟಿ ಐ ಅರ್ಜಿ ಸಲ್ಲಿಸಿದ್ದೆ. 2019ರ ಸೆಪ್ಟೆಂಬರ್ 30ರವರೆಗಿನ 68,607 ಕೋಟಿ ರೂ. ಸುಸ್ತಿಸಾಲವನ್ನು ತಾಂತ್ರಿಕವಾಗಿ ಮನ್ನಾ ಮಾಡಲಾಗಿದೆ ಎಂದು ಆರ್‌ಬಿಐ ಮಾಹಿತಿ ಅಧಿಕಾರಿ ಅಭಯ್ ಕುಮಾರ್ ಏ.24 ರಂದು ಲಿಖಿತ ಉತ್ತರ ನೀಡಿರುವುದಾಗಿ ತಿಳಿಸಿದ್ದಾರೆ.

ಭಾರತದಲ್ಲಿ ಹಣ ಲೂಟಿ ಮಾಡಿ ವಿದೇಶಕ್ಕೆ ಹೋಗುವ ದಂದೆ

ಬ್ಯಾಂಕ್‌ನಲ್ಲಿ ಹಣ ಲೂಟಿ ಮಾಡಿ, ವಿದೇಶಕ್ಕೆ ಹೋಗಿ ಅಲ್ಲಿಂದ ಸಾಲ ಮನ್ನಾ ಮಾಡಿಸುತ್ತಿದ್ದವರ ಬಣ್ಣ ಬಯಲಾಗಿದೆ. ದೇಶದಲ್ಲಿ ಆರ್ಥಿಕ ಪರಿಸ್ಥಿತಿ ಸರಿ ಇಲ್ಲ, ರೈತರು ಸಂಕಷ್ಟದಲ್ಲಿದ್ದಾರೆ. ಇಂತಹ ಸಮಯದಲ್ಲಿ ಉದ್ದಿಮೆದಾರರ 68 ಸಾವಿರ ಕೋಟಿ ರೂ ರೈಟ್ ಆಫ್ ಮಾಡಿರುವ ಮೋದಿ ಸರ್ಕಾರಕ್ಕೆ ಏನೆನ್ನಬೇಕು ಎಂದು ಕಾಂಗ್ರೆಸ್ ನಾಯಕ ರಣದೀಪ್ ಸಿಂಗ್ ಸುರ್ಜೇವಾಲಾ ಟ್ವೀಟ್ ಮಾಡಿದ್ದಾರೆ.

ಸಾಲ ರೈಟ್ ಆಫ್ ಕುರಿತು ಕಾಂಗ್ರೆಸ್ ದೇಶದ ಜನರ ದಾರಿ ತಪ್ಪಿಸುತ್ತಿದೆ

ಸಾಲ ರೈಟ್ ಆಫ್ ಕುರಿತು ಕಾಂಗ್ರೆಸ್ ದೇಶದ ಜನರ ದಾರಿ ತಪ್ಪಿಸುತ್ತಿದೆ

ಆರ್‌ಬಿಐ ದೇಶದ 50 ಮಂದಿ ಉದ್ದೇಶಪೂರ್ವಕ ಸುಸ್ತಿದಾರರ ಸಾಲವನ್ನು ಮನ್ನಾ ಮಾಡಿಲ್ಲ ರೈಟ್ ಆಫ್ ಮಾಡಲಾಗಿದೆ. ಆದರೆ ಕಾಂಗ್ರೆಸ್ ಪಕ್ಷವು ದೇಶದ ಜನರನ್ನು ದಾರಿ ತಪ್ಪಿಸುವ ಕೆಲಸ ಮಾಡುತ್ತಿದೆ.

English summary
A needless controversy has erupted over RBI revealing that banks have written off bad loans worth Rs 68,607 crore in its response to Right-to-Information (RTI) query.Political Leaders Reaction Over Write Off.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X