• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಡಿಜಿಟಲ್ ಪಾವತಿ ಸಮಿತಿಯ ಮುಖ್ಯಸ್ಥರಾಗಿ ನಂದನ್ ನಿಲೇಕಣಿ ನೇಮಕ

|
Google Oneindia Kannada News

ನವದೆಹಲಿ, ಜನವರಿ 8: ಇನ್ಫೋಸಿಸ್ ನ ಸಹ ಸಂಸ್ಥಾಪಕ ನಂದನ್ ನಿಲೇಕಣಿ ಅವರನ್ನು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾವು ದೇಶದ ಡಿಜಿಟೈಸೇಷನ್ ಪಾವತಿಗಾಗಿ ರಚಿಸಿದ ವಿಶೇಷ ಸಮಿತಿಯ ಮುಖ್ಯಸ್ಥರನ್ನಾಗಿ ನೇಮಿಸಿದೆ. ಉನ್ನತ ಮಟ್ಟದ ಐವರು ಸದಸ್ಯರನ್ನು ಒಳಗೊಂಡ ಉನ್ನತ ಮಟ್ಟದ ಸಮಿತಿಯನ್ನು ನಿಲೇಕಣಿ ಮುನ್ನಡೆಸಲಿದ್ದಾರೆ.

ನಿಲೇಕಣಿ ಅವರನ್ನು ಹೊರತು ಪಡಿಸಿ ಆರ್ ಬಿಐನ ಮಾಜಿ ಡೆಪ್ಯೂಟಿ ಗವರ್ನರ್ ಎಚ್.ಆರ್.ಖಾನ್, ವಿಜಯಾಬ್ಯಾಂಕ್ ನ ಮಾಜಿ ಎಂ.ಡಿ. ಹಾಗೂ ಸಿಇಒ ಕಿಶೋರ್ ಸನ್ಸಿ, ಐಟಿ ಹಾಗೂ ಉಕ್ಕು ಸಚಿವಾಲಯದ ಮಾಜಿ ಕಾರ್ಯದರ್ಶಿ ಅರುಣ ಶರ್ಮಾ ಹಾಗೂ ಐಐಎಂ ಅಹಮದಾಬಾದ್ ನ ಸಂಜಯ್ ಜೈನ್ ಇರಲಿದ್ದಾರೆ.

ಮಧ್ಯಂತರ ಲಾಭಾಂಶ 30ರಿಂದ 40 ಸಾವಿರ ಕೋಟಿ ಆರ್ ಬಿಐನಿಂದ ಸರಕಾರಕ್ಕೆಮಧ್ಯಂತರ ಲಾಭಾಂಶ 30ರಿಂದ 40 ಸಾವಿರ ಕೋಟಿ ಆರ್ ಬಿಐನಿಂದ ಸರಕಾರಕ್ಕೆ

ಸದ್ಯಕ್ಕೆ ದೇಶದಲ್ಲಿರುವ ಡಿಜಿಟೈಸೇಷನ್ ಪಾವತಿ ಸ್ಥಿತಿಗತಿ ಬಗ್ಗೆ ಈ ಸಮಿತಿಯು ಪರಿಶೀಲನೆ ನಡೆಸಲಿದೆ. ಎಲ್ಲಿ ಸಮಸ್ಯೆಗಳಿವೆ ಎಂಬುದನ್ನು ಪತ್ತೆ ಹಚ್ಚಿ, ಅದಕ್ಕೆ ಪರಿಹಾರ ಸೂಚಿಸಲಾಗುತ್ತದೆ. ಆರ್ಥಿಕತೆಯಲ್ಲಿ ಡಿಜಿಟಲ್ ವ್ಯವಸ್ಥೆ ತರುವಲ್ಲಿ ಯಾವುದು ಸೂಕ್ತ ಮಾರ್ಗ ಎಂದು ಇತರ ದೇಶಗಳಲ್ಲಿ ಸದ್ಯಕ್ಕೆ ಚಾಲ್ತಿಯಲ್ಲಿರುವ ಪದ್ಧತಿಗಳ ಅಧ್ಯಯನ ಮೂಲಕ ಪರಿಶೀಲಿಸಲಾಗುತ್ತದೆ.

ಡಿಜಿಟಲ್ ಪಾವತಿಯ ಸುರಕ್ಷತೆ ಹಾಗೂ ಭದ್ರತೆ ಹೆಚ್ಚಿಸುವ ದೃಷ್ಟಿಯಲ್ಲಿ ಕೈಗೊಳ್ಳಬೇಕಾದ ಕ್ರಮಗಳನ್ನು ಸಹ ಸೂಚಿಸಲಾಗುತ್ತದೆ. ಡಿಜಿಟಲ್ ಪಾವತಿ ಹೆಚ್ಚಾಗುವ ನಿಟ್ಟಿನಲ್ಲಿ ಮಧ್ಯಮಾವಧಿ ಯೋಜನೆಗಳನ್ನು ಸಹ ತಿಳಿಸಲಾಗುತ್ತದೆ.

ಮೋದಿ ಸರಕಾರದ ಡಿಜಿಟಲ್ ವ್ಯವಹಾರದ ಜಾದೂ ಭಾರತವನ್ನು ಬದಲಿಸಿದ್ದು ಹೇಗೆ?ಮೋದಿ ಸರಕಾರದ ಡಿಜಿಟಲ್ ವ್ಯವಹಾರದ ಜಾದೂ ಭಾರತವನ್ನು ಬದಲಿಸಿದ್ದು ಹೇಗೆ?

ಈ ಸಮಿತಿಯ ಮೊದಲ ಸಭೆಯಿಂದ ಆರಂಭವಾಗಿ ತೊಂಬತ್ತು ದಿನದೊಳಗೆ ವರದಿ ಸಲ್ಲಿಸಲಿದೆ. ಈ ಹಿಂದೆ ನಂದನ್ ನಿಲೇಕಣಿ ಅವರು ಕಾಂಗ್ರೆಸ್ ನೇತೃತ್ವದ ಯುಪಿಎ ಆಡಳಿತಾವಧಿಯಲ್ಲಿ ಆಧಾರ್ ಕಾರ್ಡ್ ಅನುಷ್ಠಾನದ ಯುಐಡಿಎಐನ ಮುಖ್ಯಸ್ಥರಾಗಿ ಕಾರ್ಯ ನಿರ್ವಹಿಸಿದ್ದರು.

English summary
The Reserve Bank of India has named Infosys co-founder Nandan Nilekani as the chairman of a special committee to assess the digitisation of payments in the country.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X