ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ತ್ವರೆ ಮಾಡಿ : ಕರೆನ್ಸಿ ನೋಟಿನ ಮೇಲೆ ಗೀಚಿದ್ದರೆ ಖರ್ಚು ಮಾಡಿ

By Mahesh
|
Google Oneindia Kannada News

RBI to launch awareness campaign for not writing on currency notes
ಬೆಂಗಳೂರು, ಡಿ.1: ಕರೆನ್ಸಿ ನೋಟುಗಳ ಮೇಲೆ ಅಂಕಿ-ಸಂಖ್ಯೆ, ಚಿತ್ರಗಳು, ಹೆಸರು ಕೆಲವರು ಕವನಗಳನ್ನೇ ಗೀಚಿರುತ್ತಾರೆ. ಇಂಥೆ ನೋಟುಗಳು ಆರ್ ಬಿಐ ನಿಯಮಗಳ ಪ್ರಕಾರ ಚಲಾವಣೆಗೆ ಯೋಗ್ಯ. ನೋಟುಗಳ ಮೇಲೆ ಬರೆಯಬೇಡಿ ಎಂದು ಆರ್ ಬಿಐ ಅಭಿಯಾನ ಆರಂಭಿಸಿದೆ.

ನೋಟುಗಳ ಮೇಲೆ ಬರೆಯೋದು ರಿಸರ್ವ್ ಬ್ಯಾಂಕಿನ ನಿಯಮಗಳಂತೆ ನಿಷೇಧಿತ. ಇಂಥ ನೋಟುಗಳಿಗೆ ಮನ್ನಣೆ ನೀಡಬಾರದು ಎನ್ನುವ ಮೌಖಿಕ ಆದೇಶವಿದ್ದರೂ ಹಲವು ಬ್ಯಾಂಕಿನ ಅಧಿಕಾರಿಗಳು ಅಡ್ಜೆಸ್ಟ್ (ಹೊಂದಾಣಿಕೆ) ಮಾಡಿಕೊಳ್ಳುತ್ತಿರುವುದು ಕಂಡು ಬಂದಿದೆ.

2014ರ ಜನವರಿ 1 ರಿಂದ ಬ್ಯಾಂಕ್ ಗಳಲ್ಲಿ ಈ ರೀತಿ ಅಡ್ಜೆಸ್ಟ್ ಮೆಂಟ್ ನಡೆಯುವುದಿಲ್ಲ. ಪೆನ್ನು ಹಾಗೂ ಇತರೆ ಶಾಹಿಯಾ ಲೇಖನಿಗಳಿಂದ ಬರೆದ, ಗೀಚಿದ ನೋಟುಗಳನ್ನು ಸ್ವೀಕರಿಸದಂತೆ ಆರ್ ಬಿಐ ನಿರ್ದೇಶನ ನೀಡಿದೆ. ಇಂಥ ನೋಟುಗಳನ್ನು ತ್ಯಜಿಸುವಂತೆ ಈಗಾಗಲೇ ಭಾರತೀಯ ರಿಸರ್ವ್ ಬ್ಯಾಂಕ್ ಕಟ್ಟಾಜ್ಞೆ ಹೊರಡಿಸಿದೆ.

ಹೀಗಾಗಿ ನಿಮ್ಮ ಬಳಿ ಗೀಚಿದ ಗುರುತುಗಳುಳ್ಳ ನೋಟುಗಳಿದ್ದರೆ ಅವುಗಳನ್ನು ಜನವರಿ 1 ರೊಳಗೆ ಚಲಾಯಿಸಿಕೊಳ್ಳಿ. ಹತ್ತಿರದ ಬ್ಯಾಂಕ್ ಗೆ ತೆರಳಿ ನೋಟುಗಳನ್ನು ನೀಡಿ.ಇಂಥ ನೋಟುಗಳ ಬಗ್ಗೆ ಅರಿವು ಮೂಡಿಸುವ ಹಾಗೂ ನೋಟುಗಳ ಮೇಲೆ ಬರೆಯದಂತೆ ಜಾಗೃತಿ ಮೂಡಿಸಲು ರಿಸರ್ವ್ ಬ್ಯಾಂಕ್ ಹಾದಿಯಾಗಿ ಎಲ್ಲಾ ಬ್ಯಾಂಕ್ ಗಳು ಕಾರ್ಯಕ್ರಮಗಳನ್ನು,ಅಭಿಯಾನಗಳನ್ನು ಹಮ್ಮಿಕೊಳ್ಳುತ್ತಿವೆ.

ನೋಟಿನ ಶುಚಿತ್ವ ಕಾಪಾಡುವ ಅಭಿಯಾನ ಅಗತ್ಯವಿದೆ ಎಂದು ರಿಸರ್ವ್ ಬ್ಯಾಂಕ್‌ನ ಉಪಗೌರ್‍ನರ್ ಕೆ.ಸಿ.ಚಕ್ರವರ್ತಿ ತಿಳಿಸಿದ್ದಾರೆ. ಹಾಲಿ ಬ್ಯಾಂಕ್ ನ ಯಾವುದೇ ಅಧಿಕಾರಿ ಮುಂದೆ ನೋಟುಗಳ ಮೇಲೆ ಬರೆದರೆ ಅಂಥವುಗಳನ್ನು ಸ್ವೀಕರಿಸದ ಪದ್ಧತಿ ಇದೆ. ಆದರೆ ಯಾರಿಂದಲೋ ಬಂದ ಇಂಥ ನೋಟುಗಳನ್ನು ಕ್ರಮೇಣವಾಗಿ ಕಡಿಮೆ ಮಾಡುವ ಕಾರ್ಯ ಆರಂಭಗೊಂಡಿದೆ.

ಅಷ್ಟೇ ಅಲ್ಲ ಇನ್ನು ಮುಂದೆ ಪ್ಲಾಸ್ಟಿಕ್ ಕರೆನ್ಸಿಗಳೂ ಜಾರಿಗೆ ಬರಲಿವೆಯಂತೆ. ಈಗಾಗಲೇ ಪೈಲೆಟ್ ಪ್ರಾಜೆಕ್ಟ್ ಆರಂಭಗೊಂಡಿದ್ದು ಎರಡುಮೂರು ವರ್ಷಗಳಲ್ಲಿ ಪ್ಲಾಸ್ಟಿಕ್ ಕರೆನ್ಸಿಗಳು ಚಲಾವಣೆಯಾಗಲಿವೆ. ನಕಲಿ ನೋಟುಗಳನ್ನು ಕಂಡು ಹಿಡಿಯುವ ಬಗ್ಗೆ ಕೂಡಾ ಈ ಹಿಂದೆ ಆರ್ ಬಿಐ ಅಭಿಯಾನ ಹಮ್ಮಿಕೊಂಡಿದ್ದನ್ನು ಇಲ್ಲಿ ಸ್ಮರಿಸಬಹುದು.

English summary
The Reserve Bank aims to create awareness among people about not writing anything on the currency notes and that they need to keep them clean, Deputy Governor K C Chakrabarty said on Saturday(Nov.30).
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X