ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತದಲ್ಲಿ 100 ವರ್ಷಗಳಲ್ಲೇ ಅತಿ ಕೆಟ್ಟ ಆರ್ಥಿಕ ಪರಿಸ್ಥಿತಿ: ಆರ್‌ಬಿಐ ಗವರ್ನರ್

|
Google Oneindia Kannada News

ನವದೆಹಲಿ, ಜುಲೈ 11:ಭಾರತದಲ್ಲಿ ನೂರು ವರ್ಷಗಳ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ಕೊವಿಡ್ 19 ನಿಂದಾಗಿ ಅತಿ ಕೆಟ್ಟ ಆರ್ಥಿಕ ಪರಿಸ್ಥಿತಿಯನ್ನು ಎದುರಿಸುತ್ತಿದೆ ಎಂದು ಆರ್‌ಬಿಐ ಗವರ್ನರ್ ಶಕ್ತಿಕಾಂತ್ ದಾಸ್ ಹೇಳಿದ್ದಾರೆ.

Recommended Video

Who is Vikas Dubey ? | ಯಾರು ಈ ವಿಕಾಸ್ ದೂಬೆ ? | Oneindia Kannada

ಭಾರತೀಯ ರಿಸರ್ವ ಬ್ಯಾಂಕ್ ಗವರ್ನರ್ ಶಕ್ತಿಕಾಂತ್ ದಾಸ್ ಇಂದು ಭಾರತೀಯ ಸ್ಟೇಟ್ ಬ್ಯಾಂಕ್‌ನ ಮುಖ್ಯಸ್ಥ ರಜನೀಶ್ ಕುಮಾರ್ ಅವರ ಜೊತೆ ವಿಡಿಯೋ ಸಂವಾದ ನಡೆಸಿದರು.

ಕೊರೊನಾ ಲಾಕ್‌ಡೌನ್‌ನಿಂದಾಗಿ ಭಾರತ ಸರ್ಕಾರವು ತೆಗೆದುಕೊಂಡ ಕೆಲವು ನಿರ್ಧಾರಗಳಿಂದ ಆರ್ಥಿಕತೆಗೆ ಭಾರಿ ಹಿನ್ನಡೆ ಉಂಟಾಗಿರುವುದರಿಂದ ಆರ್ಥಿಕತೆಯನ್ನು ಮತ್ತೆ ಬಲ ಪಡಿಸಲು ಏನು ಮಡಬೇಕು ಎಂಬುದರ ಕುರಿತು ಚರ್ಚೆ ನಡೆಸಲಾಯಿತು.

Economic Growth Top Priority, Says RBI Governor Shaktikanta Das

ಕಳೆದ ನೂರು ವರ್ಷಗಳಲ್ಲೇ ಭಾರತದಲ್ಲಿ ಅತಿ ಕೆಟ್ಟ ಆರ್ಥಿಕ ಪರಿಸ್ಥಿತಿ ನಿರ್ಮಾಣವಾಗಿದೆ. ಜೊತೆಗೆ ಆರೋಗ್ಯ ಸಮಸ್ಯೆಯೂ ಕೂಡ. ಹಣಕಾಸು ವ್ಯವಸ್ಥೆಯನ್ನು ಸುಧಾರಿಸಲು ಅನೇಕ ಕ್ರಮಗಳನ್ನು ಕೈಗೊಳ್ಳಲಾಗಿದೆ. ಸಾಕಷ್ಟು ಯೋಜನೆಗಳಿಂದ ಸಹಾಯವಾಗಿದೆ.

ಫೆಬ್ರವರಿಯಿಂದ ಆರ್‌ಬಿಐ 250 ಬೇಸಿಸ್ ಪಾಯಿಂಟ್‌ಗಳನ್ನು ಕಡಿತಗೊಳಿಸಿದೆ. ಆರ್‌ಬಿಐ 9.57 ಲಕ್ಷ ಕೋಟಿ ದ್ರವ್ಯತೆ ಕ್ರಮಗಳನ್ನು ಪ್ರಕಟಿಸಿದೆ.

ಆರ್‌ಬಿಐಗೆ ಆರ್ಥಿಕತೆಯನ್ನು ಬಲಪಡಿಸುವುದೇ ಮೊದಲ ಆದ್ಯತೆಯಾಗಿದೆ. ಹಾಗೆಯೇ ಹಣಕಾಸಿನ ಸ್ಥಿರತೆಯನ್ನುಕೂಡ ಕಾಯ್ದುಕೊಳ್ಳಬೇಕಿದೆ ಎಂದು ಹೇಳಿದ್ದಾರೆ.

ವಿಡಿಯೋ ಸಂವಾದದ ಪ್ರಮುಖಾಂಶಗಳು

-ಆರ್ಥಿಕ ಬೆಳವಣಿಗೆಗೆ ಮೊದಲ ಆದ್ಯತೆ
-ಬ್ಯಾಂಕ್ ಹಾಗೂ ಹಣಕಾಸು ಸಂಸ್ಥೆಗಳು ಕೊರೊನಾ ಲಾಕ್‌ಡೌನ್‌ನಿಂದಾಗಿ ಆರ್ಥಿಕ ದುಸ್ಥಿತಿಯನ್ನು ಅನುಭವಿಸುತ್ತಿವೆ
-ಭಾರತದ ಹಣಕಾಸು ವ್ಯವಸ್ಥೆಯನ್ನು ಬಲಪಡಿಸಲು ಆರ್‌ಬಿಐ ಸಾಕಷ್ಟು ಐತಿಹಾಸಿಕ ಯೋಜನೆಗಳನ್ನು ಕೈಗೊಂಡಿದೆ
-2019ರ ಫ್ರಬ್ರವರಿಯಿಂದ ಆರ್‌ಬಿಐ ರೆಪೋ ದರವನ್ನು 250 ಬೇಸಿಸ್ ಅಂಕವನ್ನು ಕಡಿತಗೊಳಿಸಿದೆ-ಮಾರುಕಟ್ಟೆ ವಿಶ್ವಾಸ ಬಲವರ್ಧನೆಗೆ ಮತ್ತು ಹಣದ ಹರಿಯುವಿಕೆ ಸುಗಮವಾಗಲು ಸಾಂಪ್ರದಾಯಿಕ ಮತ್ತು ಅಸಂಪ್ರದಾಯಿಕ ಕ್ರಮಗಳು.
-ಫೆಬ್ರವರಿಯಿಂದ 9.57 ಲಕ್ಷ ಕೋಟಿ ರೂಪಾಯಿ ಮೊತ್ರದ ಕ್ರಮಗಳು ಆರ್ ಬಿಐನಿಂದ ಪ್ರಕಟ, ಅದು ದೇಶದ ಜಿಡಿಪಿಯ ಶೇಕಡಾ 4.5ಕ್ಕೆ ಸಮ.
-ಎನ್ ಬಿಎಫ್ ಸಿ ಮತ್ತು ಮ್ಯೂಚುವಲ್ ಫಂಡ್ ಗಳ ಮೇಲಿನ ವಿಮೋಚನಾ ಒತ್ತಡಗಳನ್ನು ನಿಗಾವಹಿಸುವುದು.

English summary
Reserve Bank of India (RBI) Governor Shaktikanta Das is in conversation with State Bank of India chairman Rajnish Kumar at the 7th SBI Banking & Economics Conclave through a video call.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X