ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಫಾಸ್ಟ್ಯಾಗ್‌ಗೆ ಹಣ ಹಾಕಲು ಇನ್ನಷ್ಟು ಅವಕಾಶ ನೀಡಿದ ಆರ್‌ಬಿಐ

|
Google Oneindia Kannada News

ನವದೆಹಲಿ, ಡಿಸೆಂಬರ್ 31: ಫಾಸ್ಟ್ಯಾಗ್‌ ಬಳಕೆದಾರರು ತಮ್ಮ ಖಾತೆಗೆ ಹಣ ವರ್ಗಾಯಿಸಲು ಆರ್‌ಬಿಐ ಇನ್ನಷ್ಟು ಅವಕಾಶಗಳನ್ನು ನೀಡಿದೆ.

ಆರ್‌ಬಿಐನಿಂದ ಮಾನ್ಯತೆ ಪಡೆದಿರುವ ನಾನ್ ಬ್ಯಾಂಕಿಂಗ್ ಸಂಸ್ಥೆಗಳು ಪ್ರಿಪೇಯ್ಡ್ ವ್ಯಾಲೆಟ್‌ಗಳು ಹಾಗೂ ಯುಪಿಐ ಖಾತೆಗಳನ್ನು ನೇರವಾಗಿ ಫಾಸ್ಟ್ಯಾಗ್‌ನೊಂದಿಗೆ ಜೋಡಣೆ ಮಾಬಹುದು ಎಂದು ಆರ್‌ಬಿಐ ತಿಳಿಸಿದೆ.

ವಾಹನ ಮಾಲೀಕರಿಗೆ ತಾತ್ಕಾಲಿಕ ನೆಮ್ಮದಿ: ಫಾಸ್ಟ್ಯಾಗ್ ಕಡ್ಡಾಯ ಸದ್ಯಕ್ಕಿಲ್ಲವಾಹನ ಮಾಲೀಕರಿಗೆ ತಾತ್ಕಾಲಿಕ ನೆಮ್ಮದಿ: ಫಾಸ್ಟ್ಯಾಗ್ ಕಡ್ಡಾಯ ಸದ್ಯಕ್ಕಿಲ್ಲ

ಇದಲ್ಲದೆ ಫಾಸ್ಟ್ಯಾಗ್‌ ಬಳಕೆದಾರರು ಈ ಖಾತೆಯನ್ನು ಪಾರ್ಕಿಂಗ್ ಹಣ ಪಾವತಿ ಇಂಧನ ಭರ್ತಿ ಹಾಗೂ ಇತರೆ ವಾಹನ ಸ್ನೇಹಿ ಉಪಯೋಗಗಳಿಗೆ ಬಳಸಲೂ ಕೂಡ ಅವಕಾಶ ನೀಡಲು ನಿರ್ಧರಿಸಿದೆ.

RBI Gave Additional Option To Add Cash To Fastag

ಇದರಿಂದ ಫಾಸ್ಟ್ಯಾಗ್‌ ಇನ್ನಷ್ಟು ಬಳಕೆಸ್ನೇಹಿಯಾಗಲಿದೆ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ಡಿಸೆಂಬರ್ 15ರಿಂದಲೇ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಟೋಲ್ ಸಂಗ್ರಹಕ್ಕೆ ಫಾಸ್ಟ್ಯಾಗ್‌ನ್ನು ಕಡ್ಡಾಯಗೊಳಿಸಿದೆ.

ಇಲ್ಲದಿದ್ದರೆ ಟೋಲ್‌ಗಳಲ್ಲಿ ವಾಹನ ಬಳಕೆದಾರರು ದುಪ್ಪಟ್ಟು ಶುಲ್ಕವನ್ನು ಭರಿಸಬೇಕಿದೆ. ಆದರೆ ಫಾಸ್ಟ್ಯಾಗ್‌ಖಾತೆಗೆ ಹಣ ವರ್ಗಾವಣೆ ಸಂಬಂಧ ಆರ್‌ಬಿಐ ಇನ್ನಷ್ಟು ಮನವಿ ಬಂದ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ.

FASTag ಪಡೆಯೋದು ಹೇಗೆ? App ಬಳಸುವುದು ಹೇಗೆ?FASTag ಪಡೆಯೋದು ಹೇಗೆ? App ಬಳಸುವುದು ಹೇಗೆ?

ಈ ಹಿಂದೆ ಡಿಸೆಂಬರ್ 1ರಿಂದಲೇ ಫಾಸ್ಟ್ಯಾಗ್‌ನ್ನು ಕಡ್ಡಾಯಗೊಳಿಸಲಾಗಿತ್ತು. ಆದರೆ ಇದನ್ನು ಡಿಸೆಂಬರ್ 15ರವರೆಗೆ ವಿಸ್ತರಿಸಲಾಗಿತ್ತು.

English summary
Reserve Bank Of India Gave some additional option to add money to Fastag.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X