ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಾನು ರಾಜಕೀಯಕ್ಕೆ ಬಂದರೆ ಪತ್ನಿ ಜತೆ ಇರಲಾರಳು: ರಘುರಾಂ ರಾಜನ್

|
Google Oneindia Kannada News

ನವದೆಹಲಿ, ಏಪ್ರಿಲ್ 26: ಕೇಂದ್ರ ಸರ್ಕಾರ ಮತ್ತು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ನಿರ್ಧಾರಗಳ ಕಟು ಟೀಕಾಕಾರರಾಗಿರುವ ಆರ್‌ಬಿಐ ಮಾಜಿ ಗವರ್ನರ್ ರಘುರಾಂ ರಾಜನ್ ಅವರು ರಾಜಕೀಯಕ್ಕೆ ಬರಲಿದ್ದಾರೆ ಎಂಬ ವದಂತಿ ಹರಡಿತ್ತು. ಕಾಂಗ್ರೆಸ್ ತನ್ನ ಪ್ರಣಾಳಿಕೆಯಲ್ಲಿ ಬಡವರಿಗೆ ತಿಂಗಳಿಗೆ ಆರು ಸಾವಿರ ರೂಪಾಯಿ ನೀಡುವ 'ನ್ಯಾಯ್' ಯೋಜನೆಯ ರಚನೆಗೆ ರಘುರಾಂ ರಾಜನ್ ಸಲಹೆ ನೀಡಿದ್ದರು. ಹೀಗಾಗಿ ಅವರು ಕಾಂಗ್ರೆಸ್ ಸೇರಲಿದ್ದಾರೆ ಎನ್ನಲಾಗಿತ್ತು. ಅದನ್ನು ಅವರು ನಯವಾಗಿ ನಿರಾಕರಿಸಿದ್ದಾರೆ.

'ಲೈವ್ ಮಿಂಟ್' ಮಾಧ್ಯಮದೊಂದಿಗೆ ಮಾತನಾಡಿರುವ ಅವರು, 'ನಾನು ರಾಜಕೀಯಕ್ಕೆ ಪ್ರವೇಶಿಸಿದರೆ ನಿಮ್ಮ ಜತೆ ಇರುವುದಿಲ್ಲ ಎಂದು ನನ್ನ ಹೆಂಡತಿ ಹೇಳಿದ್ದಾಳೆ' ಎಂದು ತಮ್ಮ ರಾಜಕೀಯ ಪ್ರವೇಶದ ಕುರಿತು ತಮಾಷೆಯಾಗಿ ಪ್ರತಿಕ್ರಿಯಿಸಿದ್ದಾರೆ.

ಭಾರತದ GDP ದರ 7 ಪರ್ಸೆಂಟ್ ಅನ್ನೋದು ಅನುಮಾನ: ರಘುರಾಮ್ ರಾಜನ್ ಭಾರತದ GDP ದರ 7 ಪರ್ಸೆಂಟ್ ಅನ್ನೋದು ಅನುಮಾನ: ರಘುರಾಮ್ ರಾಜನ್

ರಾಜಕೀಯ ಎನ್ನುವುದು ಗದ್ದಲವಲ್ಲ. ಅದು ಎಲ್ಲ ಕಡೆಯೂ ಒಂದೇ. ಅದು ಗದ್ದಲ ಅಥವಾ ಇನ್ನೇನೋ ಅಲ್ಲ. ಆದರೆ, ನನಗೆ ಅದರ ರುಚಿ ಇಲ್ಲ. ಯಾರಾದರೂ ಭಾಷಣ ಮಾಡಿ ವೋಟು ಗಳಿಸಬಹುದು. ಒಳ್ಳೆಯ ಅವಕಾಶಗಳು ಸಿಕ್ಕರೆ ಭಾರತಕ್ಕೆ ಮರಳುತ್ತೇನೆ ಎಂದಿರುವುದು ಯಾರಿಗಾದರೂ ಅಗತ್ಯವಿದ್ದರೆ, ಅವರ ಅನುಕೂಲಕ್ಕೆ ಸರಿಯಾದ ನೆರವು ನೀಡುತ್ತೇನೆ ಎಂದು. ಅದನ್ನು ಮಾಡಲು ನನಗೆ ಸಂತೋಷವಾಗುತ್ತದೆ. ಕೆಲವು ಸಂದರ್ಭಗಳಲ್ಲಿ ಜನರು ಸಲಹೆ ಬಯಸುತ್ತಾರೆ. ಅದನ್ನು ಹರ್ಷದಿಂದ ಕೊಡುತ್ತೇನೆ ಎಂದಿದ್ದಾರೆ.

RBI former governor Raghuram Rajan my wife said she wont stay with me if i join politics

ಅಪನಗದೀಕರಣ, ಜಿಎಸ್ ಟಿಯಿಂದ ಭಾರತ ನಲುಗಿದೆ ಎಂದ ರಘುರಾಮ್ ರಾಜನ್ ಅಪನಗದೀಕರಣ, ಜಿಎಸ್ ಟಿಯಿಂದ ಭಾರತ ನಲುಗಿದೆ ಎಂದ ರಘುರಾಮ್ ರಾಜನ್

ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ನಿಮಗೆ ಸಚಿವ ಸ್ಥಾನ ನೀಡಲಾಗುತ್ತಿದೆ ಎಂಬ ಊಹಾಪೋಹಗಳಿವೆಯಲ್ಲ ಎಂಬ ಪ್ರಶ್ನೆಗೆ ರಾಜನ್, ಅದು ತುಂಬಾ ದೂರದ ಮಾತು. ನಾನು ಇದುವರೆಗೆ ಮಾಡಿರುವ ಕೆಲಸಗಳನ್ನು ಗಮನಿಸಿದಾಗ, ಸಾರ್ವಜನಿಕ ವಲಯದಲ್ಲಿ ನನ್ನ ಪ್ರಾಥಮಿಕ ಕಾರ್ಯಗಳ ಬಗ್ಗೆ ನಿರೀಕ್ಷೆಗಳಿವೆ. ಇಲ್ಲ, ನನ್ನ ಮೊದಲ ಕೆಲಸ ಅಕಾಡೆಮಿಕ್. ನನಗೆ ಈ ಕೆಲಸ ಇಷ್ಟ. ಅಕಾಡೆಮಿಕ್ ಆಗಿ ನಾನು ತೊಡಗಿಸಿಕೊಂಡಿದ್ದೇನೆ. ಇತ್ತೀಚೆಗೆ ಪುಸ್ತಕವೊಂದನ್ನು ಬರೆದಿದ್ದೇನೆ. ಈಗ ನಾನು ಇರುವ ಸ್ಥಾನವನ್ನು ಆನಂದಿಸುತ್ತೇನೆ ಎಂದು ಹೇಳಿದ್ದಾರೆ.

English summary
RBI former governor, economist Raghuram Rajan said in an interview with a media, my wife said she won't stay with me if i join politics.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X