ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಆರ್‌ಬಿಐನ ಡೆಪ್ಯುಟಿ ಗವರ್ನರ್ ಆಚಾರ್ಯ ರಾಜೀನಾಮೆ

|
Google Oneindia Kannada News

ಬೆಂಗಳೂರು, ಜೂನ್ 24: ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ವಿವಾದಿತ ಡೆಪ್ಯುಟಿ ಗವರ್ನರ್ ವಿರಳ್ ಆಚಾರ್ಯ ರಾಜೀನಾಮೆ ನೀಡಿದ್ದಾರೆ.

ಆರ್‌ಬಿಐನ ಯುವ ಡೆಪ್ಯುಟಿ ಗವರ್ನರ್ ಆಗಿದ್ದ ಆಚಾರ್ಯ ಅವರ ಅಧಿಕಾರ ಅವಧಿ ಮುಗಿಯುವ ಆರು ತಿಂಗಳು ಮುನ್ನವೇ ರಾಜೀನಾಮೆ ನೀಡಿದ್ದಾರೆ. ಆಚಾರ್ಯ 2017ರ ಜನವರಿ 23ರಂದು ಅಧಿಕಾರ ವಹಿಸಿಕೊಂಡಿದ್ದರು.

'ಹಸ್ತಕ್ಷೇಪ ಮಾಡಿದರೆ ದೇಶದ ಆರ್ಥಿಕತೆಗೆ ಬೆಂಕಿ ಬಿದ್ದೀತು ಹುಷಾರ್'! 'ಹಸ್ತಕ್ಷೇಪ ಮಾಡಿದರೆ ದೇಶದ ಆರ್ಥಿಕತೆಗೆ ಬೆಂಕಿ ಬಿದ್ದೀತು ಹುಷಾರ್'!

ಕಳೆದ ಒಂದು ವರ್ಷದಿಂದ ಆರ್‌ಬಿಐನಲ್ಲಿ ವಿವಾದ ಏರ್ಪಟ್ಟಿತ್ತು.ಆರ್‌ಬಿಐ ಹಾಗೂ ಕೇಂದ್ರ ಸರ್ಕಾರದ ವಿರುದ್ಧ ಬಹಿರಂಗವಾಗಿಯೇ ಟೀಕೆ ಮಾಡುತ್ತಿದ್ದ ವಿರಲ್ ಆಚಾರ್ಯ ಕೊನೆಗೂ ಆರ್‌ಬಿಐನಿಂದ ಹೊರಬಿದ್ದಿದ್ದಾರೆ.

RBI Deputy Governor Viral Acharya resigns

ಹಿಂದಿನ ಗವರ್ನರ್ ಊರ್ಜಿತ್ ಪಟೇಲ್ ರಾಜೀನಾಮೆಗೂ ಮುನ್ನ ಕೇಂದ್ರ ಸರ್ಕಾರದ ನೀತಿಗಳನ್ನು ವಿರಲ್ ಆಚಾರ್ಯ ಟೀಕಿಸಿದ್ದರು.

ಹಾಗೆಯೇ ಇತ್ತೀಚೆಗೆ ನಡೆದ ವಿತ್ತೀಯ ಸಮಿತಿಯ ಸಭೆಗೂ ಮುನ್ನ ವಿರಳ್ ಆಚಾರ್ಯ ರಾಜೀನಾಮೆ ನೀಡಿದ್ದಾರೆ ಎನ್ನಲಾಗಿದೆ.

ನ್ಯೂಯಾರ್ಕ್‌ನಲ್ಲಿರುವ ವಿಶ್ವವಿದ್ಯಾಲಯಕ್ಕೆ ಪ್ರೊಫೆಸರ್ ಆಗಿ ತೆರಳಲಿದ್ದಾರೆ. ಊರ್ಜಿತ್ ಪಟೇಲ್ ಅವರು ಗವರ್ನರ್ ಸ್ಥಾನಕ್ಕೆ ರಾಜೀನಾಮೆ ನೀಡಿ ತೆರಳಿದಾಗಿನಿಂದಲೂ ಆಚಾರ್ಯ ಅವರಿಗೆ ಈ ಹುದ್ದೆ ಆರಾಮದಾಯಕ ಎನಿಸುತ್ತಿರಲಿಲ್ಲ.

ಇತ್ತೀಚಿನ ವಿತ್ತೀಯ ನೀತಿ ಸಭೆಯಲ್ಲಿ ವಿತ್ತೀಯ ಕೊರತೆ ವಿಷಯವಾಗಿ ಗೌರ್ನರ್ ದಾಸ್ ಹಾಗೂ ವಿರಳ್ ಆಚಾರ್ಯ ನಡುವೆ ತಿಕ್ಕಾಟ ಪ್ರಾರಂಭವಾಗಿತ್ತು. ಇದಕ್ಕೂ ಮುನ್ನ ಕಳೆದ ಅಕ್ಟೋಬರ್ ನಲ್ಲಿ ವಿರಳ್ ಆಚಾರ್ಯ ಆರ್ ಬಿಐ ನ ಸ್ವಾಯತ್ತತೆಯನ್ನು ಉಳಿಸುವ ಅಗತ್ಯತೆ ಕುರಿತು ಮಾತನಾಡಿದ್ದರು.

ಕಳೆದ ಎರಡು ವಿತ್ತೀಯ ನೀತಿ ಸಭೆಗಳಲ್ಲಿ ಆರ್ ಬಿಐ ನ ಹಾಲಿ ಗೌರ್ನರ್ ಗೂ ಡಾ. ಆಚಾರ್ಯಾಗೂ ಭಿನ್ನಾಭಿಪ್ರಾಯ ಮೂಡಿತ್ತು.

English summary
RBI Deputy Governor Viral Acharya resigns, six months before his term ends.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X