ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬ್ಯಾಂಕ್ ಖಾತೆಗೆ ಆಧಾರ್ ಜೋಡಣೆ ಕಡ್ಡಾಯ ಎಂದ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ

|
Google Oneindia Kannada News

ಬ್ಯಾಂಕ್ ಖಾತೆ ಜತೆಗೆ ಆಧಾರ್ ಜೋಡಣೆ ಮಾಡಬೇಕಾ, ಬೇಡವಾ? ಎಂಬ ಗೊಂದಲ ಹಲವು ದಿನಗಳಿಂದ ಇತ್ತು. ಶನಿವಾರ ಈ ಬಗ್ಗೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಸ್ಪಷ್ಟನೆ ನೀಡಿದೆ. ಅಕ್ರಮ ಹಣ ವರ್ಗಾವಣೆ ತಡೆ ನಿಯಮಕ್ಕೆ ತಂದಿರುವ ತಿದ್ದುಪಡಿಯ ಅನುಸಾರ ಕಡ್ಡಾಯವಾಗಿ ಆಧಾರ್ ಅನ್ನು ಬ್ಯಾಂಕ್ ಖಾತೆಗೆ ಜೋಡಣೆ ಮಾಡಬೇಕು ಎಂದು ತಿಳಿಸಿದೆ.

ಆಧಾರ್ ನಿಂದ 9 ಬಿಲಿಯನ್ ಯುಎಸ್ ಡಾಲರ್ ಉಳಿತಾಯ : ನಂದನ್ ನಿಲೇಕಣಿಆಧಾರ್ ನಿಂದ 9 ಬಿಲಿಯನ್ ಯುಎಸ್ ಡಾಲರ್ ಉಳಿತಾಯ : ನಂದನ್ ನಿಲೇಕಣಿ

ಬ್ಯಾಂಕ್ ಖಾತೆಗೆ ಆಧಾರ್ ಜೋಡಣೆ ಕಡಾಯವಲ್ಲ ಎಂದು ಮಾಧ್ಯಮಗಳಲ್ಲಿ ಬಂದ ವರದಿಗಳಿಗೆ ಪ್ರತಿಕ್ರಿಯೆ ನೀಡಿದೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ. ಮಾಹಿತಿ ಹಕ್ಕು ಕಾಯ್ದೆ ಅಡಿ ಸಲ್ಲಿಸಿದ್ದ ಅರ್ಜಿಯೊಂದಕ್ಕೆ ಪ್ರತಿಕ್ರಿಯೆ ನೀಡಿದ್ದ ಆರ್ ಬಿಐ, ಬ್ಯಾಂಕ್ ಖಾತೆಗೆ ಆಧಾರ್ ಸಂಖ್ಯೆ ಜೋಡಣೆ ಮಾಡುವ ಬಗ್ಗೆ ಯಾವುದೇ ಸೂಚನೆ ನೀಡಿಲ್ಲ ಎಂದು ತಿಳಿಸಿತ್ತು.

RBI

ಶನಿವಾರ ಹೊಸದಾಗಿ ಹೇಳಿಕೆ ನೀಡಿರುವ ರಿಸರ್ವ್ ಬ್ಯಾಂಕ್, ಅಕ್ರಮ ಹಣ ವರ್ಗಾವಣೆ ತಡೆ ನಿಯಮಾನುಸಾರ ಆಧಾರ್ ಸಂಖ್ಯೆಯನ್ನು ಬ್ಯಾಂಕ್ ಖಾತೆಗೆ ಜೋಡಣೆ ಮಾಡುವುದು ಕಡ್ಡಾಯ ಎಂದು ತಿಳಿಸಿದೆ.

ಆಧಾರ್ ಜೋಡಣೆ: ಈ ನಾಲ್ಕು ಡೆಡ್ ಲೈನ್ ನೆನಪಿರಲಿಆಧಾರ್ ಜೋಡಣೆ: ಈ ನಾಲ್ಕು ಡೆಡ್ ಲೈನ್ ನೆನಪಿರಲಿ

ಈ ಎಲ್ಲ ನಿಯಮ ಶಾಸನಬದ್ಧವಾಗಿದೆ. ಇನ್ನು ಯಾವುದೇ ಸೂಚನೆಗಳಿಗೆ ಕಾಯದೆ ಬ್ಯಾಂಕ್ ಗಳು ಆ ನಿಯಮಗಳನ್ನು ಜಾರಿಗೆ ತರಬೇಕು ಎಂದು ಕೂಡ ತಿಳಿಸಲಾಗಿದೆ.

ಬ್ಯಾಂಕ್ ಖಾತೆಗೆ ಆಧಾರ್ ಜೋಡಣೆ ಮಾಡುವುದನ್ನು ಕೇಂದ್ರ ಸರಕಾರವು ಕಡ್ಡಾಯ ಮಾಡಿದೆ. ಆದರೆ ಕೆಲವು ಬ್ಯಾಂಕ್ ಗಳು ಇದನ್ನು ಮುಂದೂಡುತ್ತಾ ಬಂದಿದೆ. ಈ ವರ್ಷದ ಡಿಸೆಂಬರ್ ಮೂವತ್ತೊಂದನೇ ತಾರೀಕು ಆಧಾರ್- ಬ್ಯಾಂಕ್ ಖಾತೆ ಜೋಡಣೆಗೆ ಕೊನೆ ದಿನವಾಗಿದೆ.

English summary
While there is still confusion with regard to linking of bank accounts with Aadhaar, the central bank on Saturday cleared the air saying the linkage is mandated under the Prevention of Money-laundering (Maintenance of Records) Second Amendment Rules, 2017.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X