ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹರಿದ ನೋಟು ಬದಲಾವಣೆಗೆ ಹೊಸ ನಿಯಮ ಬಿಡುಗಡೆ ಮಾಡಿದ ಆರ್‌ಬಿಐ

By Manjunatha
|
Google Oneindia Kannada News

ನವದೆಹಲಿ, ಸೆಪ್ಟೆಂಬರ್ 09: ನೋಟು ಅಮಾನ್ಯೀಕರಣದ ನಂತರ ಬಿಡುಗಡೆಯಾದ ಹೊಸ ನೊಟುಗಳ ಬದಲಾವಣೆಗೆ ಆರ್‌ಬಿಐ ಹೊಸ ನಿಯಮಾವಳಿಗಳನ್ನು ಜಾರಿಗೆ ತಂದಿದೆ.

ಈ ಮುಂಚೆ 2000 ಮೌಲ್ಯದ ನೋಟಿನ ಬದಲಾವಣೆಗೆ ನಿಯಮವಿರಲಿಲ್ಲ. ಹಾಗಾಗಿ ಈ ನೋಟುಗಳ ಬದಲಾವಣೆ ಸಾಧ್ಯವಾಗಿರಲಿಲ್ಲ ಆದರೆ ಹೊಸ ನಿಯಮಾವಳಿ ಅನ್ವಯ ಹರಿದ 2000 ಮೌಲ್ಯದ ಸೇರಿದಂತೆ ಎಲ್ಲ ಹೊಸ ನೋಟುಗಳನ್ನೂ ಬದಲಾವಣೆ ಮಾಡಿಕೊಳ್ಳಬಹುದಾಗಿದೆ.

ಅಮಾನ್ಯಗೊಂಡಿದ್ದ ಶೇಕಡಾ 99.3ರಷ್ಟು ನೋಟುಗಳು ಬ್ಯಾಂಕ್ ಗಳಿಗೆ ವಾಪಸ್ಅಮಾನ್ಯಗೊಂಡಿದ್ದ ಶೇಕಡಾ 99.3ರಷ್ಟು ನೋಟುಗಳು ಬ್ಯಾಂಕ್ ಗಳಿಗೆ ವಾಪಸ್

ಹರಿದ ನೋಟುಗಳ ಪೂರ್ಣ ಅಥವಾ ಅರ್ಧ ಮೌಲ್ಯವನ್ನು ವಾಪಸ್ ಪಡೆಯಬಹುದಾಗಿದೆ. ಎಷ್ಟು ಅಳತೆಯಲ್ಲಿ ಹರಿದ ನೋಟುಗಳಿಗೆ ಎಷ್ಟು ಮೌಲ್ಯ ನೀಡಲಾಗುತ್ತದೆ ಎಂದು ಆರ್‌ಬಿಐ ನಿಯಮಾವಳಿ ಪ್ರಕಟಿಸಿದೆ.

RBI announced new guidance for exchange of torn notes

ಕನಿಷ್ಟ 80 ಚದರ ಸೆಂಟಿಮೀಟರ್ ಹರಿದ 2000 ನೋಟಿಗೆ ಅದರ ಪೂರ್ಣ ಮೌಲ್ಯವನ್ನು ಪಡೆಯಬಹುದಾಗಿದೆ. 80 ಚದರ ಸೆಂಟಿಮೀಟರ್ ಗಿಂತಲೂ ಹೆಚ್ಚು ಹರಿದ ಹಾಗೂ 40 ಚದರ ಸೆಂ.ಮೀಗಿಂತಲೂ ಕಡಿಮೆ ಹರಿದ 2000 ಮೌಲ್ಯದ ನೋಟಿಗೆ ಅರ್ಧ ಮೌಲ್ಯವನ್ನು ಪಡೆಯಬಹುದಾಗಿದೆ. 2000 ನೋಟಿನ ಒಟ್ಟು ಅಳತೆ 109.56 ಚದರ ಸೆ.ಮೀ.

'ಎನ್ ಪಿಎದಿಂದ ಆರ್ಥಿಕತೆಗೆ ಹೊಡೆತ ಹೊರತು ಅಪನಗದೀಕರಣದಿಂದಲ್ಲ''ಎನ್ ಪಿಎದಿಂದ ಆರ್ಥಿಕತೆಗೆ ಹೊಡೆತ ಹೊರತು ಅಪನಗದೀಕರಣದಿಂದಲ್ಲ'

ಹೊಸ ನೋಟುಗಳಾದ 200, 100,500, 200, 50 ,20,10 ಎಲ್ಲ ನೋಟುಗಳನ್ನು ಆರ್‌ಬಿಐನ ಬಿಡುಗಡೆ ಮಾಡಿರುವ ಹೊಸ ನಿಯಮದ ಅನ್ವಯ ಬದಲಾವಣೆ ಮಾಡಬಹುದಾಗಿ. ಬದಲಾವಣೆ ಮಾಡಲು ಹಾಗೂ ಮೌಲ್ಯ ಪಡೆಯಲು ನೋಟುಗಳು ಹರಿದಿರಬೇಕಾದ ಪರಿಮಾಣವನ್ನು ಆರ್‌ಬಿಐ ನೀಡಿದೆ.

ರೆಪೋದರ ಏರಿಕೆ ನಿರೀಕ್ಷೆ, ಮತ್ತೆ ಗೃಹ, ವಾಹನ ಸಾಲ ಮೇಲಕ್ಕೆ?ರೆಪೋದರ ಏರಿಕೆ ನಿರೀಕ್ಷೆ, ಮತ್ತೆ ಗೃಹ, ವಾಹನ ಸಾಲ ಮೇಲಕ್ಕೆ?

ಈ ಹಿಂದೆ ಬಿಡುಗಡೆ ಮಾಡಿದ ಆರ್‌ಬಿಐ ನಿಯಮಾವಳಿಗಳಲ್ಲಿ ಹರಿದ ಹೊಸ ನೊಟುಗಳ ಬದಲಾವಣೆಗೆ ನಿಯಮಗಳನ್ನು ಸೇರಿಸಿರಲಿಲ್ಲ. ಹಾಗಾಗಿ ಹರಿದ ಹೊಸ ನೋಟುಗಳನ್ನು ಬ್ಯಾಂಕುಗಳಲ್ಲಿ ತೆಗೆದುಕೊಂಡಿರಲಿಲ್ಲ. ಇನ್ನು ಮುಂದೆ ಹೀಗಾಗದು.

English summary
RBI announced new guidance for exchange of torn notes. Now people can exchange new 200 and 2000 and other banknotes.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X