ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತದ ಕೃಷಿ ಮತ್ತು ಕೈಗಾರಿಕೆಗೆ 'ಶಕ್ತಿ' ತುಂಬಲು 50,000 ಕೋಟಿ

|
Google Oneindia Kannada News

ನವದೆಹಲಿ, ಏಪ್ರಿಲ್.17: ದೇಶದ ಕೃಷಿ, ಸಣ್ಣ ಕೈಗಾರಿಕೆ ಮತ್ತು ಮಧ್ಯಮ ಕೈಗಾರಿಕೆಗಳ ಶ್ರೇಯೋಭಿವೃದ್ಧಿ ದೃಷ್ಟಿಯಿಂದ ಭಾರತೀಯ ರಿಸರ್ವ್ ಬ್ಯಾಂಕ್ ಭರ್ಜರಿ ಕೊಡುಗೆ ಕೊಟ್ಟಿದೆ. ನವದೆಹಲಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಆರ್ ಬಿಐ ಗವರ್ನರ್ ಶಕ್ತಿಕಾಂತ್ ದಾಸ್, 50 ಸಾವಿರ ಕೋಟಿ ನೀಡುವುದಾಗಿ ಘೋಷಿಸಿದ್ದಾರೆ.

ಕೊರೊನಾ ವೈರಸ್ ನಿಯಂತ್ರಿಸುವ ದೃಷ್ಟಿಯಿಂದ ಭಾರತ ಲಾಕ್ ಡೌನ್ ಮಾಡಲಾಗಿದ್ದು, ಇದರಿಂದ ದೇಶದ ಆರ್ಥಿಕತೆ ತೀವ್ರ ಹೊಡೆತ ಕೊಟ್ಟಿದೆ. ದೇಶದ ಆರ್ಥಿಕತೆಗೆ ಶಕ್ತಿ ತುಂಬುವ ಹಾಗೂ ಕೃಷಿ ಮತ್ತು ಸಣ್ಣ ಕೈಗಾರಿಕೆಗಳ ಪುನಶ್ಚೇತನಕ್ಕೆ ಹಲವು ಘೋಷಣೆಗಳನ್ನು ಮಾಡಲಾಗಿದೆ.

ಜಗತ್ತಿನಾದ್ಯಂತ ಸೃಷ್ಟಿಯಾಗಿರುವ ಆರ್ಥಿಕ ಕುಸಿತದ ನಡುವೆ ಭಾರತದಲ್ಲಿನ ಆರ್ಥಿಕ ಪರಿಸ್ಥಿತಿ ಹೇಗಿದೆ. ಕೇಂದ್ರ ಸರ್ಕಾರ ಮತ್ತು ಭಾರತೀಯ ರಿಸರ್ವ್ ಬ್ಯಾಂಕ್ ಏನೆಲ್ಲ ಕ್ರಮಗಳನ್ನು ತೆಗೆದುಕೊಂಡಿವೆ ಎಂಬ ಪ್ರಮುಖ ಅಂಶಗಳನ್ನು ಇಲ್ಲಿ ಪಟ್ಟಿ ಮಾಡಲಾಗಿದೆ.

RBI Announced 50,000 Crore For Boost Indian Agriculture, Factory

ಭಾರತೀಯ ರಿಸರ್ವ್ ಬ್ಯಾಂಕ್ ಪ್ರಮುಖ ಘೋಷಣೆ:

- ವಿಶ್ವದ ಆರ್ಥಿಕತೆ 9 ಟ್ರಿಲಯನ್ ಡಾಲರ್ ನಷ್ಟು ಕುಸಿದಿದ್ದು, ಭಾರತದ ಆರ್ಥಿಕ ಪ್ರಗತಿ ಸದ್ಯ 1.9% ರಷ್ಟು ಇದೆ

- 2021-2022 ರ ವೇಳೆಗೆ ಭಾರತದ ಜಿಡಿಪಿ 7.4% ರಷ್ಟು ವೃದ್ಧಿಸುವ ನಿರೀಕ್ಷೆಯಿದೆ

- ಬ್ಯಾಂಕಿಂಗ್ ಕ್ಷೇತ್ರದಲ್ಲಿ ಸಮರ್ಪಕವಾಗಿ ಹಣದ ಹರಿವು ಕಾಪಾಡಿದ್ದೇವೆ. ಯಾವುದೇ ಬ್ಯಾಂಕ್ ಗಳಲ್ಲಿ ಹಣದ ಕೊರತೆ ಆಗಿಲ್ಲ

- ಕಳೆದ 4 ತಿಂಗಳಲ್ಲಿ ಉತ್ಪಾದನೆ ತೀರಾ ಕಡಿಮೆಯಾಗಿದೆ. ಭಾರತದಲ್ಲಿ ಬೇಡಿಕೆ 25-30% ರಷ್ಟು ಬೇಡಿಕೆ ಕುಸಿತ

- ನಬಾರ್ಡ್, SIDBI, NHB ಗೆ 50 ಸಾವಿರ ಕೋಟಿ ರೂಪಾಯಿ ಮೀಸಲು

- ನಬಾರ್ಡ್ ನಿಂದ ಸಹಕಾರಿ ಬ್ಯಾಂಕ್ ಗೆ 25 ಸಾವಿರ ಕೋಟಿ ಹಣ ಕೃಷಿಗೆ ಬಳಕೆ

- ನಬಾರ್ಡ್ ನಿಂದ 25 ಸಾವಿರ, SIDBI ನಿಂದ 15 ಸಾವಿರ ಕೋಟಿ, HFC ನಿಂಗ 10 ಸಾವಿರ ಕೋಟಿ ಘೋಷಣೆ

- ಜಿ20 ರಾಷ್ಟ್ರಗಳಲ್ಲಿ 1.9 ರಷ್ಟು ಜಿಡಿಪಿ ಬೆಳವಣಿಗೆ
- ರಿವರ್ಸ್ ರಿಪೋ ದರ 25 ಬೇಸಿಸ್ ಪಾಯಿಂಟ್ ನಷ್ಟು ಕಡಿತ
- ರಿವರ್ಸ್ ರಿಪೋ ದರ ಶೇಕಡ 3.75ಕ್ಕೆ ಇಳಿಕೆ
- ಕೊರೊನಾ ವಿರುದ್ಧ ಹೋರಾಡಲು ರಾಜ್ಯಗಳಿಗೆ 60% ರಷ್ಟು ಹೆಚ್ಚುವರಿ ಹಣ
- 2020ರ ಮಾರ್ಚ್ ತಿಂಗಳಿನಲ್ಲಿ ರಫ್ತು ವಹಿವಾಟು ಶೇ 34.6ರಷ್ಟು ಕುಸಿತ ಕಂಡಿದ್ದು, ಜಾಗತಿಕ ಆರ್ಥಿಕ ಬಿಕ್ಕಟ್ಟು ಸಂದರ್ಭಕ್ಕಿಂತ ಅತ್ಯಂತ ತೀವ್ರ ಕುಸಿತ ಎನ್ನಬಹುದು
- ವಿದೇಶಿ ವಿನಿಯಮ ರಿಸರ್ವ್ ಕಾಪಾಡಿಕೊಳ್ಳಲು ಬೇಕಾದ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ

English summary
RBI Announced 50,000 Crore For Boost Indian Agriculture, Factory.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X