ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

2015ರ ಆಗಸ್ಟ್ ಒಳಗೆ ದೇಶದ ಎಲ್ಲ ಗ್ರಾಮಗಳಲ್ಲಿ ಬ್ಯಾಂಕ್

|
Google Oneindia Kannada News

ನವದೆಹಲಿ, ಜ.4 : ದೇಶದ ಪ್ರತಿಯೊಬ್ಬರಿಗೆ ಬ್ಯಾಂಕ್ ಖಾತೆ ಒದಗಿಸುವ ಜನಧನ ಯೋಜನೆ ಯಶಸ್ಸಿನ ಬೆನ್ನಲೇ ಕೇಂದ್ರ ಸರ್ಕಾರ ಎಲ್ಲ ಗ್ರಾಮಗಳಲ್ಲೂ ಬ್ಯಾಂಕ್ ಸ್ಥಾಪನೆಗೆ ಮುಂದಾಗಿದೆ.

ರಿಸರ್ವ್ ಬ್ಯಾಂಕ್ ಸಹಕಾರದಲ್ಲಿ 2015ರ ಆಗಸ್ಟ್ ತಿಂಗಳೊಳಗಾಗಿ 2000ಕ್ಕಿಂತ ಹೆಚ್ಚಿನ ಜನಸಂಖ್ಯೆ ಇರುವ ದೇಶದ ಎಲ್ಲ ಗ್ರಾಮಗಳಲ್ಲೂ ಬ್ಯಾಂಕ್ ಸ್ಥಾಪನೆಯಾಗಬೇಕು ಎಂದು ತಿಳಿಸಲಾಗಿದೆ.[ಪ್ರಧಾನಮಂತ್ರಿ ಜನಧನ ಯೋಜನೆ ಎಂದರೇನು?]

bank

ರಾಜ್ಯ ಮಟ್ಟದಲ್ಲಿ ಎಲ್ಲ ಬ್ಯಾಂಕ್ ಗಳು ಸಭೆ ನಡೆಸಿ ಯೋಜನೆಯ ರೂಪುರೇಷೆ ತಯಾರು ಮಾಡಬೇಕು. ಇದಕ್ಕಾಗಿ ಸಮಿತಿಯೊಂದನ್ನು ರಚನೆ ಮಾಡಲಾಗಿದ್ದು ಎಲ್ಲ ಬ್ಯಾಂಕ್ ಗಳ ಪ್ರತಿನಿಧಿಗಳು ಇರಲಿದ್ದಾರೆ. ದೇಶದ ಆರ್ಥಿಕ ವಲಯದಲ್ಲಿ ಇದೊಂದು ಪ್ರಮುಖ ಯೋಜನೆಯಾಗಲಿದೆ ಎಂದು ಕೇಂದ್ರ ಸರ್ಕಾರದ ಅಧಿಕಾರಿಗಳು ತಿಳಿಸಿದ್ದಾರೆ.[ಕ್ಯಾಂಪಸ್ ಸಂದರ್ಶನಕ್ಕೆ ಅವಕಾಶ ನೀಡಿ: ಬ್ಯಾಂಕ್ ಗಳ ಮನವಿ]

ಕೆವೈಸಿ ಈಗ ಮತ್ತಷ್ಟು ಸರಳ
ಬ್ಯಾಂಕೇತರ ಹಣಕಾಸು ಸಂಸ್ಥೆಗಳ ಗ್ರಾಹಕರ ಮಾಹಿತಿ ದಾಖಲಾತಿ(ಕೆವೈಸಿ)ಯನ್ನು ಮತ್ತಷ್ಟು ಸರಳಗೊಳಿಸಲಾಗಿದೆ. ಇದರೊಂದಿಗೆ ಕೆವೈಸಿಗೆ ಸಂಬಂಧಿಸಿದ ಮಾಹಿತಿ ದಾಖಲು ಮಾಡಲು ನೀಡಿದ್ದ ಸಮಯ ಮಿತಿಯನ್ನು ಮತ್ತಷ್ಟು ವಿಸ್ತರಿಸಲಾಗಿದೆ ಎಂದು ರಿಸರ್ವ್ ಬ್ಯಾಂಕ್ ತಿಳಿಸಿದೆ.

English summary
The Reserve Bank of India (RBI) advanced the roadmap for banks to complete financial inclusion in villages across the country with population above 2000 to 14 August 2015. The reason for the move, the RBI said, is to align the target of its own financial inclusion roadmap with that of Jan Dhan Yojana.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X