ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪಿಎಂ ಕೇರ್ಸ್ ಫಂಡ್‌ನ ಅಡಳಿತ ವ್ಯವಸ್ಥೆಯಲ್ಲಿ ಸುಧಾ ಮೂರ್ತಿ, ರತನ್ ಟಾಟಾ ಮತ್ತಿತರರು

|
Google Oneindia Kannada News

ನವದೆಹಲಿ, ಸೆ. 21: ತುರ್ತು ಪರಿಸ್ಥಿತಿಯಲ್ಲಿ ಹಣದ ನೆರವು ಒದಗಿಸುವ ಉದ್ದೇಶದಿಂದ ಕೇಂದ್ರ ಸರಕಾರ ನಡೆಸುತ್ತಿರುವ ಪಿಎಂ ಕೇರ್ಸ್ ಫಂಡ್‌ನ ಟ್ರಸ್ಟ್‌ಗೆ ರತನ್ ಟಾಟಾ ಸೇರಿದಂತೆ ವಿವಿಧ ಕ್ಷೇತ್ರಗಳ ಗಣ್ಯರನ್ನು ಸೇರಿಸಿಕೊಳ್ಳಲಾಗಿದೆ.

ಟಾಟಾ ಸನ್ಸ್ ಸಂಸ್ಥಾಪಕ ಅಧ್ಯಕ್ಷ ರತನ್ ಟಾಟಾ, ಮಾಜಿ ಸುಪ್ರೀಂಕೋರ್ಟ್ ನ್ಯಾಯಮೂರ್ತಿ ಕೆ.ಟಿ. ಥಾಮಸ್, ಮಾಜಿ ಲೋಕಸಭಾ ಸ್ಪೀಕರ್ ಕರಿಯಾ ಮುಂಡಾ ಮೊದಲಾದವರನ್ನು ಪಿಎಂ ಕೇರ್ಸ್ ಫಂಡ್‌ನ ಟ್ರಸ್ಟೀ ಆಗಿ ನಾಮನಿರ್ದೇಶನ ಮಾಡಲಾಗಿದೆ. ಕೇಂದ್ರ ಗೃಹ ಸಚಿವ ಅಮಿತ್ ಶಾ, ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಈ ಮೊದಲೇ ಟ್ರಸ್ಟೀಗಳಾಗಿದ್ದಾರೆ.

ಭಾರತೀಯ ಶಿಕ್ಷಣ ವ್ಯವಸ್ಥೆ ಪ್ರಾರಂಭಿಸುವ ಅಗತ್ಯವಿದೆ: ಅರವಿಂದ್ ಕೇಜ್ರಿವಾಲ್ಭಾರತೀಯ ಶಿಕ್ಷಣ ವ್ಯವಸ್ಥೆ ಪ್ರಾರಂಭಿಸುವ ಅಗತ್ಯವಿದೆ: ಅರವಿಂದ್ ಕೇಜ್ರಿವಾಲ್

ಇನ್ಫೋಸಿಸ್ ಫೌಂಡೇಶನ್‌ನ ಮಾಜಿ ಅಧ್ಯಕ್ಷೆ ಸುಧಾ ಮೂರ್ತಿ, ಮಾಜಿ ಮಹಾಲೇಖಪಾಲ (ಸಿಎಜಿ) ರಾಜೀವ್ ಮೆಹರಿಷಿ, ಟೀಚ್ ಆಫಾರ್ ಇಂಡಿಯಾದ ಸಹ-ಸಂಸ್ಥಾಪಕ ಆನಂದ್ ಷಾ ಅವರನ್ನು ಪಿಎಂ ಕೇರ್ಸ್ ಫಂಡ್‌ನ ಸಲಹಾ ಮಂಡಳಿಗೆ ನಾಮನಿರ್ದೇಶನ ಮಾಡಲಾಗಿದೆ ಎಂದು ಬುಧವಾರ ಅಧಿಕೃತ ಪ್ರಕಟಣೆಯಲ್ಲಿ ತಿಳಿಸಲಾಗಿದೆ..

Ratan Tata, Sudha Murthy And Others Appointed As PM Cares Fund Trustees, Advisory Board

ನಿನ್ನೆ ಮಂಗಳವಾರ ಪ್ರಧಾನಿ ನರೇಂದ್ರ ಮೋದಿ ಅವರು ಪಿಎಂ ಕೇರ್ಸ್ ಫಂಡ್‌ನ ಟ್ರಸ್ಟೀ ಮಂಡಳಿಯ ಸಭೆ ನಡೆಸಿದ್ದರು. ಟ್ರಸ್ಟ್‌ಗೆ ಹೊಸದಾಗಿ ಸದಸ್ಯರಾದವರು ಆ ಸಭೆಯಲ್ಲಿ ಪಾಲ್ಗೊಂಡಿದ್ದರು. ಕೇಂದ್ರ ಗೃಹ ಸಚಿವ ಅಮಿತ್ ಶಾ, ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರೂ ಜೊತೆಯಲ್ಲಿದ್ದರು.

"ಪಿಎಂ ಕೇರ್ಸ್ ಫಂಡ್‌ನ ಅಗತ್ಯ ಭಾಗವಾಗಿರುವ ಟ್ರಸ್ಟೀಗಳನ್ನು ಪ್ರಧಾನಿಗಳು ಸ್ವಾಗತಿಸಿದರು... ಹೊಸ ಟ್ರಸ್ಟೀಗಳು ಮತ್ತು ಸಲಹಗಾರರ ಪಾಲ್ಗೊಳ್ಳುವಿಕೆಯಿಂದಾಗಿ ಪಿಎಂ ಕೇರ್ಸ್ ಫಂಡ್‌ನ ಕಾರ್ಯನಿರ್ವಹಣೆ ಹೆಚ್ಚು ಸಮರ್ಪಕವಾಗಬಹುದು ಎಂದು ಪ್ರಧಾನಿ ತಿಳಿಸಿದರು" ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಈ ಸಂದರ್ಭದಲ್ಲಿ ಹೊಸದಾಗಿ ನಾಮಾಂಕಿತಗೊಂಡ ಟ್ರಸ್ಟೀಗಳು, ಪಿಎಂ ಕೇರ್ಸ್ ಫಂಡ್‌ನಿಂದ ಕಷ್ಟಕಾಲದಲ್ಲಿ ನೀಡಲಾದ ದೇಣಿಗೆ ನೆರವಿನ ಮಹತ್ವವನ್ನು ತಿಳಿಸಿದರೆನ್ನಲಾಗಿದೆ.

"ತುರ್ತುಸ್ಥಿತಿ ಮತ್ತು ಕಷ್ಟ ಸಂದರ್ಭದಲ್ಲಿ ಪರಿಣಾಮಕಾರಿಯಾಗಿ ಸ್ಪಂದಿಸಲು ಪಿಎಂ ಕೇರ್ಸ್ ವಿಶಾಲ ದೃಷ್ಟಿಕೋನ ಹೊಂದಿರುವುದನ್ನು ಸಭೆಯಲ್ಲಿ ಚರ್ಚಿಸಲಾಯಿತು," ಎಂದು ಹೇಳಲಾಗಿದೆ.

2020ರಲ್ಲಿ ಫಂಡ್ ಸ್ಥಾಪನೆ:
ಕೋವಿಡ್ ಸಾಂಕ್ರಾಮಿಕ ರೋಗ ಪರಿಸ್ಥಿತಿ ಉದ್ಭವಿಸಿದ 2020ರಲ್ಲಿ ಪಿಎಂ ಕೇರ್ಸ್ ಫಂಡ್ ಅನ್ನು ಪ್ರಾರಂಭಿಸಲಾಗಿದ್ದು. ತುರ್ತು ಪರಿಹಾರ ಕ್ರಮಗಳ ಭಾಗವಾಗಿ ಅದರ ಸ್ಥಾಪನೆಯಾಗಿದ್ದು. ಸ್ವತಃ ಪ್ರಧಾನಿಗಳೇ ಅದರ ಛೇರ್ಮನ್. ಈ ಫಂಡ್‌ಗೆ ನೀಡುವ ದೇಣಿಗೆಗೆ ಆದಾಯ ತೆರಿಗೆಯಿಂದ ವಿನಾಯಿತಿ ನೀಡಲಾಗುತ್ತದೆ.

ಪಿಎಂ ಕೇರ್ಸ್ ಫಂಡ್‌ನಿಂದ ಮಕ್ಕಳಿಗೆ ಪ್ರತ್ಯೇಕವಾಗಿ ನಿಧಿ ಸ್ಥಾಪನೆ ಸೇರಿದಂತೆ ವಿವಿಧ ಯೋಜನೆಗಳನ್ನು ಆರಂಭಿಸಲಾಗಿದೆ. ಕೋವಿಡ್ ರೋಗಕ್ಕೆ ತಂದೆ ತಾಯಿ ಅಥವಾ ಪೋಷಕರು, ದತ್ತು ಪೋಷಕರನ್ನು ಕಳೆದುಕೊಂಡು ಅನಾಥವಾದ ಮಕ್ಕಳಿಗೆ 2021ರ ಮೇ 29ರಂದು ಪಿಎಂ ಕೇರ್ಸ್ ಫಂಡ್‌ನಿಂದ ಪ್ರತ್ಯೇಕ ನಿಧಿ ಇಡಲಾಗಿತ್ತು.

(ಒನ್ಇಂಡಿಯಾ ಸುದ್ದಿ)

English summary
Ratan Tata is among few eminent personalites nominated as trustees for PM Cares Fund. Sudha Murthy too was appointed as member of Fund's advisory board.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X