ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

'ಮಹಾರಾಜ'ನಿಗೆ ವೆಲ್‌ಕಮ್‌ ಬ್ಯಾಕ್ ಎಂದ ರತನ್ ಟಾಟಾ

|
Google Oneindia Kannada News

ನವದೆಹಲಿ, ಅಕ್ಟೋಬರ್ 08: ಸುಮಾರು 68 ವರ್ಷಗಳ ಬಳಿಕ ಟಾಟಾಗೆ ಮರಳಿದ 'ಏರ್‌ ಇಂಡಿಯಾ'ವನ್ನು ರತನ್ ಟಾಟಾ ತುಂಬು ಹೃದಯದಿಂದ ಸ್ವಾಗತಿಸಿದ್ದಾರೆ.

ಟಾಟಾ ಸಂಸ್ಥೆಗೆ ಏರ್‌ ಇಂಡಿಯಾ ಮತ್ತೆ ಮರಳುತ್ತಿರುವುದು ಖುಷಿಯ ವಿಚಾರವಾಗಿದೆ, ವಿಶ್ವದಲ್ಲೇ ಅತ್ಯಂತ ಪ್ರಭಾವಿ ಹಾಗೂ ಅತ್ಯುತ್ತಮ ಏರ್‌ಲೈನ್ ಎನಿಸಿಕೊಂಡಿರುವ ಏರ್ ಇಂಡಿಯಾಕ್ಕೆ ಮತ್ತೆ ಹಳೆಯ ಗತ್ತನ್ನು ತರಲು ಟಾಟಾ ಶ್ರಮಿಸಲಿದೆ ಎಂದು ಹೇಳಿದ್ದಾರೆ.

ಏರ್‌ಇಂಡಿಯಾ ಬಿಡ್ ಗೆದ್ದ ಟಾಟಾ ಸನ್ಸ್, ಟಾಟಾ ಪಾಲಾದ ಮಹಾರಾಜ ಏರ್‌ಇಂಡಿಯಾ ಬಿಡ್ ಗೆದ್ದ ಟಾಟಾ ಸನ್ಸ್, ಟಾಟಾ ಪಾಲಾದ ಮಹಾರಾಜ

ಇದಲ್ಲದೆ, ಈ ಹಿಂದೆ ಜಿಆರ್‌ಡಿ ಅವರು ಏರ್‌ ಇಂಡಿಯಾವನ್ನು ಕಟ್ಟಿ ಬೆಳಸಿದ್ದನ್ನು ಕೂಡ ಸ್ಮರಿಸಿರುವ ರತನ್ ಟಾಟಾ ಒಂದೊಮ್ಮೆ ನಮ್ಮ ಮಧ್ಯೆ ಜಿಆರ್‌ಡಿ ಟಾಟಾ ಇದ್ದಿದ್ದರೆ ತುಂಬಾ ಖುಷಿ ಪಡುತ್ತಿದ್ದರು ಎಂದು ಹೇಳಿಕೊಂಡಿದ್ದಾರೆ.

Ratan Tata Reaction After Tata Group Wins Bid For Air India

ಸರ್ಕಾರಿ ಸ್ವಾಧೀನದಲ್ಲಿದ್ದ ದೇಶದ ಪ್ರತಿಷ್ಠಿತ ವಿಮಾನ ಯಾನ ಸಂಸ್ಥೆ ಏರ್ ಇಂಡಿಯಾ ಟಾಟಾ ಗ್ರೂಪ್ ಪಾಲಾಗಿದೆ.

ಹೂಡಿಕೆ ಹಾಗೂ ಸಾರ್ವಜನಿಕ ಆಸ್ತಿ ನಿರ್ವಹಣೆ ಇಲಾಖೆ ಕಾರ್ಯದರ್ಶಿ ತುಹಿನ್ ಕಾಂತ ಪಾಂಡೆ ಹಾಗೂ ನಾಗರಿಕ ವಿಮಾನಯಾನ ಸಚಿವಾಲಯದ ಕಾರ್ಯದರ್ಶಿ ರಾಜೀವ್ ಬನ್ಸಾಲ್ ಅವರು ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ್ದಾರೆ.ಸರ್ಕಾರ ಬಿಡ್‌ಗೆ ಆಹ್ವಾನಿಸಿದಾಗ ಏಳು ಸಂಸ್ಥೆಗಳು ಡಿಸೆಂಬರ್ 2020ರೊಳಗೆ ಅರ್ಜಿ ಸಲ್ಲಿಸಿದ್ದರು.
ಅದರಲ್ಲಿ ಐವರು ಅರ್ಹತೆಯ ಅವಶ್ಯಕತೆಗಳನ್ನು ಪೂರೈಸದ ಕಾರಣ ಅನರ್ಹಗೊಂಡಿದ್ದರು. ಏರ್ ಇಂಡಿಯಾ ವಿಮಾನವನ್ನು ಮೂಲತಃ ಟಾಟಾ ಏರ್‌ಲೈನ್ಸ್ ಎಂದು ಕರೆಯಲಾಗುತ್ತಿತ್ತು.

1932ರಲ್ಲಿ ಜೆಆರ್ ಡಿ ಟಾಟಾ ಅವರು ಟಾಟಾ ಏರ್ ಲೈನ್ಸ್ ಆರಂಭಿಸಿದರು. ಕರಾಚಿಯಿಂದ ಬಾಂಬೆಗೆ ಮೊದಲ ವಿಮಾನಯಾನಕ್ಕೆ ಟಾಟಾ ಪೈಲಟ್ ಆಗಿದ್ದರು.

ವಿಮಾನ ಸಂಸ್ಥೆ ಟಾಟಾ ಅವರ ಕನಸಾಗಿತ್ತು. 1948ರಲ್ಲಿ ಏರ್ ಟ್ರಾನ್ಸ್ ಪೋರ್ಟ್ ಅಸೋಸಿಯೇಷನ್ (ಎಐಟಿಎ) ಸ್ಥಾಪಿಸಿದರು. 1978ರ ತನಕ ಏರ್ ಇಂಡಿಯಾದ ಏಳಿಗೆಗೆ ಶ್ರಮಿಸಿದ್ದರು. ಆದರೆ, ಟಾಟಾ ಕಟ್ಟಿ ಬೆಳೆಸಿದ ಸಂಸ್ಥೆ ರಾಜಕೀಯ ತಂತ್ರಕ್ಕೆ ಕೈ ತಪ್ಪಿತು. ದೇಶಕ್ಕಾಗಿ ಟಾಟಾ ಅವರು ತ್ಯಾಗಕ್ಕೆ ಸಿದ್ಧವಾಗಬೇಕಾಯಿತು.

1953ರಲ್ಲಿ ಅಂದಿನ ಪ್ರಧಾನಿ ಜವಾಹರ ಲಾಲ್ ನೆಹರೂ ಅವರು ಏರ್ ಇಂಡಿಯಾವನ್ನು ಸರ್ಕಾರಿ ಸ್ವಾಮ್ಯದ ಸಂಸ್ಥೆಯನ್ನು ಘೋಷಿಸಲು ಮುಂದಾದಾಗ ಟಾಟಾಗೆ ನಿಜಕ್ಕೂ ಆಘಾತವಾಗಿತ್ತು.

ತಪ್ಪನ್ನು ಸರಿಪಡಿಸುವ ನಿಟ್ಟಿನಲ್ಲಿ ಟಾಟಾ ಅವರನ್ನು ಸಂಸ್ಥೆಯ ಚೇರ್ಮನ್ ಆಗಿ ಮುಂದುವರೆಯುವಂತೆ ನೆಹರೂ ಒಪ್ಪಿಸಿದರು. 1977ರಲ್ಲಿ ಅಂದಿನ ಪ್ರಧಾನಿ ಮೊರಾರ್ಜಿ ದೇಸಾಯಿ ಅವರು ಟಾಟಾ ಅವರನ್ನು ಸಂಸ್ಥೆ ಚೇರ್ಮನ್ ಸ್ಥಾನದಿಂದ ಕೆಳಗಿಸಿದರು. 1946ರಲ್ಲಿ ಟಾಟಾ ಏರ್ ಲೈನ್ಸ್ ಸಾರ್ವಜನಿಕ ಸಂಸ್ಥೆಯಾಗಿ ನಂತರ ಸರ್ಕಾರಿ ಸ್ವಾಮ್ಯದ ಏರ್ ಇಂಡಿಯಾ ಆಗಿದ್ದು ಈಗ ಇತಿಹಾಸ.

ಕೇಂದ್ರ ಬಜೆಟ್‌ನಲ್ಲಿ ಸರ್ಕಾರ ಘೋಷಿಸಿದಟ ಸುಮಾರು 1.75 ಟ್ರಿಲಿಯನ್ ಡಿವೆಸ್ಟ್ ಮೆಂಟ್ ಗುರಿಯನ್ನು ಸಾಧಿಸುವ ಗುರಿಯೊಂದಿಗೆ ಸರ್ಕಾರವು ರಾಷ್ಟ್ರೀಯ ವಿಮಾನಯಾನದ ಖಾಸಗೀಕರಣವನ್ನು FY22ರಲ್ಲಿ ಪೂರ್ಣಗೊಳಿಸಲಾಗುವುದು ಎಂದು ಹೇಳಿತ್ತು.

ಪ್ರಧಾನಿ ನರೇಂದ್ರ ಮೋದಿ ಸರ್ಕಾರವು ನಷ್ಟದಲ್ಲಿರುವ ವೈಮಾನಿಕ ಸಂಸ್ಥೆಯನ್ನು ಮಾರಾಟ ಮಾಡಲು ಮುಂದಾಗಿದೆ. ರಾಷ್ಟ್ರೀಯ ವಾಹಕವನ್ನು ನಡೆಸಲು ಸರ್ಕಾರವು ಪ್ರತಿನಿತ್ಯ ಸುಮಾರು 20 ಸಾವಿರ ಕೋಟಿ ಮಿಲಿಯನ್ ರೂಪಾಯಿಗಳನ್ನು ಕಳೆದುಕೊಳ್ಳುತ್ತಿದೆ. ಇದು 70 ಸಾವಿರ ಕೋಟಿ ಅಧಿಕ ನಷ್ಟವನ್ನು ಉಂಟು ಮಾಡುತ್ತಿದೆ ಎಂದು ಅಧಿಕಾರಿಗಳು ಹೇಳಿದ್ದರು.

English summary
Tata Sons chairman emeritus Ratan Tata today tweeted an old photograph of the company's former chairman JRD Tata getting down from an Air India aircraft, minutes after Tata Sons regained control of the government airline - nearly 70 years after its nationalisation.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X