ಗುವಾಹಟಿ, ಮಾರ್ಚ್ 29: ಅಸ್ಸಾಮಿನಲ್ಲಿ ಇತ್ತೀಚಿನ ದಿನಗಳಲ್ಲಿ ಅತ್ಯಾಚಾರ ಪ್ರಕರಣಗಳು ಹೆಚ್ಚುತ್ತಿರುವ ಕುರಿತು ಕಳವಳ ವ್ಯಕ್ತಪಡಿಸಿದ ಅಸ್ಸಾಂನ ತೆಜ್ಪುರ ಕ್ಷೇತ್ರದ ಸಂಸದ ಆರ್ ಪಿ ಶರ್ಮಾ, ಅತ್ಯಾಚಾರಿಗಳನ್ನು ಸಾರ್ವಜನಿಕವಾಗಿ ಗುಂಡಿಕ್ಕಿ ಕೊಲ್ಲಬೇಕು ಎಂದಿದ್ದಾರೆ.
ಮಹಿಳೆಯರನ್ನು ಅಗೌರವದಿಂದ ನೋಡುವವರಿಗೆ ಈ ಶಿಕ್ಷೆಗಿಂತ ಸೂಕ್ತ ಶಿಕ್ಷೆ ಇಲ್ಲ. ಅತ್ಯಾಚಾರದಂಥ ಹೀನ ಕೃತ್ಯ ಎಸಗುವವರನ್ನು ಸಾರ್ವಜನಿಕವಾಗಿ ಗುಂಡಿಕ್ಕಿ ಕೊಂದರೆ ಮತ್ತೆ ಇಂಥ ಪ್ರಕರಣಗಳು ನಡೆಯುವುದು ನಿಲ್ಲುತ್ತದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಅಪ್ರಾಪ್ತೆ ಮೇಲೆ ಸಾಮೂಹಿಕ ಅತ್ಯಾಚಾರ ಮಾಡಿ ಬೆಂಕಿ ಇಟ್ಟ ಪಾಪಿಗಳು!
ಇತ್ತೀಚೆಗಷ್ಟೇ ಅಸ್ಸಾಮಿನ ನಾಗೂನ್ ಎಂಬಲ್ಲಿ ಐದನೇ ತರಗತಿ ಓದುತ್ತಿದ್ದ ಮಗುವಿನ ಮೇಲೆ ಅತ್ಯಾಚಾರ ಎಸಗಿದ್ದ ಧುರುಳರು, ಆಕೆಯನ್ನು ಸುಟ್ಟು ಕೊಂದಿದ್ದರು. ಈ ಘಟನೆಯ ಹಿನ್ನೆಲೆಯಲ್ಲಿ ಶರ್ಮಾ ಈ ಹೇಳಿಕೆ ನೀಡಿದ್ದಾರೆ.
Oneindia ಬ್ರೇಕಿಂಗ್ ನ್ಯೂಸ್ . ಇಡೀ ದಿನ ತಾಜಾ ಸುದ್ದಿಗಳ ಪಡೆಯಿರ.subscribe to Kannada Oneindia.
ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!