ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಂಜನ್ ಗೋಗಾಯ್ ರಾಜ್ಯಸಭೆ ಪ್ರವೇಶಿಸಿದ ಮೊದಲ ಸಿಜೆಐ ಅಲ್ಲ

|
Google Oneindia Kannada News

ನವದೆಹಲಿ, ಮಾರ್ಚ್ 17 : ರಾಷ್ಟ್ರಪತಿ ರಾಮನಾಥ್ ಕೋವಿಂದ್ ಸುಪ್ರೀಂಕೋರ್ಟ್ ನಿವೃತ್ತ ಮುಖ್ಯ ನ್ಯಾಯಮೂರ್ತಿ ರಂಜನ್ ಗೋಗಾಯ್‌ರನ್ನು ರಾಜ್ಯಸಭೆಗೆ ನಾಮ ನಿರ್ದೇಶನ ಮಾಡಿದ್ದಾರೆ. ಈ ಬಗ್ಗೆ ಈಗ ದೇಶದಲ್ಲಿ ಚರ್ಚೆಗಳು ಆರಂಭವಾಗಿವೆ.

Recommended Video

ಮಹಿಳೆ ರೈಲು ಓಡಿಸುತ್ತಿರುವ ವಿಡಿಯೋ ವೈರಲ್ | Viral | Oneindia Kannada

ಅಯೋಧ್ಯೆ, ರಫೆಲ್ ಸೇರಿದಂತೆ ಪ್ರಮುಖ ಪ್ರಕರಣಗಳ ಬಗ್ಗೆ ತೀರ್ಪು ನೀಡಿದ್ದ ರಂಜನ್ ಗೋಗಾಯ್‌ರನ್ನು ರಾಜ್ಯಸಭೆಗೆ ಆಯ್ಕೆ ಮಾಡಿರುವ ಬಗ್ಗೆ ಪ್ರತಿಪಕ್ಷಗಳು ಸಹ ಪ್ರಶ್ನೆ ಎತ್ತಿವೆ. ಆದರೆ, ಗೋಗಾಯ್ ರಾಜ್ಯಸಭೆಗೆ ನಾಮ ನಿರ್ದೇಶಿತಗೊಂಡ ಮೊದಲ ನಿವೃತ್ತ ಮುಖ್ಯ ನ್ಯಾಯಮೂರ್ತಿಗಳಲ್ಲ.

ರಾಜ್ಯಸಭೆಗೆ ಸಿಜೆಐ ರಂಜನ್ ಗೋಗೊಯ್ ನಾಮನಿರ್ದೇಶನ ರಾಜ್ಯಸಭೆಗೆ ಸಿಜೆಐ ರಂಜನ್ ಗೋಗೊಯ್ ನಾಮನಿರ್ದೇಶನ

ಮುಖ್ಯ ನ್ಯಾಯಮೂರ್ತಿಗಳಾಗಿದ್ದ ರಂಗನಾಥ್ ಮಿಶ್ರಾ ರಾಜ್ಯಸಭೆಗೆ ಆಯ್ಕೆಯಾಗಿದ್ದರು. ಸುಪ್ರೀಂಕೋರ್ಟ್ 21ನೇ ಸಿಜೆಐ ಆಗಿದ್ದ ಅವರು 1990ರ ಸೆಪ್ಟೆಂಬರ್ 25ರ ತನಕ ಕಾರ್ಯ ನಿರ್ವಹಣೆ ಮಾಡಿದ್ದರು. ಅವರು ನಾಮ ನಿರ್ದೇಶನಗೊಂಡಿರಲಿಲ್ಲ, ಕಾಂಗ್ರೆಸ್ ಟಿಕೆಟ್ ಮೂಲಕ ರಾಜ್ಯಸಭೆ ಪ್ರವೇಶಿಸಿದ್ದರು.

ರಾಜ್ಯಸಭಾ ಚುನಾವಣೆ; ಬಿಜೆಪಿ ಬಹುಮತ ಪಡೆಯುವುದು ಕಷ್ಟರಾಜ್ಯಸಭಾ ಚುನಾವಣೆ; ಬಿಜೆಪಿ ಬಹುಮತ ಪಡೆಯುವುದು ಕಷ್ಟ

Ranjan Gogoi Not First Former CJI To Enter Rajya Sabha

ರಂಗನಾಥ್ ಮಿಶ್ರಾ ಮಾನವ ಹಕ್ಕುಗಳ ಆಯೋಗದ ಮೊದಲ ಅಧ್ಯಕ್ಷರು ಸಹ ಆಗಿದ್ದರು. 1984ರ ಸಿಖ್ ವಿರೋಧಿ ದಂಗೆ ಬಗ್ಗೆ ವರದಿ ನೀಡಲು ರಚನೆ ಮಾಡಿದ್ದ ರಂಗನಾಥ್ ಮಿಶ್ರಾ ಆಯೋಗದ ನೇತೃತ್ವ ವಹಿಸಿದ್ದರು. ರಂಗನಾಥ್ ಮಿಶ್ರಾ ಅವರು 1998ರಿಂದ 2004ರ ತನಕ ರಾಜ್ಯಸಭಾ ಸದಸ್ಯರಾಗಿ ಕೆಲಸ ಮಾಡಿದ್ದರು.

ಮುಕೇಶ್ ಅಂಬಾನಿ ಮನವಿಯಂತೆ ರಾಜ್ಯಸಭೆ ಟಿಕೆಟ್ ಕೊಟ್ಟ ಜಗನ್! ಮುಕೇಶ್ ಅಂಬಾನಿ ಮನವಿಯಂತೆ ರಾಜ್ಯಸಭೆ ಟಿಕೆಟ್ ಕೊಟ್ಟ ಜಗನ್!

ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿಗಳಾಗಿದ್ದ ಬಹರುಲ್ ಇಸ್ಲಾಂ ರಾಜ್ಯಸಭೆಗೆ ಮೊದಲು ಆಯ್ಕೆಯಾದ ಸಿಜೆಐ. ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ ಬಹರುಲ್ ಇಸ್ಲಾಂ 1972ರಲ್ಲಿ ಕಾಂಗ್ರೆಸ್ ಟಿಕೆಟ್ ಮೂಲಕ ರಾಜ್ಯಸಭೆ ಪ್ರವೇಶ ಮಾಡಿದ್ದರು.

English summary
Former Chief Justice of India Ranjan Gogoi was nominated to the Rajya Sabha. Justice Gogoi is not the first former CJI to enter Rajya Sabha.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X