ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಈ ಅಂಕಿಅಂಶ ಮೋದಿಗೆ ಮುಜುಗರ ತರದೇ ಇರುತ್ತಾ?

|
Google Oneindia Kannada News

ನವದೆಹಲಿ, ಆ 5: ಎರಡು ತಿಂಗಳ ಹಿಂದೆ ಅಧಿಕಾರಕ್ಕೆ ಬಂದ ನರೇಂದ್ರ ಮೋದಿ ಸರಕಾರ ಮುಜುಗರಕ್ಕೀಡಾಗುವ ಅಂಕಿ ಅಂಶವೊಂದು ಹೊರಬಿದ್ದಿದೆ.

ದೇಶದಲ್ಲಿ ಬಿಜೆಪಿ ಅಧಿಕಾರದಲ್ಲಿರುವ ಎರಡು ರಾಜ್ಯಗಳಲ್ಲಿ ಬಡತನದ ಪ್ರಮಾಣ ಗಣನೀಯವಾಗಿ ಹೆಚ್ಚಾಗಿದೆ ಎಂದು ಆರ್ಥಿಕ ವ್ಯವಹಾರದ ಸಮಿತಿ ನೀಡಿದ ಅಂಕಿ ಅಂಶ ಬಿಜೆಪಿಯನ್ನು ತಲೆತಗ್ಗಿಸುವಂತೆ ಮಾಡಿದೆ.

ಬಿಜೆಪಿ ಅಧಿಕಾರದಲ್ಲಿರುವ ಡಾ.ರಮಣ್ ಸಿಂಗ್ ನೇತೃತ್ವದ ಛತ್ತೀಸಗಢ ರಾಜ್ಯ, ದೇಶದ ಬಡತನದ ಪಟ್ಟಿಯಲ್ಲಿರುವ ಮೊದಲ ರಾಜ್ಯವಾಗಿದೆ. ಬಿಜೆಪಿ ಇಲ್ಲಿ ಸತತವಾಗಿ ಎರಡು ಅವಧಿಯಲ್ಲಿ ಅಧಿಕಾರದಲ್ಲಿರುವುದು ಗಮನಿಸಬೇಕಾದ ವಿಚಾರ.

ಅಂಕಿ ಅಂಶದ ಪ್ರಕಾರ ದೇಶದ ನಾಲ್ಕು ಅತಿಹೆಚ್ಚು ಬಡತನ ಹೊಂದಿರುವ ರಾಜ್ಯಗಳಾದ ಛತ್ತೀಸಗಢ, ಒರಿಸ್ಸಾ, ಮಧ್ಯಪ್ರದೇಶ, ಜಾರ್ಖಂಡ್ ರಾಜ್ಯಗಳಲ್ಲಿ ಬಿಜೆಪಿ ಎರಡು ರಾಜ್ಯದಲ್ಲಿ ಅಧಿಕಾರದಲ್ಲಿದೆ.

ನಗರ ಮತ್ತು ಗ್ರಾಮೀಣ ಪ್ರದೇಶದಲ್ಲಿನ ಜನರ ಜೀವನಮಟ್ಟ, ದೈನಂದಿನ ಆದಾಯ ಸೇರಿದಂತೆ ಪ್ರಮುಖ ಅಂಶಗಳನ್ನಾಧಾರಿಸಿ ಈ ಅಂಕಿ ಅಂಶ ಬಿಡುಗಡೆ ಮಾಡಲಾಗಿದೆ.

ರಂಗರಾಜನ್ ಸಮಿತಿ ವರದಿ

ರಂಗರಾಜನ್ ಸಮಿತಿ ವರದಿ

ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್ ಸರಕಾರದಲ್ಲಿ ಆರ್ಥಿಕ ವ್ಯವಹಾರ ಸಮಿತಿಯ ಅಧ್ಯಕ್ಷರಾಗಿದ್ದ ಸಿ ರಂಗರಾಜನ್ ಅವರ ನೇತೃತ್ವದ ಸಮಿತಿ ನಡೆಸಿದ ಹೊಸ ಸಮೀಕ್ಷೆಯ ಅಂಕಿ ಅಂಶದ ಪ್ರಕಾರ ದೇಶದ ಹತ್ತು ಅತಿ ಹೆಚ್ಚು ಬಡತನ ಹೊಂದಿರುವ ರಾಜ್ಯಗಳಲ್ಲಿ ಬಿಜೆಪಿ ಆಡಳಿತದಲ್ಲಿರುವ ಎರಡು ರಾಜ್ಯಗಳೂ ಸೇರಿವೆ.

ದಕ್ಷಿಣಭಾರತದ ಒಂದು ರಾಜ್ಯದಲ್ಲಿ ಬಡತನ ಬಹಳ ಕಮ್ಮಿ

ದಕ್ಷಿಣಭಾರತದ ಒಂದು ರಾಜ್ಯದಲ್ಲಿ ಬಡತನ ಬಹಳ ಕಮ್ಮಿ

ಬಿಡುಗಡೆಯಾದ ವರದಿಯ ಪ್ರಕಾರ ದಕ್ಷಿಣ ಭಾರತದದಲ್ಲಿ ಕೇರಳ ರಾಜ್ಯ ಅತಿ ಕಡಿಮೆ ಬಡವರನ್ನು ಹೊಂದಿದೆ. ರಾಜ್ಯದ ಒಟ್ಟಾರೆ ಜನಸಂಖ್ಯೆಯ ಶೇ. 11.3 ಜನ ಬಡತನ ರೇಖೆಗಿಂತ ಕೆಳಗಿರುವುದು ಸಮಾಧಾನಕರ ಸಂಗತಿ.

ಬಿಹಾರ, ಉತ್ತರಪ್ರದೇಶ ಕಥೆಯೇನು?

ಬಿಹಾರ, ಉತ್ತರಪ್ರದೇಶ ಕಥೆಯೇನು?

ದೇಶದ ಹೆಚ್ಚು ಜನಸಂಖ್ಯೆ ಹೊಂದಿರುವ ಈ ಎರಡು ರಾಜ್ಯಗಳಲ್ಲಿ ಬಡತನ ರುದ್ರತಾಂಡವಾಡುತ್ತಿದೆ. ಬಿಹಾರದಲ್ಲಿ ಸುಮಾರು ನಾಲ್ಕುವರೆ ಮತ್ತು ಉತ್ತರಪ್ರದೇಶದಲ್ಲಿ ಎಂಟು ಕೋಟಿಗೂ ಅಧಿಕ ಮಂದಿ ಕಡು ಬಡವರಿದ್ದಾರೆ.

ದೀದಿ ರಾಜ್ಯವಾದರೂ ಸುಧಾರಿಸುತ್ತಿದಿಯಾ?

ದೀದಿ ರಾಜ್ಯವಾದರೂ ಸುಧಾರಿಸುತ್ತಿದಿಯಾ?

ಕೇಂದ್ರಾಡಳಿತ ಪ್ರದೇಶವಾದ ಅಂಡಮಾನ್ ನಿಕೋಬಾರ್, ದಿಯು, ದಾದ್ರ, ನಗರಹವೇಲಿಯಲಿ ಮತ್ತು ಪಶ್ಚಿಮ ಬಂಗಾಳದಲ್ಲೂ ಬಡತನದ ಪ್ರಮಾಣ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವುದು ನೋವಿನ ಅಂಕಿಅಂಶಗಳಲ್ಲೊಂದು.

ಅತ್ಯಂತ ಕಮ್ಮಿ ಬಡವರು ಇರುವ ರಾಜ್ಯದ ಹೆಗ್ಗಳಿಕೆ

ಅತ್ಯಂತ ಕಮ್ಮಿ ಬಡವರು ಇರುವ ರಾಜ್ಯದ ಹೆಗ್ಗಳಿಕೆ

ಬಿಜೆಪಿ ಅಧಿಕಾರದಲ್ಲಿರುವ ಗೋವಾ, ಅತ್ಯಂತ ಕಮ್ಮಿ ಬಡವರು ಇರುವ ರಾಜ್ಯ (ಶೇ. 6.3). ನಂತರದ ಸ್ಥಾನ ಹಿಮಾಚಲ ಪ್ರದೇಶ, ಕೇರಳ, ಹರ್ಯಾಣ.

ಗುಜರಾತ್ ನಲ್ಲಿ ಎಷ್ಟು ಶೇಕಡವಾರು ಬಡವರು?

ಗುಜರಾತ್ ನಲ್ಲಿ ಎಷ್ಟು ಶೇಕಡವಾರು ಬಡವರು?

ಸತತವಾಗಿ ನರೇಂದ್ರ ಮೋದಿ ಮುಖ್ಯಮಂತ್ರಿಯಾಗಿದ್ದ ಗುಜರಾತ್ ನಲ್ಲೂ ಬಡತನದ ಪ್ರಮಾಣ ಶೇ. 27.4ರಷ್ಟು. ಬಿಹಾರದಲ್ಲಿ ಬಡವರ ಸಂಖ್ಯೆ ಹೆಚ್ಚಿದ್ದರೂ, ದಿನದಿಂದ ದಿನಕ್ಕೆ ಇದರ ಪ್ರಮಾಣ ಕಮ್ಮಿಯಾಗುತ್ತಿದೆ.

English summary
Rangarajan committee report, 2 BJP ruling states in the top 4 poverty list.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X