ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಂಜಾನ್ ಹಬ್ಬಕ್ಕೆ ಶುಭಾಶಯ ಕೋರಿದ ಮೋದಿ, ಎಚ್ಡಿಕೆ

|
Google Oneindia Kannada News

ನವದೆಹಲಿ, ಜೂನ್ 16: ಮುಸ್ಲಿಂ ಬಾಂಧವರ ಪವಿತ್ರ ಮಾಸವಾದ ರಂಜಾನ್ ಮತ್ತು ಉಪವಾಸ ಅಂತ್ಯವನ್ನು ಸೂಚಿಸುವ ಈದ್ ಅಲ್ ಫಿತರ್ ಹಬ್ಬವನ್ನು ಇಂದು ದೇಶದೆಲ್ಲೆಡೆ ಸಂಭ್ರಮದಿಂದ ಆಚರಿಸಲಾಗುತ್ತಿದೆ.

ದ್ವೇಷ, ಅಸೂಯೆಯನ್ನು ಮರೆತು ಸಾಮರಸ್ಯದಿಂದ ಬದುಕು ಸವೆಸುವ ಸಂಕಲ್ಪದೊಂದಿಗೆ ಆಚರಿಸಲ್ಪಡುವ ಈ ಹಬ್ಬಕ್ಕೆ ದೇಶದಾದ್ಯಂತ ಗಣ್ಯರು ಶುಭಾಶಯ ಕೋರಿದ್ದಾರೆ.

ಎಲ್ಲೆಡೆ ಈದ್ ಸಡಗರ: ದಾನದ ಹಬ್ಬದ ಮಹತ್ವವೇನು ಗೊತ್ತೆ?ಎಲ್ಲೆಡೆ ಈದ್ ಸಡಗರ: ದಾನದ ಹಬ್ಬದ ಮಹತ್ವವೇನು ಗೊತ್ತೆ?

ದೇಶದ ಪ್ರಮುಖ ಮಸೀದಿಗಳಲ್ಲಿ ಸಾವಿರಾರು ಮುಸ್ಲಿಂರು ಪ್ರಾರ್ಥನೆ ಸಲ್ಲಿಸಿ ರಂಜಾನ್ ಆಚರಿಸುತ್ತಿದ್ದಾರೆ. ಒಂದು ತಿಂಗಳ ಕಠಿಣ ಉಪವಾಸಕ್ಕೆ ಈ ದಿನ ಅಂತ್ಯ ಸಿಗಲಿದ್ದು, ಹೊಸ ಬಟ್ಟೆಗಳನ್ನು ತೊಟ್ಟು, ತಮ್ಮಿಷ್ಟಿದ ಖಾದ್ಯಗಳನ್ನು ತಯಾರಿಸಿ, ತಿಂದು ಸಂತಸ ಪಡುವುದು ಹಬ್ಬದ ವೈಶಿಷ್ಟ್ಯ.

ಒಗ್ಗಟ್ಟು ಮತ್ತು ಸಾಮರಸ್ಯ

ಈದ್ ಮುಬಾರಕ್! ಈ ದಿನ ನಮ್ಮ ಸಮಾಜದ ಒಗ್ಗಟ್ಟು ಮತ್ತು ಸಾಮರಸ್ಯ ಕೊಂಡಿಯನ್ನು ಮತ್ತಷ್ಟು ಗಟ್ಟಿಗೊಳಿಸಲಿ ಎಂದು ರಂಜಾನ್ ಶುಭಾಶಯ ಕೋರಿದ್ದಾರೆ ಪ್ರಧಾನಿ ನರೇಂದ್ರ ಮೊದಿ.

Array

ಶಾಂತಿ, ನೆಮ್ಮದಿ ನೆಲೆಸಲಿ

ಈದ್ ಮುಬಾರಕ್! ಆ ದೇವರು ನಿಮಗೆಲ್ಲರಿಗೂ ಶಾಂತಿ, ನೆಮ್ಮದಿ, ಸಂತೋಷ ಮತ್ತು ಉತ್ತಮ ಆರೋಗ್ಯ ನೀಡಿ ಹರಸಲಿ ಎಂದಿದ್ದಾರೆ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ.

ವಿಶ್ವಾದ್ಯಂತ ಪವಿತ್ರ ರಂಜಾನ್‌ ಆಚರಣೆ: ಚಿತ್ರಗಳಲ್ಲಿ ನೋಡಿವಿಶ್ವಾದ್ಯಂತ ಪವಿತ್ರ ರಂಜಾನ್‌ ಆಚರಣೆ: ಚಿತ್ರಗಳಲ್ಲಿ ನೋಡಿ

ಭ್ರಾತೃತ್ವ ನೆಲೆಗೊಳ್ಳಲಿ

ಈದ್ ಅಲ್ ಫಿತರ್ ನ ಈ ದಿನ ಎಲ್ಲರಿಗೂ ನನ್ನ ಶುಭ ಹಾರೈಕೆಗಳು. ಈ ಹಬ್ಬ ಎಲ್ಲರಿಗೂ ಶಾಂತಿ ನೀಡಲಿ, ಸಮಾಜದಲ್ಲಿ ಭ್ರಾತೃತ್ವ ನೆಲೆಗೊಳ್ಳಲಿ ಎಂದು ಹಾರೈಸುತ್ತೇನೆ ಎಂದಿದ್ದಾರೆ ಕೇಂದ್ರ ವಿತ್ತ ಸಚಿವ ಅರುಣ್ ಜೇಟ್ಲಿ.

ಸುಖ, ಸಮೃದ್ಧಿ, ನೆಮ್ಮದಿ ತರಲಿ

ರಂಜಾನ್ ಹಬ್ಬವು ನಾಡಿನ ಸಮಸ್ತ ಮುಸ್ಲಿಂ ಬಂಧಿಗಳಿಗೆ ಸುಖ, ಸಮೃದ್ಧಿ ಹಾಗೂ ನೆಮ್ಮದಿಯನ್ನು ತರಲಿ ಎಂದು ಹಾರೈಸಿದ್ದಾರೆ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ.

ಶಾಂತಿ ಸೌಹಾರ್ದತೆ ಮೇಳೈಸಲಿ

ನಾಡಿನ ಜನತೆಗೆ ಈದ್ ಉಲ್ ಫಿತರ್ ನ ಹಾರ್ದಿಕ ಶುಭಾಶಯಗಳು. ನಾಡಿನಲ್ಲಿ‌ ಶಾಂತಿ, ಸೌಹಾರ್ದತೆ ಮೇಳೈಸಲು ಈ ಪವಿತ್ರ ಹಬ್ಬದ ಆಶಯ ಸ್ಪೂರ್ತಿಯಾಗಲಿ ಎಂದು ಹಾರೈಸುತ್ತೇನೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಟ್ವೀಟ್ ಮಾಡಿದ್ದಾರೆ.

ಮುಸ್ಲಿಂ ಸಹೋದರರಿಗೆ ಶುಭಾಶಯ

ನನ್ನ ಎಲ್ಲಾ ಮುಸ್ಲಿಂ ಸಹೋದರ-ಸಹೋದರಿಯರಿಗೆ ಈದ್ ಉಲ್ ಫಿತರ್ ನ ಶುಭಾಶಯಗಳು. ಈ ಹಬ್ಬ ನಮ್ಮೆಲ್ಲ ಬದುಕಿನಲ್ಲಿ ಶಾಂತಿ, ನೆಮ್ಮದಿ ತರಲಿ ಎಂದು ಹಾರೈಸುತ್ತೇನೆ ಎಂದಿದ್ದಾರೆ ರಾಜ್ಯ ಜಲಸಂಪನ್ಮೂಲ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಿ ಕೆ ಶಿವಕುಮಾರ್.

English summary
Prime minister Narendra Modi, HD Kumaraswamy and many others wished muslim brothers and sisters for Ramzan or eid Al Fitr.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X