• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ತಾವೇ ತೋಡಿದ ಹಳ್ಳಕ್ಕೆ ಬಿದ್ದ ರಮ್ಯಾ... ಇದು ರಮ್ಯ 'ರಾಹು ಕಾಲ'!

|
   ವಿಜಯ್ ಮಲ್ಯಾನ ಹೊಗಳೋಕೆ ಹೋಗಿ ತಾವೇ ತೊಂದ್ರೆಯಲ್ಲಿ ಸಿಲುಕಿಕೊಂಡರು ರಮ್ಯಾ | Oneindia Kannada

   ಬೆಂಗಳೂರು, ಏಪ್ರಿಲ್ 30: ದೇಶ ಬಿಟ್ಟು ಪರಾರಿಯಾಗಿರುವ ವಿಜಯ್ ಮಲ್ಯ ದೇಶಭ್ರಷ್ಟನಾಗಲು ಬಿಜೆಪಿ ಸಹಾಯ ಮಾಡಿದೆ ಎಂದು ಕೆಂಡಕಾರುತ್ತಿರುವ ರಮ್ಯಾ ಅಕಾ ದಿವ್ಯಾ ಸ್ಪಂದನಾ ಅವರು ಕೆಲ ವರ್ಷಗಳ ಹಿಂದೆ 'ನೈಸ್ ಗೈ' ಮಲ್ಯ ಅವರನ್ನು ಹೊಗಳಿರುವ ಟ್ವೀಟ್ ಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಅವರಿಗೆ ಭಾರೀ ಮುಜುಗರ ತಂದಿವೆ.

   ಮಲ್ಯ ಒಡೆತನದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಬ್ರಾಂಡ್ ಅಂಬಾಸಡರ್ ಆಗಿದ್ದ ರಮ್ಯಾ, 'ಮಲ್ಯ ಅವರೇ ನಿಮಗೆ ದೊಡ್ಡ ಥ್ಯಾಂಕ್ಸ್. ಹಾಂಗ್ ಕಾಂಗ್ ನಲ್ಲಿ ನನ್ನ ಮೊದಲ ಹಾಲಿಡೇ. ಮಲ್ಯ ಅವರು ನಿಜವಾಗಿಯೂ ಅತ್ಯುತ್ತಮ ಮತ್ತು ನಿಸ್ಪೃಹ ವ್ಯಕ್ತಿ' ಎಂದು ಮದ್ಯ ದೊರೆ ಮಲ್ಯ ಮೇಲೆ ಹೊಗಳಿಕೆಯ ಸುರಿಮಳೆಯನ್ನೇ ಸುರಿಸಿದ್ದರು.

   ಸಿಕ್ಕನಂತರ ವೋಟು ಮಂಡ್ಯದಿಂದ ಗಂಟುಮೂಟೆ ಕಟ್ಟು!

   ನರೇಂದ್ರ ಮೋದಿ ಸರಕಾರದ ಹಳೆಯ ಚಿತ್ರಗಳನ್ನು, ಹಳೆಯ ಟ್ವೀಟ್ ಗಳನ್ನು ಆಗಾಗ ನೆನೆಪಿಸುತ್ತ, ಕೇಂದ್ರ ಸರಕಾರದ ಕಾಲೆಳೆಯುವ ಪ್ರಯತ್ನ ಮಾಡುತ್ತಲೇ ಇರುವ ರಮ್ಯಾ ಈಗ ತಾವೇ ಅಂತಹ ಸುಳಿಯಲ್ಲಿ ಸಿಲುಕಿದ್ದಾರೆ. ಅಮಿತ್ ಮಾಳವೀಯ, ಶೋಭಾ ಕರಂದ್ಲಾಜೆ ಮುಂತಾದವರು, ಇದು ರಮ್ಯಾ ಮತ್ತು ಕಾಂಗ್ರೆಸ್ ನ ಡಬಲ್ ಸ್ಟಾಂಡರ್ಡ್ ಅಲ್ಲವೆ ಎಂದು ತರಾಟೆಗೆ ತೆಗೆದುಕೊಳ್ಳುತ್ತಿದ್ದಾರೆ.

   ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

   ಒಟ್ಟಿನಲ್ಲಿ #RahulKaDivyaGhotala ಹ್ಯಾಶ್ ಟ್ಯಾಗ್ ನ ತರಹೇವಾರಿ ಟ್ವಿಟ್ಟರ್ ಗಳು ಟ್ವಿಟ್ಟಿಗರಿಗೆ ರಸದೌತಣ ಬಡಿಸಿದೆ!

   ಕಾಂಗ್ರೆಸ್ ಡಬಲ್ ಸ್ಟಾಂಡರ್ಡ್

   ನಿಮ್ಮ ಕಾಂಗ್ರೆಸ್ ವಿಜಯ ಮಲ್ಯ ಅವರೊಂದಿಗೆ ಸೇರಿ ಎಂಥ ಭ್ರಷ್ಟಾಚಾರ ನಡೆಸಿದೆ ಎಂಬುದನ್ನು ವಿವರಿಸುತ್ತೀರಾ? ಈ ದೇಶ ಭ್ರಷ್ಟ ನಿಮ್ಮ ವಿರಾಮಕ್ಕೆ ಸ್ಪಅನ್ಸರ್ ಮಾಡಿದರೆ?ಕಾಂಗ್ರೆಸ್ಸಿನ ಡಬಲ್ ಸ್ಟಾಂಡರ್ಡ್ ಅನ್ನು ವಿವರಿಸಲು ಇಷ್ಟು ಸಾಕಲ್ಲವೇ ಎಂದು ಪ್ರಶ್ನಿಸಿದ್ದಾರೆ ಉಡುಪಿ-ಚಿಕ್ಕಮಗಳೂರು ಸಂಸದೆ ಶೋಭಾ ಕರಂದ್ಲಾಜೆ.

   ಮೋದಿ ಟೀಕಿಸುವ ಭರದಲ್ಲಿ ರಮ್ಯಾ ಮತ್ತೆ ಎಡವಟ್ಟು: ಟ್ವಿಟ್ಟಿಗರ ಮಹಾಪೂಜೆ

   ಮಲ್ಯಗೆ ರಾಜ ಮರ್ಯಾದೆ ನೀಡಿದ್ದೇಕೆ?

   ಮನಮೋಹನ್ ಸಿಂಗ್ ಮತ್ತು ಪಿ.ಚಿದಂಬರಂ ಇಬ್ಬರೂ ಮಲ್ಯ ಅವರಿಗೆ ಸಾಲ ನೀಡುವಲ್ಲಿ ಬ್ಯುಸಿಯಾಗಿದ್ದರು. ಸೋನಿಯಾ ಗಾಂಧಿ ಅವರು ವಿಮಾನಯಾನ ಸೌಲಭ್ಯ ಪಡೆಯುತ್ತಿದ್ದರು, ದಿವ್ಯ ಅವರು ಮಲ್ಯ ಅವರ ಹಣದಲ್ಲಿ ರಜಾದಿನ ಕಳೆಯುತ್ತಿದ್ದರು. ಯುಪಿಎ ಸರ್ಕಾರದ ಅವಧಿಯಲ್ಲಿ ವಿಜಯ ಮಲ್ಯ ಅವರಿಗೆ ಈ ಪರಿ ರಾಜಮರ್ಯಾದೆ ನೀಡಿದ್ದು ಏಕೆ ಎಂದು ಪ್ರಶ್ನಿಸಿದ್ದಾರೆ ಅಮಿತ್ ಮಾಳವೀಯ.

   ಕಾಂಗ್ರೆಸ್ ಕೈ ಭ್ರಷ್ಟಾಚಾರದ ಜೊತೆಗೆ

   ರಾಹುಲ್ ಗಾಂಧಿಯವರೇ ಉತ್ತರ ನೀಡಿ. ದಿವ್ಯ ಸ್ಪಂದನ ಅವರಿಗೂ ಮಲ್ಯ ಅವರಿಗೂ ಏನು ಸಂಬಂಧ? ಹಾಂಗ್ ಕಾಂಗ್ ನಲ್ಲಿ ರಜಾ ಕಳೆಯಲು ಉಚಿತ ಟಿಕೆಟ್ ನೀಡಿದ್ದು ಏಕೆ? ಸಾಲ್ ಕೊಟ್ಟು ಲಾಭ ಪಡೆಯುವ ಸ್ಕೀಮಾ? ಕಾಂಗ್ರೆಸ್ ಕಾ ಹಾತ್, ಕರಪ್ಷನ್ ಕೆ ಸಾಥ್ ಎಂದಿದ್ದಾರೆ ಯೋಗೇಶ್.

   ರಾಹುಲ್ ಗಾಂಧಿಯವರೆ, ಈಗ ಉತ್ತರ ನೀಡಿ

   ರಾಹುಲ್ ಗಾಮಧಿಯವರ ಆಪ್ತೆ ರಮ್ಯಾ ಪ್ರಕಾರ ವಿಜಯ ಮಲ್ಯ ಒಬ್ಬ ಅತ್ಯುತ್ತಮ ವ್ಯಕ್ತಿ. ಹೀಗಿರುವಾಗ ಕಾಂಗ್ರೆಸ್ ಮಲ್ಯ ಗೆ ಕೋಟಿಗಟ್ಟಲೆ ಸಾಲ ನೀಡಿದ್ದರಲ್ಲಿ ಅಚ್ಚರಿಯೇನಿಲ್ಲ. ಆತ ಪರಾರಿಯಾಗಲೂ ಸಹಾಯಮಾಡಿರಬಹುದು. ಮೋದಿಯವರನ್ನು ಪದೇ ಪದೇ ಪ್ರಶ್ನಿಸುವ ರಾಹುಲ್ ಗಾಂಧಿ ಈಗ ಉತ್ತರ ನೀಡಲಿ ಎಂದಿದ್ದಾರೆ ಮುಸ್ಕಾನ್.

   ಕಾಂಗ್ರೆಸ್ ದೇಶವನ್ನು ಹಾಳುಮಾಡುತ್ತಿದೆ

   ಜನರು ಕಾಂಗ್ರೆಸ್ಸಿನ ದ್ವಿಮುಖ ನೀತಿಯನ್ನು ಅರ್ಥಮಾಡಿಕೊಳ್ಳುವ ಅಗತ್ಯವಿದೆ. ಕಾಂಗ್ರೆಸ್ ದೇಶವನ್ನು ಹಾಳುಮಾಡುತ್ತಿದೆ ಎಂದಿದ್ದಾರೆ ಅಂಶು ಅಗರ್ವಾಲ್.

   ಅದು ಜನರ ದುಡ್ಡು, ಮಲ್ಯದಲ್ಲ!

   ದಿವ್ಯ ಸ್ಪಂದನ ಅವರೇ, ನೀವು ವಿದೇಶಿ ಪ್ರವಾಸಕ್ಕಾಗಿ ಪಡೆದ ದುಡ್ಡು ಮಲ್ಯದಲ್ಲ. ಅದು ಭಾರತದ ಸಾಮಾನ್ಯ ಜನ ಬೆವರು ಹರಿಸಿ ಸುರಿಸಿದ ದುಡ್ಡು. ನಿಮ್ಮ ವಿದೇಶಿ ಪ್ರಯಾಣಕ್ಕೆ ಹಣ ನೀಡಿದ್ದಕ್ಕೆ ಮೊದಲು ಜನರಿಗೆ ಧನ್ಯವಾದ ಅರ್ಪಿಸಿ. ಈಗ ನೀವು ಎಲ್ಲೆಲ್ಲಿಂದ ಕಿಕ್ ಬ್ಯಾಕ್ ಪಡೆಯುತ್ತಿದ್ದೀರಿ ಎಂಬುದನ್ನು ತಿಳಿಸಿ ಎಂದಿದ್ದಾರೆ ಶುಭಂ ಎಂಬುವವರು.

   English summary
   Congress social media chief Ramya alias Divya Spandana is in controversy again. Ramya haters and some BJP leaders are re posted her twitters in which she praised Liquor baron Vijay Mallya in 2010 and 2012. She was a brand ambassador for Vijaya Mallya owned Royal Challengers Bengaluru then.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X
   We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
   X