ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನೆಟ್ಟಿಗರ ತಮಾಷೆಗೆ ಪುನಃ ಆಹಾರವಾದ ರಮ್ಯಾ ಅಲಿಯಾಸ್ ದಿವ್ಯ ಸ್ಪಂದನ

ರಮ್ಯಾ ತಮಗೆ ಬಂದಿದ್ದ ವಾಟ್ಸಾಪ್ ಮೆಸೇಜ್ ಅನ್ನು ಫೇಸ್ ಬುಕ್ ನಲ್ಲಿ ಶೇರ್ ಮಾಡಿಕೊಂಡಿದ್ದರು. ಅದರಲ್ಲಿ ಭಾರತೀಯ ಕ್ರಿಕೆಟ್ ತಂಡದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಮತ್ತು ಯುವರಾಜ ರಾಹುಲ್ ಗಾಂಧಿ ನಡುವೆ ಸಾಮ್ಯತೆ ಏನು ಎಂದು ಬರೆಯಲಾಗಿತ್ತು.

|
Google Oneindia Kannada News

ಪ್ರಧಾನಿ ಮೋದಿ ಮತ್ತು ಕೇಂದ್ರ ಸರಕಾರದ ಕಾರ್ಯವೈಖರಿಗಳನ್ನು ಟೀಕಿಸಿ, ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿಯವರನ್ನು ಸಮರ್ಥಿಸಿಕೊಳ್ಳುವ ಪೋಸ್ಟನ್ನು ಎಐಸಿಸಿ ಸಾಮಾಜಿಕ ಜಾಲತಾಣದ ಮುಖ್ಯಸ್ಥೆ ರಮ್ಯಾ ಅವಾಗಾವಾಗ ಹಾಕುತ್ತಿರುತ್ತಾರೆ, ಅದು ಅವರ ಕೆಲಸ ಕೂಡಾ..

ಅದರಂತೆ, ಇತ್ತೀಚೆಗೆ ರಮ್ಯಾಗೆ ಬಂದಿದ್ದ ವಾಟ್ಸಾಪ್ ಮೆಸೇಜ್ ಅನ್ನು ಫೇಸ್ ಬುಕ್ ನಲ್ಲಿ ಶೇರ್ ಮಾಡಿಕೊಂಡಿದ್ದರು. ಅದರಲ್ಲಿ ಭಾರತೀಯ ಕ್ರಿಕೆಟ್ ತಂಡದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಮತ್ತು ಯುವರಾಜ ರಾಹುಲ್ ಗಾಂಧಿ ನಡುವೆ ಸಾಮ್ಯತೆ ಏನು ಎಂದು ಬರೆಯಲಾಗಿತ್ತು.

ಅಮೆರಿಕದಲ್ಲಿ ರಾಹುಲ್: ಸ್ಮೃತಿ ಇರಾನಿ ಹೇಳಿಕೆಗೆ ರಮ್ಯಾ ವ್ಯಂಗ್ಯಅಮೆರಿಕದಲ್ಲಿ ರಾಹುಲ್: ಸ್ಮೃತಿ ಇರಾನಿ ಹೇಳಿಕೆಗೆ ರಮ್ಯಾ ವ್ಯಂಗ್ಯ

ಜೊತೆಗೆ, ಧೋನಿ ಮತ್ತು ರಾಹುಲ್ ಅವರನ್ನು ದೂಷಿಸುವವರು ತುಂಬಾ ಜನ ಇದ್ದರು. ಆದರೂ, ಅವರಿಬ್ಬರೂ ಮರಳಿ ಬಂದು ತಮ್ಮ ತಮ್ಮ ಕ್ಷೇತ್ರದಲ್ಲಿ ಭದ್ರವಾಗಿ ನೆಲೆಯೂರಿದ್ದಾರೆ ಎನ್ನುವ ಅಡಿಬರಹವಿರುವ ಪೋಸ್ಟ್ ಅನ್ನು ರಮ್ಯಾ, ಫೇಸ್ ಬುಕ್ ನಲ್ಲಿ ಪೋಸ್ಟ್ ಮಾಡಿದ್ದರು.

ಎಂದಿನಂತೆ, ರಮ್ಯಾ ಪೋಸ್ಟಿಗೆ ನೆಟ್ಟಿಗರು ತಮ್ಮದೇ ಶೈಲಿಯಲ್ಲಿ ಪ್ರತಿಕ್ರಿಯಿಸಿದ್ದಾರೆ. ರಮ್ಯಾ ಅವರ ಈ ಪೋಸ್ಟಿಗೆ ಸುಮಾರು ಹತ್ತು ಸಾವಿರ ಲೈಕ್, ಮೂರು ಸಾವಿರ ಕಾಮೆಂಟ್ ಹರಿದು ಬಂದಿದೆ.

ಇದ್ದಿಲು ಮತ್ತು ವಜ್ರಕ್ಕೆ ತುಂಬಾ ಸಾಮ್ಯತೆಯಿದೆ, ಎರಡನ್ನೂ ಕಾರ್ಬನ್ ನಿಂದಲೇ ತಯಾರಿಸುವುದು.. ಹೀಗೆ ಸಾವಿರಾರು ವಿಢಂಬನಾತ್ಮಕ ಪೋಸ್ಟುಗಳು ಹರಿದು ಬಂದಿವೆ. ಕೆಲವೊಂದು ಸ್ಯಾಂಪಲ್ ಗಳು, ಮುಂದೆ ಓದಿ.. (ಪ್ರತೀ ಸ್ಲೈಡಿನ ಇಮೇಜಿನ ಬಲಭಾಗದಲ್ಲಿ ಬೇರೆ ಬೇರೆ ಕಾಮೆಂಟುಗಳಿವೆ)

ರಮ್ಯಾ ಫೇಸ್ ಬುಕ್ ಪೋಸ್ಟಿಗೆ ಭಾರೀ ವಿಢಂಬನೆ

ರಮ್ಯಾ ಫೇಸ್ ಬುಕ್ ಪೋಸ್ಟಿಗೆ ಭಾರೀ ವಿಢಂಬನೆ

ಧೋನಿ ಕ್ರಿಕೆಟಿಗೆ ಮತ್ತೆ ವಾಪಸ್ ಆದರು, ಆದರೆ ರಾಹುಲ್ ಗಾಂಧಿ ದೇಶಕ್ಕೆ ವಾಪಸ್ ಆಗಿದ್ದು ರಜಾ ಮತ್ತು ಥೈಲ್ಯಾಂಡ್ ಪ್ರವಾಸದಿಂದ. ಧೋನಿ ಮತ್ತು ರಾಹುಲ್ ಇಬ್ಬರನ್ನು ಒಬ್ಬರಿಗೊಬ್ಬರಿಗೆ ಹೋಲಿಕೆ ಮಾಡಬೇಡಿ ನಮಗೆ ಧೋನಿ ಅಂದರೆ ತುಂಬಾ ಇಷ್ಟ..

ರಾಹುಲ್ ಕಾಂಗ್ರೆಸ್ ಅನ್ನು ಫಿನಿಷ್ ಮಾಡುತ್ತಿದ್ದಾರೆ

ರಾಹುಲ್ ಕಾಂಗ್ರೆಸ್ ಅನ್ನು ಫಿನಿಷ್ ಮಾಡುತ್ತಿದ್ದಾರೆ

ಧೋನಿ ಮತ್ತು ರಾಹುಲ್ ಇಬ್ಬರೂ ಒಳ್ಳೆ ಫಿನಿಷರ್ಸ್. ಧೋನಿ ಮ್ಯಾಚ್ ಫಿನಿಷ್ ಮಾಡಿದರೆ, ರಾಹುಲ್ ಕಾಂಗ್ರೆಸ್ ಅನ್ನು ಫಿನಿಷ್ ಮಾಡುತ್ತಿದ್ದಾರೆ. ಪ್ರತೀದಿನ ನಿಮ್ಮ ಫೇಸ್ ಬುಕ್ ಪೋಸ್ಟಿಗಾಗಿ ಕಾತುರದಿಂದ ಕಾಯುತ್ತಿರುತ್ತೇನೆ, ಯಾಕೆಂದರೆ ಅದಕ್ಕೆ ಬರುವ ಕಾಮೆಂಟ್ ಓದಲು. ಧೋನಿ ಏನಾದರೂ ಈ ಪೋಸ್ಟ್ ಅನ್ನು ನೋಡಿದರೆ, ಅವರಿಗೆ ಅವರ ಜೀವನದ ಮೇಲೆಯೇ ಬೇಸರವಾಗಬಹುದೇನೋ?

ಮುಂದಿನ ಚುನಾವಣೆಯ ನಂತರ ರಾಹುಲ್ ನಿವೃತ್ತಿಯಾಗುತ್ತಾರಾ

ಮುಂದಿನ ಚುನಾವಣೆಯ ನಂತರ ರಾಹುಲ್ ನಿವೃತ್ತಿಯಾಗುತ್ತಾರಾ

2019ರ ವಿಶ್ವಕಪ್ ನಂತರ ಧೋನಿ ಖಂಡಿತ ರಿಟೈರ್ಡ್ ಆಗುತ್ತಾರೆ, ಮುಂದಿನ ಚುನಾವಣೆಯ ನಂತರ ರಾಹುಲ್ ನಿವೃತ್ತಿಯಾಗುತ್ತಾರಾ? ಧೋನಿ ಮತ್ತು ರಾಹುಲ್ ಹೋಲಿಕೆ ಜೋಕಿನ ಪರಮಾವಧಿ. ಇನ್ನು ಈ ಕಣ್ಣಲ್ಲಿ ಏನೇನು ನೋಡಬೇಕೋ ನಾನು?

ದೇಶದ ಮಾನವನ್ನು ಅಂತರಾಷ್ಟ್ರೀಯ ಮಟ್ಟದಲ್ಲಿ ಎತ್ತಿ ಹಿಡಿಯುತ್ತಾರೆ

ದೇಶದ ಮಾನವನ್ನು ಅಂತರಾಷ್ಟ್ರೀಯ ಮಟ್ಟದಲ್ಲಿ ಎತ್ತಿ ಹಿಡಿಯುತ್ತಾರೆ

ಮೇಡಂ, ಕ್ರೀಡಾಳುಗಳನ್ನೂ, ರಾಜಕಾರಣಿಗಳನ್ನೂ ಒಬ್ಬರಿಗೊಬ್ಬರಿಗೆ ಹೋಲಿಸಬೇಡಿ. ಕ್ರೀಡಾಳುಗಳು ದೇಶದ ಮಾನವನ್ನು ಅಂತರಾಷ್ಟ್ರೀಯ ಮಟ್ಟದಲ್ಲಿ ಎತ್ತಿ ಹಿಡಿಯುತ್ತಾರೆ, ಆದರೆ ರಾಜಕಾರಣಿಗಳು ಹಾಗಲ್ಲ. ನಾಲ್ಕು ಕೋಟಿ ಉದ್ಯೋಗ ಕಲ್ಪಿಸುವುದಾಗಿ ಹೇಳಿದ ಮೋದಿ, ಎರಡು ಲಕ್ಷ ಸಣ್ಣಕೈಗಾರಿಕೆ ಮುಚ್ಚುವಂತೆ ಮಾಡಿದ್ದಾರೆ ಎನ್ನುವ ಮೋದಿ ಟೀಕಿಸುವ ಪೋಸ್ಟ್.

ಕಾಂಗ್ರೆಸ್ ಮುಕ್ತ್ ಭಾರತ ಮಾಡಲು ನಿಮ್ಮ ಶಕ್ತಿಮೀರಿ ಪ್ರಯತ್ನಿಸುತ್ತಿದ್ದೀರಾ

ಕಾಂಗ್ರೆಸ್ ಮುಕ್ತ್ ಭಾರತ ಮಾಡಲು ನಿಮ್ಮ ಶಕ್ತಿಮೀರಿ ಪ್ರಯತ್ನಿಸುತ್ತಿದ್ದೀರಾ

ಕಾಂಗ್ರೆಸ್ ಮುಕ್ತ್ ಭಾರತ ಮಾಡಲು ನಿಮ್ಮ ಶಕ್ತಿಮೀರಿ ಪ್ರಯತ್ನಿಸುತ್ತಿದ್ದೀರಾ ಮೇಡಂ ನೀವು. ನಿಮ್ಮ ಪ್ರಯತ್ನ ಶ್ಲಾಘನೀಯ..ನನಗೆ ನಗು ತಡೆದುಕೊಳ್ಲಲು ಸಾಧ್ಯವಾಗುತ್ತಿಲ್ಲ. ಬಹುಷ: ರಾಹುಲ್ ಗಾಂಧಿಯವರೇ ಮೇಲಿನ ಇಮೇಜ್ ರೆಡಿ ಮಾಡಿ ಅಮೆರಿಕಾದಿಂದ ನಿಮಗೆ ಕಳುಹಿಸಿರಬೇಕು, ರಾಹುಲ್ ಕೂಡಾ ಫೋಟೋಶಾಪ್ ಕಲಿತು ಬಿಟ್ಟಿದ್ದಾರೆ.

English summary
Congress Social Media head Ramya compares AICC VP Rahul Gandhi with former captain of team India M S Dhoni. Recently, in her FB post, Ramya uploaded a picture that said, ' Rahul and Dhoni were underrated by haters, now both have made a terrific come back'. Ramya's this post in Facebook is now talk of web town.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X