ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಯುಪಿಎ ಡೀಲ್ ಪ್ರಕಾರ ನಡೆದಿದ್ರೆ ಕಡಿಮೆ ಬೆಲೆಗೆ ರಫೇಲ್: ರಮ್ಯಾ ಟ್ವೀಟ್

|
Google Oneindia Kannada News

ಯುಪಿಎ ಸರಕಾರದ ಅವಧಿಯಲ್ಲಿ ಆದ ಒಪ್ಪಂದದ ಪ್ರಕಾರವೇ ರಫೇಲ್ ಯುದ್ಧ ವಿಮಾನದ ಖರೀದಿ ನಡೆದಿದ್ದರೆ ಎಚ್ ಎಎಲ್ ಗೆ ಅವಕಾಶ ಸಿಕ್ಕಿರುತ್ತಿತ್ತು. ಅನಿಲ್ ಅಂಬಾನಿಗೆ ಅಲ್ಲ ಎಂದು ನಟಿ-ಮಾಜಿ ಸಂಸದೆ ಹಾಗೂ ಕಾಂಗ್ರೆಸ್ ನ ಸಾಮಾಜಿಕ ಮಾಧ್ಯಮದ ನಿರ್ವಹಣೆ ಹೊತ್ತಿರುವ ರಮ್ಯಾ/ದಿವ್ಯಸ್ಪಂದನ ಟ್ವೀಟ್ ಮಾಡಿದ್ದಾರೆ.

ಯುಪಿಎ ಮಾಡಿಕೊಂಡಿದ್ದ ಒಪ್ಪಂದದಂತೆಯೇ ಆಗಿದ್ದರೆ 36 ರಫೇಲ್ ಯುದ್ಧ ವಿಮಾನದ ಬದಲಿಗೆ 126 ಬಂದಿರುತ್ತಿತ್ತು. ಬೆಲೆಯೂ ಕಡಿಮೆ ಆಗಿರುತ್ತಿತ್ತು. ಜತೆಗೆ ನಾವು ಕಡಿಮೆ ತೆರಿಗೆ ಕಟ್ಟುತ್ತಿದ್ದೆವು. ಏಕೆಂದರೆ, ನಾವು ಯಾರಿಗೂ ಹಣಕಾಸಿನ ಅನುಕೂಲ ಮಾಡಿಕೊಡಬೇಕಿರಲಿಲ್ಲ!

ನಾನು ಯಾರು ಹೇಳಿ? ಸಚಿವೆ ನಿರ್ಮಲಾಗೆ ರಮ್ಯಾ ಕುಹಕದ ಟ್ವೀಟ್ನಾನು ಯಾರು ಹೇಳಿ? ಸಚಿವೆ ನಿರ್ಮಲಾಗೆ ರಮ್ಯಾ ಕುಹಕದ ಟ್ವೀಟ್

ಭಾರತಕ್ಕೆ ಅನುಕೂಲ ಆಗಿರುತ್ತಿತ್ತು. ಆದರೆ ನರೇಂದ್ರ ಮೋದಿ ಅವರು ಎಎ ಅವರನ್ನು ಸಹಾಯ ಮಾಡಲು ಆಯ್ಕೆ ಮಾಡಿಕೊಂಡರು ಎಂದಿದ್ದಾರೆ. ಎಎ ಅಂದರೆ ಅನಿಲ್ ಅಂಬಾನಿ ಎಂಬ ವಿಚಾರ ಈಗ ಎಲ್ಲರಿಗೂ ಗೊತ್ತಾಗಿದೆ. ಏಕೆಂದರೆ, ಅನಿಲ್ ಅಂಬಾನಿ ಹೆಸರನ್ನು ಹೀಗೆ ಎಎ ಎಂದು ಕಾಂಗ್ರೆಸ್ ಪ್ರತಿ ಸಲ ಪ್ರಸ್ತಾವ ಮಾಡುತ್ತಿದೆ.

Ramya again questioned about Rafale in Twitter

'ದ ಹಿಂದೂ'ನಲ್ಲಿ ಬಂದಿರುವ ರಫೇಲ್ ಕುರಿತಾದ ವರದಿಯನ್ನು ಉಲ್ಲೇಖಿಸಿ, ರಮ್ಯಾ ಟ್ವೀಟ್ ಮಾಡಿದ್ದಾರೆ. #WhoAteTheRafalePie ಎಂಬ ಹ್ಯಾಷ್ ಟ್ಯಾಗ್ ಕೂಡ ಮಾಡಿದ್ದಾರೆ.

English summary
Actress and former MP criticised Rafale deal finalised by NDA government. Here her twitter content.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X