ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹಲವು ಪತಂಜಲಿ ಉತ್ಪನ್ನಗಳು ಕಳಪೆ, ಆರ್ ಟಿಐನಿಂದ ಬಹಿರಂಗ

|
Google Oneindia Kannada News

ನವದೆಹಲಿ, ಮೇ 30 : ಯೋಗ ಗುರು ಬಾಬಾ ರಾಮದೇವ್ ಅವರ ಹಲವು ಪತಂಜಲಿ ಉತ್ಪನ್ನಗಳು ಗುಣಮಟ್ಟ ಪರೀಕ್ಷೆಯಲ್ಲಿ ಪಾಸಾಗಿಲ್ಲ ಎಂಬ ಅಂಶ ಆರ್ ಟಿಐನಿಂದ ಬೆಳಕಿಗೆ ಬಂದಿದೆ.

ಪತಂಜಲಿ ಹಾಗೂ ವಿವಿಧ ಆಯುರ್ವೇದ ಉತ್ಪನ್ನಗಳ ಗುಣಮಟ್ಟದ ಬಗ್ಗೆ ಮಾಹಿತಿ ನೀಡುವಂತೆ ಸಾರ್ವಜನಿಕರೊಬ್ಬರು ಹರಿದ್ವಾರದ ಆಯರ್ವೇದ ಮತ್ತು ಯುನಾನಿ ಪ್ರಯೋಗಾಲಯ ಕಚೇರಿಗೆ ಮಾಹಿತಿ ಹಕ್ಕು ಅಧಿನಿಯಮದ ಅಡಿಯಲ್ಲಿ ಅರ್ಜಿ ಸಲ್ಲಿಸಿದ್ದರು.[ಆರ್ಮಿ ಕ್ಯಾಂಟೀನ್ ನಿಂದ ಪತಂಜಲಿ ನೆಲ್ಲಿ ಜ್ಯೂಸ್ ಗೆ ಕೊಕ್]

Ramdev’s Patanjali products fail quality test, RTI inquiry finds

ಈ ಬಗ್ಗೆ ಅರ್ಜಿದಾರರಿಗೆ ಮಾಹಿತಿ ನೀಡಿದ ಆಯರ್ವೇದ ಮತ್ತು ಯುನಾನಿ ಪ್ರಯೋಗಾಲಯ ಕಚೇರಿಯು 'ದೇಶದಲ್ಲಿ 40 ರಷ್ಟು ಆರ್ಯವೇದ ಉತ್ಪನ್ನಗಳು ಕಳಪೆಯಾಗಿವೆ. ಇದರಲ್ಲಿ ಪತಂಜಲಿಯ ಹಲವು ಉತ್ಪನ್ನಗಳು ಗುಣಮಟ್ಟ ಪರೀಕ್ಷೆಯಲ್ಲಿ ಫೇಲ್ ಆಗಿವೆ' ಎಂಬ ಮಾಹಿತಿ ನೀಡಿದೆ ಎಂದು ಹಿಂದೂಸ್ತಾನ್‌ ಟೈಮ್ಸ್‌ ವರದಿ ಮಾಡಿದೆ.

ಪತಂಜಲಿಯ ಜನಪ್ರಿಯ ಉತ್ಪನ್ನಗಳಾದ ದಿವ್ಯ ಆಮ್ಲರಸ ಮತ್ತು ಶಿವಲಿಂಗ ಬೀಜದಲ್ಲೂ ಬೇರೆ ಪದಾರ್ಥಗಳು ಪತ್ತೆಯಾಗಿದ್ದು ಇವು ಗುಣಮಟ್ಟ ಪರೀಕ್ಷೆಯಲ್ಲಿ ಪಾಸಾಗಿಲ್ಲ.

2013 ರಿಂದ 2016ರ ವರೆಗೆ ಒಟ್ಟು 80 ಉತ್ಪನ್ನಗಳ ಗುಣಮಟ್ಟ ಪರೀಕ್ಷೆ ಮಾಡಲಾಗಿದೆ. ಇದರಲ್ಲಿ 32 ಉತ್ಪನ್ನಗಳು ಕಳಪೆಯಾಗಿವೆ. ಇವುಗಳಲ್ಲಿ ಪತಂಜಲಿಯ ಹಲವು ಉತ್ಪನ್ನಗಳು ಸೇರಿವೆ ಎಂದು ವರದಿಯಲ್ಲಿ ಹೇಳಿದೆ.

ಪಶ್ಚಿಮ ಬಂಗಾಳದ ಸರ್ಕಾರಿ ಪ್ರಯೋಗಾಲಯವು ಪತಂಜಲಿಯ ಆಮ್ಲ ಜ್ಯೂಸ್ ಅನ್ನು ಪರೀಕ್ಷೆ ಮಾಡಿದ್ದು ಇದರಲ್ಲಿ ಪಿಎಚ್ ಮೌಲ್ಯ ಕಡಿಮೆ ಇದ್ದು ಈ ಪಾನಿಯಾ ಕಳಪೆಯಾಗಿದೆ ಎಂದು ವರದಿ ನೀಡಿತ್ತು.

ಈ ಪಾನಿಯಾವನ್ನು ಪಶ್ಚಿಮ ಬಂಗಾಳದ ಮಿಲಿಟರಿ ಕ್ಯಾಂಟಿನ್ ನಲ್ಲಿ ಅರೆ ಸೇನಾಪಡೆ ಯೋಧರಿಗೆ ನೀಡಲಾಗುತ್ತಿತ್ತು ಈ ವರದಿ ಬಂದ ಕೂಡಲೇ ಈ ಪದಾರ್ಥದ ಮೇಲೆ ನಿಷೇಧ ಹೇರಲಾಗಿದೆ.

English summary
Nearly 40% of Ayurveda products, including items from Baba Ramdev’s Patanjali, were found to be of substandard quality by Haridwar’s Ayurveda and Unani Office, a Right to Information (RTI) reply revealed.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X