ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿದೇಶಿ ಗಣ್ಯರಿಗೆ ಮೋದಿ ಕೊಡುವ ಗಿಫ್ಟ್ ಏನು? ಯೋಗಿ ಹೇಳಿದ್ದೇನು?

ವಿದೇಶಿ ಗಣ್ಯರಿಗೆ ಮೋದಿಯಿಂದ ತಾಜ್ ಬದಲಿಗೆ ರಾಮಾಯಣ, ಮಹಾಭಾರತ ಗಿಫ್ಟ್. ಈ ಹಿಂದಿದ್ದ ತಾಜ್ ಮಹಲ್ ಮಾದದರಿಯನ್ನು ಗಿಫ್ಟ್ ಕೊಡುವ ಪದ್ಧತಿಗೆ ಮೋದಿಯಿಂದ ತಿಲಾಂಜಲಿ. ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಹೇಳಿಕೆ.

|
Google Oneindia Kannada News

ಪಾಟ್ನಾ, ಜೂನ್ 16: ಈ ಹಿಂದೆ, ಭಾರತಕ್ಕೆ ಬರುವ ವಿದೇಶಿ ಗಣ್ಯರಿಗೆ ತಾಜ್ ಮಹಲ್ ಅಥವಾ ಮತ್ಯಾವುದೇ ಸ್ಮಾರಕಗಳ ಶೋ ಪೀಸ್ ಅನ್ನು ಉಡುಗೊರೆಯಾಗಿ ಕೊಡುವ ಬದಲಿಗೆ ಈಗ ರಾಮಾಯಣ, ಮಹಾಭಾರತ ಪುಸ್ತಕಗಳನ್ನು ಕೊಡುವ ಪದ್ಧತಿಯನ್ನು ಪ್ರಧಾನಿ ನರೇಂದ್ರ ಮೋದಿ ರೂಢಿಸಿಕೊಂಡಿದ್ದಾರೆ.

ಹೀಗೆಂದು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ತಿಳಿಸಿದ್ದಾರೆ. ಬಿಹಾರದ ರಾಜಧಾನಿ ಪಾಟ್ನಾದಲ್ಲಿ ಶುಕ್ರವಾರ ನಡೆದ ಮೋದಿ ಸರ್ಕಾರದ ಮೂರು ವರ್ಷಗಳ ಸಾಧನಾ ಸಮಾವೇಶದಲ್ಲಿ ಅವರು ಮಾತನಾಡಿದರು.

Ramayan, Gita, Not Taj: Yogi Adityanath's Take on Symbols Of India

ಈ ಹಿಂದೆ, ನಮ್ಮ ದೇಶದ ರಾಷ್ಟ್ರಪತಿಗಳು, ಪ್ರಧಾನಿಗಳು ನಮ್ಮ ದೇಶಕ್ಕೆ ಬರುವ ವಿದೇಶಿ ಗಣ್ಯರಿಗೆ ತಾಜ್ ಮಹಲ್ ಹೋಗುವ ಉಡುಗೊರೆಗಳನ್ನು ನೀಡುತ್ತಿದ್ದರು. ಆ ಪದ್ಧತಿಯನ್ನು ಪ್ರಧಾನಿ ಮೋದಿ ಬದಲಾಯಿಸಿದ್ದಾರೆ. ಇದು ನಮ್ಮೆಲ್ಲರಿಗೂ ಸ್ಫೂರ್ತಿಯಾಗಬೇಕು ಎಂದು ಅವರು ತಿಳಿಸಿದರು.

ಅಧಿಕಾರಕ್ಕಾಗಿ, ನಿತೀಶ್ ಕುಮಾರ್ ಅವರ ಪಕ್ಷವು (ಜನತಾದಳ ಯುನೈಟೆಡ್) ಲಾಲೂ ಪ್ರಸಾದ್ ಯಾದವ್ ಅವರ ಆರ್ ಜೆಡಿಯೊಂದಿಗೆ ಕೈ ಜೋಡಿಸಿರುವುದು ಅಪವಿತ್ರ ಮೈತ್ರಿ ಎಂದು ಗುಡುಗಿದರು.

English summary
The Chief Minister of Uttar Pradesh Yogi Adityanath commended the Prime Minister's practice of gifting Bhagwad Gita and the Indian epic Ramayan to foreign dignitaries.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X