ಪುರುಷತ್ವವೇ ಇಲ್ಲ ಎಂದಿದ್ದ ರಾಮ್ ರಹೀಮ್ ಲೈಂಗಿಕ ವ್ಯಸನಿ

By: ವಿಕಾಸ್ ನಂಜಪ್ಪ
Subscribe to Oneindia Kannada
Baba Ram rahim says "he will become psycho without this _____ "! | Watch video | Oneindia Kannada

ಗುರ್ಮೀತ್ ರಾಮ್ ರಹೀಮ್ ಲೈಂಗಿಕ ವ್ಯಸನಿ. ಆದ್ದರಿಂದಲೇ ಜೈಲಿನಲ್ಲಿ ದಿನದಿನಕ್ಕೂ ಚಟುವಟಿಕೆ ಕಡಿಮೆ ಆಗುತ್ತಿದೆ ಎಂದು ಆತನ ಚಿಕಿತ್ಸೆಯ ಜವಾಬ್ದಾರಿ ಹೊತ್ತಿರುವ ವೈದ್ಯರು ಅಭಿಪ್ರಾಯ ಪಟ್ಟಿದ್ದಾರೆ. ಜೈಲಿನಲ್ಲಿ ಅಸ್ವಾಸ್ಥ್ಯ ಆಗಿದೆ ಎಂದು ದೂರಿಕೊಂಡ ರಾಮ್ ರಹೀಮ್ ನ ಪರೀಕ್ಷಿಸಿದ ವೈದ್ಯರು, ಆ ನಂತರ ಈ ಹೇಳಿಕೆ ನೀಡಿದ್ದಾರೆ.

ರಾಮ್ ರಹೀಮ್ ಕಾಮ ಗುಹೆಯಿಂದ ಹೊರಬರುತ್ತಿರುವ ನಿಗೂಢ ರಹಸ್ಯಗಳು

ಅತ್ಯಾಚಾರ ಆರೋಪ ಸಾಬೀತಾಗಿದ್ದರಿಂದ ರಾಮ್ ರಹೀಮ್ ರೋಹ್ಟಕ್ ನಲ್ಲಿ ಇಪ್ಪತ್ತು ವರ್ಷದ ಜೈಲುಶಿಕ್ಷೆ ಅನುಭವಿಸುತ್ತಿದ್ದಾನೆ. "ನನಗೆ ಪುರುಷತ್ವವೇ ಇಲ್ಲ" ಎಂದು ರಾಮ್ ರಹೀಮ್ ಕೋರ್ಟ್ ಮುಂದೆ ಹೇಳಿಕೊಂಡಿದ್ದ. ಆದರೀಗ ವೈದ್ಯರ ತಂಡದ ಹೇಳಿಕೆ ಅಚ್ಚರಿ ಮೂಡಿಸುತ್ತಿದೆ.

Ram Rahim a sex addict, undergoing withdrawal symptoms say doctors

ವರದಿಗಳ ಪ್ರಕಾರ, ಡೇರಾ ಸಚ್ಛಾ ಸೌಧದ ಮುಖ್ಯಸ್ಥ ರಾಮ್ ರಹೀಮ್ ಸ್ಯಾಟಿರಿಯಾಸಿಸ್ ನಿಂದ ಬಳಲುತ್ತಿದ್ದಾನೆ. ಹಾಗೆಂದರೆ ವಿಪರೀತವಾದ ಹಾಗೂ ಹತೋಟಿಗೆ ಬಾರದ ಲೈಂಗಿಕ ಆಸಕ್ತಿ. ಈ ಬಗ್ಗೆ ಅತನ ಪರೀಕ್ಷೆ ಮಾಡಿದ ವೈದ್ಯರು ಖಾತ್ರಿ ಪಡಿಸಿದ್ದಾರೆ.

ಅಸ್ವಾಸ್ಥ್ಯ ಹಾಗೂ ಬಳಲಿಕೆ ಏಕೆ ಆಗುತ್ತಿದೆ ಅಂದರೆ ಅದಕ್ಕೆ ಕಾರಣ ರಾಮ್ ರಹೀಮ್ ನ ಲೈಂಗಿಕ ಆಸಕ್ತಿ. ಆದ್ದರಿಂದಲೇ ತೀರಾ ಖಿನ್ನನಾಗುತ್ತಿದ್ದಾನೆ ಎಂದು ಕೂಡ ವೈದ್ಯರು ಹೇಳಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Gurmeet Ram Rahim who has been diagnosed as a sex addict is undergoing withdrawal symptoms, a team of doctors who attended on him said. He had complained of uneasiness in jail, following which a team of doctors attended to him.
Please Wait while comments are loading...