ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಾಮ್ ರಹೀಮ್ ನ ಮಗ ಜಸ್ಮೀತ್ ಡೇರಾ ಸಚ್ಛಾದ ಹೊಸ ಮುಖ್ಯಸ್ಥ

|
Google Oneindia Kannada News

ಇಪ್ಪತ್ತು ವರ್ಷಗಳ ಕಾಲ ಬಾಬಾ ರಾಮ್ ರಹೀಮ್ ಸಿಂಗ್ ಜೈಲಿನಲ್ಲಿ ಕಠಿಣ ಶಿಕ್ಷೆ ವಿಧಿಸಬೇಕು ಎಂದು ಸಿಬಿಐ ವಿಶೇಷ ಕೋರ್ಟ್ ಶಿಕ್ಷೆ ಪ್ರಮಾಣವನ್ನು ಘೋಷಿಸಿ ಒಂದು ದಿನವಷ್ಟೇ ಕಳೆದಿದೆ. ಇದೀಗ ಬಾಬಾನ ಮಗ, ಮೂವತ್ತೊಂದು ವರ್ಷದ ಜಸ್ಮೀತ್ ಸಿಂಗ್ ನನ್ನು ಡೇರಾ ಸಚ್ಛಾ ಸೌಧದ ಆಡಳಿತಾಧಿಕಾರಿಯಾಗಿ ಮಂಗಳವಾರ ನೇಮಕ ಮಾಡಲಾಗಿದೆ.

ರಾಮ್ ರಹೀಮ್ ಕುರಿತು ನಿಮಗೆ ಗೊತ್ತಿರದ 10 ಸಂಗತಿರಾಮ್ ರಹೀಮ್ ಕುರಿತು ನಿಮಗೆ ಗೊತ್ತಿರದ 10 ಸಂಗತಿ

ಜಸ್ಮೀತ್ ವರ್ತಕ ಹಾಗೂ ಪಂಜಾಬ್ ನ ಕಾಂಗ್ರೆಸ್ ನಾಯಕ ಹರ್ಮಿಂದರ್ ಸಿಂಗ್ ಜಸ್ಸಿ ಅವರ ಮಗಳನ್ನು ಮದುವೆಯಾಗಿದ್ದಾನೆ. ಹಲವು ಮೂಲಗಳ ಪ್ರಕಾರ, ಹತ್ತು ವರ್ಷಗಳ ಹಿಂದೆಯೇ ಜಸ್ಮೀತ್ ನನ್ನು ರಾಮ್ ರಹೀಮ್ ನ ಉತ್ತರಾಧಿಕಾರಿ ಎಂದು ಘೋಷಿಸಲಾಗಿತ್ತು.

Jasmeeth

ಮತ್ತೊಂದು ಮೂಲಗಳ ಪ್ರಕಾರ, ಡೇರಾ ಸಚ್ಛಾದ ಮುಖ್ಯಸ್ಥರು 1990ರಲ್ಲೇ ಜಸ್ಮೀತ್ ಸಿಂಗ್ ನನ್ನು ತನ್ನ ಉತ್ತರಾಧಿಕಾರಿ ಎಂದು ಘೋಷಿಸಿದ್ದರು. ಗುರು ಗೋವಿಂದ ಸಿಂಗ್ ರ ದಿರಿಸನ್ನು ಧರಿಸಿದ ವಿವಾದದಲ್ಲಿ ಆತನನ್ನು ಹೊರಹಾಕಲಾಯಿತು. ಆ ಸಂದರ್ಭದಲ್ಲೇ ಜಸ್ಮೀತ್ ಸಿಂಗ್ ನನ್ನು ಉತ್ತರಾಧಿಕಾರಿ ಎಂದು ಘೋಷಣೆ ಮಾಡಿದ್ದರಂತೆ.
ಒನ್ಇಂಡಿಯಾ ನ್ಯೂಸ್

English summary
Day after 20-year jail to Ram Rahim Singh, his son Jasmeet Singh, 31, appointed administrator of Dera Sacha Sauda sect on Tuesday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X