ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜೈಲಿನಲ್ಲೂ ರಾಮ್ ರಹೀಮ್ ಐಷಾರಾಮಿ ಬದುಕು ನಡೆಸುತ್ತಿದ್ದಾನಾ!?

|
Google Oneindia Kannada News

Recommended Video

ಜೈಲಿನಲ್ಲೂ ರಾಮ್ ರಹೀಮ್ ಐಷಾರಾಮಿ ಬದುಕು ನಡೆಸುತ್ತಿದ್ದಾರಾ !? | Oneindia Kannada

ರೋಹ್ಟಕ್, ನವೆಂಬರ್ 14: ಡೇರಾ ಸಚ್ಚಾ ಸೌದದ ಮುಖ್ಯಸ್ಥ, ಅತ್ಯಾಚಾರಿ ರಾಮ್ ರಹೀಮ್ ಸಿಂಗ್ ಗೆ ರೋಹ್ಟಕ್ ಜೈಲಿನಲ್ಲಿ ಐಷಾರಾಮಿ ಸೌಲಭ್ಯ ಸಿಕ್ಕುತ್ತಿದೆಯಾ? ಇತ್ತೀಚೆಗೆ ತಾನೇ ಜಾಮೀನಿನ ಮೇಲೆ ಬಿಡುಗಡೆಯಾದ ರಾಹುಲ್ ಜೈನ್ ಎಂಬ ಕೈದಿ ಎನ್ನುವವರು ಹೇಳುವ ಪ್ರಕಾರ, ಜೈಲಿನ ಅಧಿಕಾರಿಗಳು ಉಳಿದ ಕೈದಿಗಳನ್ನು ನೋಡುವಂತೆ ರಾಮ್ ರಹೀಮ್ ರನ್ನು ನೋಡುತ್ತಿಲ್ಲ. ಅವರಿಗೆ ಬೇರೆಯದೇ ರೀತಿಯ 'ಟ್ರೀಟ್ ಮೆಂಟ್' ಸಿಕ್ಕುತ್ತಿದೆ!(ಚಿತ್ರಕೃಪೆ: ಎಎನ್ ಐ)

ಜೈಲಲ್ಲಿ ರಾಮ್ ರಹೀಮ್ ಸಿಂಗ್ ಸಂಪಾದನೆ ಕೇವಲ 20 ರೂ.!ಜೈಲಲ್ಲಿ ರಾಮ್ ರಹೀಮ್ ಸಿಂಗ್ ಸಂಪಾದನೆ ಕೇವಲ 20 ರೂ.!

"ರಾಮ್ ರಹೀಮ್ ಜೈಲಿಗೆ ಬಂದ ನಂತರ ಇಲ್ಲಿನ ನೀತಿ-ನಿಯಮಗಳೇ ಬದಲಾಗಿವೆ. ಅವರನ್ನು ಇರಿಸಿರುವ ಸೆಲ್ ಗೆ ಯಾರನ್ನೂ ಬಿಡುತ್ತಿಲ್ಲ. ಬೇರೆ ಕೈದಿಗಳ್ಯಾರೂ ಅವರನ್ನು ಇದುವರೆಗೂ ನೋಡಿಯೇ ಇಲ್ಲ. ಅವರಿಗಾಗಿಯೇ ಐಷಾರಾಮಿ ವಾಹನವೊಂದರಲ್ಲಿ ಊಟ ಬರುತ್ತದೆ. ಅವರನ್ನು ನೋಡುವುದಕ್ಕೆಂದು ಬರುವವರಿಗೆ 2 ಗಂಟೆಯವರೆಗೂ ಸಮಯ ನೀಡುತ್ತಾರೆ. ಆದರೆ ನಮ್ಮಂಥ ಸಾಮಾನ್ಯ ಕೈದಿಗಳನ್ನು ಭೇಟಿಯಾಗಲು ಯಾರಾದರೂ ಬಂದರೆ ಇಪ್ಪತ್ತು ನಿಮಿಷಕ್ಕಿಂತ ಹೆಚ್ಚು ಸಮಯ ನೀಡುವುದಿಲ್ಲ" ಎಂದು ಅವರು ಆರೋಪಿಸಿದ್ದಾರೆ.

ಸಲಿಂಗಕಾಮː ಅಮೀರ್ ಖಾನ್ ಗೆ ಲೀಗಲ್ ನೋಟಿಸ್ Read more at: https://kannada.oneindia.com/news/india/homosexuality-bollywood-actor-aamir-khan-gets-court-notice-088766.html

"ಬಾಬಾ ಜೈಲಿಗೆ ಬಂದ ಮೇಲೆ ಉಳಿದ ಕೈದಿಗಳಿಗೆ ನೀಡುತ್ತಿದ್ದ ಮೂಲಭೂತ ವಸ್ತುಗಳ ಪೂರೈಕೆಯೂ ಕಡಿಮೆಯಾಗಿತ್ತು. ನಂತರ ಅಶೋಕ್ ಎಂಬ ಖೈದಿ ಈ ಬಗ್ಗೆ ಜಡ್ಜ್ ವೊಬ್ಬರನ್ನು ಸಂಪರ್ಕಿಸಿ, ವಿಷಯ ತಿಳಿಸಿದಾಗ ಪರಿಸ್ಥಿತಿ ಸರಿಹೋಯಿತು. ನಮಗೆ ನೀಡುತ್ತಿದ್ದ ಆಹಾರದಲ್ಲೂ ಬದಲಾವಣೆಗಳಾಗಿವೆ. ಎಲ್ಲವೂ ರಾಮ್ ರಹೀಮ್ ಅಗತ್ಯಕ್ಕೆ ತಕ್ಕಂತೆ ಮಾರ್ಪಾಡಾಗುತ್ತಿವೆ" ಎಂದು ರಾಹುಲ್ ಜೈನ್ ದೂರಿದ್ದಾರೆ.

ರಾಮ್ ರಹೀಮ್ ಕಾಮ ಗುಹೆಯಿಂದ ಹೊರಬರುತ್ತಿರುವ ನಿಗೂಢ ರಹಸ್ಯಗಳುರಾಮ್ ರಹೀಮ್ ಕಾಮ ಗುಹೆಯಿಂದ ಹೊರಬರುತ್ತಿರುವ ನಿಗೂಢ ರಹಸ್ಯಗಳು

"ಜೈಲಿನಲ್ಲಿರುವ ಎಲ್ಲ ಕೈದಿಗಳೂ ತಮಗೆ ಜೈಲು ಅಧಿಕಾರಿ ವಹಿಸಿದ ಕೆಲಸ ಮಾಡಬೇಕಾಗುತ್ತದೆ. ಆದರೆ ರಾಮ್ ರಹೀಮ್ ಸೆಲ್ ನಿಂದ ಆಚೆಯೇ ಬರುತ್ತಿಲ್ಲ. ಅವರು ತಮ್ಮ ಸೆಲ್ ನಲ್ಲಿಯೇ ಕೆಲಸ ಮಾಡುತ್ತಿದ್ದಾರೆ ಎಂದು ಜೈಲು ಅಧಿಕಾರಿಗಳು ಹೇಳುತ್ತಾರೆ" ಎಂದು ಸಹ ಅವರು ಹೇಳಿದ್ದಾರೆ.

Ram Rahim enjoying special treatment inside jail, alleges inmate

ಬೆಂಗಳೂರು ಪರಪ್ಪನ ಅಗ್ರಹಾರದಲ್ಲೂ, ಎಐಡಿಎಂಕೆ ನಾಯಕಿ ಶಶಿಕಲಾ ನಟರಾಜನ್ ಅವರಿಗೆ ಶ ರಾಜೋಪಚಾರ ಸಿಕ್ಕುತ್ತಿದೆ ಎಂಬುದು ಕೆಲ ತಿಂಗಳ ಹಿಂದಷ್ಟೇ ವಿವಾದ ಸೃಷ್ಟಿಸಿದ್ದನ್ನು ಇಲ್ಲಿ ಸ್ಮರಿಸಬಹುದು. ಜೈಲುಗಳಲ್ಲೂ ಆರಂಭವಾಗಿರುವ ವಿಐಪಿ ಸಂಸ್ಕೃತಿಯನ್ನು ತಡೆಯುವ ಅಗತ್ಯವಿದೆ ಎಂಬುದನ್ನು ರಾಹುಲ್ ಜೈನ್ ಮಾತು ಪುಷ್ಟೀಕರಿಸಿದೆ.

ಆಗಸ್ಟ್ 25 ರಂದು ಡೇರಾ ಮುಖ್ಯಸ್ಥ ಗುರ್ಮಿತ್ ರಾಮ್ ರಹೀಮ್ ಸಿಂಗ್ ನನ್ನು ಸಿಬಿಐ ವಿಶೇಷ ನ್ಯಾಯಾಲಯ ತಪ್ಪಿತಸ್ಥ ಎಂದು ಘೋಷಿಸಿ, ನಂತರ 2 ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ 20 ವರ್ಷಗಳ ಜೈಲುಶಿಕ್ಷೆ ವಿಧಿಸಿತ್ತು. ಇದನ್ನು ಖಂಡಿಸಿ ಹರ್ಯಾಣದ ಪಂಚಕುಲದಲ್ಲಿ ನಡೆದ ಗಲಭೆಯಲ್ಲಿ 41 ಜನ ಮೃತಪಟ್ಟಿದ್ದರೆ, 250 ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದರು.

English summary
A jail inmate of convicted god man Ram Rahim Singh revealed that the latter is enjoying inside the prison. Socalled Godman and Dera Sachha sauda chief Ram Rahim Singh of Haryana was arrested by police in 2 rape cases and sentenced 20 years of imprisonment.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X