ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಫೆ. 21ರಿಂದಲೇ ರಾಮಮಂದಿರ ನಿರ್ಮಾಣ ಆರಂಭ

|
Google Oneindia Kannada News

ನವದೆಹಲಿ, ಜನವರಿ 31: ಪ್ರಮುಖ ಬೆಳವಣಿಗೆಯೊಂದರಲ್ಲಿ ರಾಮಮಂದಿರ ನಿರ್ಮಾಣಕ್ಕೆ ಫೆ. 21ರಂದು ಅಡಿಗಲ್ಲು ಹಾಕುವುದಾಗಿ ಪರಮ ಧರ್ಮ ಸಂಸದ್ ಸಂಘಟನೆ ಘೋಷಿಸಿದೆ.

ಅಯೋಧ್ಯಾದಲ್ಲಿರುವ ವಿವಾದ ರಹಿತ ಭೂಮಿಯನ್ನು ಅದರ ಹಕ್ಕಿನ ಮಾಲೀಕರಾದ ರಾಮ ಜನ್ಮಭೂಮಿ ನ್ಯಾಸ್‌ಗೆ ಹಸ್ತಾಂತರ ಮಾಡುವ ಸಂಬಂಧ ಎನ್‌ಡಿಎ ಸರ್ಕಾರ ಸುಪ್ರೀಂಕೋರ್ಟ್‌ಗೆ ತಿಳಿಸಿದ ಬೆನ್ನಲ್ಲೇ ಬುಧವಾರ ಮುಕ್ತಾಯಗೊಂಡ ಮೂರು ದಿನಗಳ ಧರ್ಮ ಸಂಸದ್‌ನಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.

ಅಯೋಧ್ಯೆ ವಿವಾದ: ಸುಪ್ರೀಂ ಮೊರೆಹೋದ ಕೇಂದ್ರ ಸರ್ಕಾರ ಅಯೋಧ್ಯೆ ವಿವಾದ: ಸುಪ್ರೀಂ ಮೊರೆಹೋದ ಕೇಂದ್ರ ಸರ್ಕಾರ

ಪ್ರಯಾಗ್‌ ರಾಜ್‌ನಲ್ಲಿ ಸಾಧುಗಳ ಬೃಹತ್ ಸಮ್ಮೇಳನದಲ್ಲಿ ಶಂಕರಾಚಾರ್ಯ ಸ್ವರೂಪಾನಂದ ಸರಸ್ವತಿ ಅವರು ಅಯೋಧ್ಯಾದಲ್ಲಿ ಫೆ.21ರಂದು ರಾಮಮಂದಿರ ನಿರ್ಮಾಣಕ್ಕೆ ಅಡಿಗಲ್ಲಿ ಹಾಕುವ ಮುನ್ನ ಮೆರವಣಿಗೆ ನಡೆಸಲು ನಿರ್ಧರಿಸಿರುವುದಾಗಿ ತಿಳಿಸಿದರು.

ram mandir foundation stone to be laid on feb 21 darm sansad

ನಾವು ಸುಪ್ರೀಂಕೋರ್ಟ್‌ನ ಯಾವುದೇ ಆದೇಶವನ್ನು ಉಲ್ಲಂಘನೆ ಮಾಡುತ್ತಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.

ವಿವಾದವಿಲ್ಲದ ಭೂಮಿಯಲ್ಲಿ ರಾಮ ಮಂದಿರ ನಿರ್ಮಿಸಲು ಅನುಮತಿ ನೀಡಿ: ಸುಪ್ರೀಂಗೆ ಕೇಂದ್ರ ಮನವಿವಿವಾದವಿಲ್ಲದ ಭೂಮಿಯಲ್ಲಿ ರಾಮ ಮಂದಿರ ನಿರ್ಮಿಸಲು ಅನುಮತಿ ನೀಡಿ: ಸುಪ್ರೀಂಗೆ ಕೇಂದ್ರ ಮನವಿ

ಹೈಕೋರ್ಟ್‌ನ ಆದೇಶವನ್ನು ಸುಪ್ರೀಂಕೋರ್ಟ್ ವಜಾಗೊಳಿಸುವವರೆಗೂ ಅದು ಚಾಲ್ತಿಯಲ್ಲಿರುತ್ತದೆ ಎಂದ ಅವರು, ದೇಶದೆಲ್ಲೆಡೆ ಇರುವ ಹಿಂದೂಗಳು ಈ ಚಳವಳಿಗೆ ಕೈಜೋಡಿಸಬೇಕು ಎಂದು ಮನವಿ ಮಾಡಿದರು.

"ರಾಮಮಂದಿರ ನಿರ್ಮಾಣಕ್ಕೆ ಕಾನೂನು ತಂದರೆ NDA ಗೆಲುವು ಖಚಿತ!"

1992 ರ ಬಾಬ್ರಿ ಮಸೀದಿ ಧ್ವಂಸ ಪ್ರಕರಣದ ಸಮಯದಲ್ಲಿ ಒಟ್ಟು 67 ಎಕರೆ ಭೂಮಿಯನ್ನು ವಶಪಡಿಸಿಕೊಳ್ಳಲಾಗಿತ್ತು. ಅದರಲ್ಲಿ ಕೇವಲ 2.7 ಎಕರೆ ಭೂಮಿಯಷ್ಟೇ ವಿವಾದಾತ್ಮಕ ಸ್ಥಳವಾಗಿದ್ದು, ಉಳಿದವು ವಿವಾದಮುಕ್ತವಾಗಿವೆ. ಆದ್ದರಿಂದ ಈ ಭೂಮಿಯ ವಾರಸುದಾರರಾದ ರಾಮ ಜನ್ಮಭೂಮಿ ನ್ಯಾಸ್ ಟ್ರಸ್ಟ್ ಗೆ ಅದನ್ನು ಹಿಂದಿರುಗಿಸಬೇಕು ಎಂದು ಕೇಂದ್ರ ಸರ್ಕಾರ ಸುಪ್ರೀಂಕೋರ್ಟ್‌ಗೆ ಸೋಮವಾರ ಮನವಿ ಮಾಡಿದೆ.

English summary
Dharm Sansad has declared that the foundation stone for Ram Mandir will be laid on Feb 21.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X