ಮಹಿಳೆಯರನ್ನು ಸನ್ನಿಲಿಯೋನ್ ಗೆ ಹೋಲಿಸಿದ್ದ ಆರ್ ಜಿವಿ ವಿರುದ್ಧ ದೂರು

Posted By:
Subscribe to Oneindia Kannada

ಮುಂಬೈ/ಗೋವಾ, ಮಾರ್ಚ್ 9: ವಿಶ್ವ ಮಹಿಳಾ ದಿನಾಚರಣೆ ಆಚರಣೆ ದಿನದಂದು (ಮಾ. 8) ಎಲ್ಲಾ ಮಹಿಳೆಯರೂ ಬಾಲಿವುಡ್ ನಟಿ ಸನ್ನಿ ಲಿಯೋನ್ ಅವರಂತೆ ಪುರುಷರನ್ನು ಖುಷಿಪಡಿಸಬೇಕು ಎಂದು ಟ್ವೀಟ್ ಮಾಡಿದ್ದ ಬಾಲಿವುಡ್ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ವಿವಾದಕ್ಕೆ ಸಿಲುಕಿದ್ದಾರೆ.

ಗೋವಾದ ಮಹಿಳಾ ಸಂಘಟನೆಯಾದ 'ರಣರಾಗಿಣಿ'ಯ ಸದಸ್ಯೆಯಾದ ವಿಶಾಖಾ ಮಹಾಂಬ್ರೆ ಎಂಬುವರು ಗೋವಾದ ಮಾಪುಸಾ ಪೊಲೀಸ್ ಠಾಣೆಯಲ್ಲಿ ವರ್ಮಾ ವಿರುದ್ಧ ದೂರು ದಾಖಲಿಸಿ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರಲ್ಲದೆ, ವರ್ಮಾ ಅವರ ಟ್ವಿಟರ್ ಖಾತೆಯನ್ನು ಶಾಶ್ವತವಾಗಿ ನಿಷ್ಕ್ರಿಯಗೊಳಿಸಬೇಕೆಂದು ಆಗ್ರಹಿಸಿದ್ದಾರೆ.

Ram Gopal Varma’s Women’s Day Tweet Lands Him In Legal Trouble

ಇನ್ನು, ಇದೇ ಸಂಘಟನೆಯ ರಾಜ್ಯ ಸಂಚಾಲಕಿಯಾಗಿರುವ ಪ್ರತೀಕ್ಷಾ ಕೋರ್ಗೋವಾಂಕರ್ ಅವರು, ''ತಮ್ಮ ವಿವಾದಾತ್ಮಕ ಟ್ವೀಟ್ ಗೆ ರಾಮ್ ಗೋಪಾಲ್ ವರ್ಮಾ ಈ ಕೂಡಲೇ ಕ್ಷಮೆ ಯಾಚಿಸಬೇಕು. ಇಲ್ಲವಾದರೆ, ರಣರಾಗಿಣಿ ಸಂಘಟನೆಯು ಬೀದಿಗಿಳಿದು ಹೋರಾಟ ಮಾಡಲಿದೆ'' ಎಂದು ಎಚ್ಚರಿಸಿದ್ದಾರೆ.

ಇತ್ತ, ರಾಮ್ ಗೋಪಾಲ್ ವರ್ಮಾ ಅವರ ಟ್ವೀಟ್ ಗೆ ಟ್ವಿಟರ್ ನಲ್ಲಿ ಸಾಕಷ್ಟು ಮಂದಿ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಕೆಲವರು ಅವರು ಕ್ಷಮೆ ಕೇಳಬೇಕು. ಇಲ್ಲವಾದರೆ ಅವರ ವಿರುದ್ಧ ಕಾನೂನು ಕೈಗೆ ತೆಗೆದುಕೊಳ್ಳುವೆವು ಎಂದು ಬೆದರಿಕೆ ಹಾಕಿದ್ದಾರೆ.

Ram Gopal Varma’s Women’s Day Tweet Lands Him In Legal Trouble

ಹಾಗೆ ಬೆದರಿಕೆ ಹಾಕಿದವರಿಗೆ ಉತ್ತರ ಕೊಟ್ಟಿರುವ ವರ್ಮಾ, ತಮ್ಮ ಕಚೇರಿ ವಿಳಾಸ ನೀಡಿ, ಕಚೇರಿಗೆ ಬನ್ನಿ. ಯಾವ ರೀತಿ ಕಾನೂನು ಕೈಗೆ ತೆಗೆದುಕೊಳ್ಳುತ್ತೀರೋ ನಾನೂ ನೋಡುತ್ತೇನೆ ಎಂದು ಸವಾಲು ಹಾಕಿದ್ದಾರೆ.

ಅಲ್ಲದೆ, ತಮ್ಮ ಟ್ವೀಟ್ ಅನ್ನು ಟೀಕಿಸಿರುವ ವ್ಯಕ್ತಿಗಳನ್ನು ಛೇಡಿಸಿರುವ ವರ್ಮಾ, ನಾನು ಸನ್ನಿಲಿಯೋನ್ ಅವರ ಬಗ್ಗೆ ಮಾಡಿರುವ ಟ್ವೀಟ್ ಗೆ ಪ್ರತಿ ಟ್ವೀಟ್ ಗಳು ಬಂದಿರುವುದು ಈ ಸಮಾಜದಲ್ಲಿನ ಬೂಟಾಟಿಕೆಯನ್ನು ಬಹಿರಂಗಪಡಿಸಿದೆ. ಸನ್ನಿ ಲಿಯೋನ್ ತನ್ನ ಜೀವನದ ಬಗ್ಗೆ ಗೌರವ, ಆತ್ಮವಿಶ್ವಾಸ ಇಟ್ಟುಕೊಟ್ಟಿರುವ ವ್ಯಕ್ತಿ. ನಿಜ ಹೇಳಬೇಕೆಂದರೆ, ಆಕೆ ಅದೆಷ್ಟೋ ಹೆಣ್ಣುಮಕ್ಕಳಿಗಿಂತ ಹೆಚ್ಚು ಸತ್ಯವಂತೆ'' ಎಂದು ತಮ್ಮ ಟ್ವೀಟ್ ಅನ್ನು ಸಮರ್ಥಿಸಿಕೊಂಡಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Filmmaker Ram Gopal Varma is in legal trouble as his tweet become controversial on Women's day. One of his tweets, he suggested as 'all women should give happiness as Sunny Leone gives'. Ranaragini, a women activists association in Goa has filed a complaint against director in Mapusa of Goa.
Please Wait while comments are loading...