ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಾಜ್ಯಸಭಾ ಚುನಾವಣೆ: ಉತ್ತರಪ್ರದೇಶದಲ್ಲಿ ಬಿಜೆಪಿಪರ ಕ್ರಾಸ್ ವೋಟಿಂಗ್

|
Google Oneindia Kannada News

ಲಕ್ನೋ, ಮಾ 23: ಉತ್ತರಪ್ರದೇಶದ ಹತ್ತು ರಾಜ್ಯಸಭಾ ಸ್ಥಾನಕ್ಕಾಗಿ ಚುನಾವಣೆ ನಡೆಯುತ್ತಿದ್ದು, ಮಾಯಾವತಿಯವರ ಬಹುಜನ ಸಮಾಜಪಕ್ಷ ಕ್ರಾಸ್ ವೋಟಿಂಗ್ ನಿಂದ ಮುಜುಗರದ ಪರಿಸ್ಥಿತಿಯನ್ನು ಎದುರಿಸುವಂತಾಗಿದೆ.

ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ | ಯಾವ ಪಕ್ಷಕ್ಕೆಷ್ಟು ಸೀಟು? ನೀವೇ ಊಹಿಸಿ

ಬಿಎಸ್ಪಿಯ ಶಾಸಕರೊಬ್ಬರು ನಾನು ಬಿಜೆಪಿ ಅಭ್ಯರ್ಥಿಗೆ ಮತ ಚಲಾಯಿಸಿದ್ದೇನೆಂದು ಬಹಿರಂಗವಾಗಿಯೇ ಹೇಳಿಕೆ ನೀಡಿರುವುದರಿಂದ, ಮಾಯಾವತಿ ಪಕ್ಷದ ಇನ್ನಷ್ಟು ಶಾಸಕರು ಕ್ರಾಸ್ ವೋಟಿಂಗ್ ಮಾಡಿರುವ ಸಾಧ್ಯತೆ ದಟ್ಟವಾಗಿದೆ.

ರಾಜ್ಯಸಭಾ ಚುನಾವಣೆ 2018 LIVE: ಮತದಾನ ಬಹಿಷ್ಕಾರಕ್ಕೆ ಜೆಡಿಎಸ್ ಚಿಂತನೆರಾಜ್ಯಸಭಾ ಚುನಾವಣೆ 2018 LIVE: ಮತದಾನ ಬಹಿಷ್ಕಾರಕ್ಕೆ ಜೆಡಿಎಸ್ ಚಿಂತನೆ

ಸಮಾಜವಾದಿ ಪಕ್ಷದ ಶಾಸಕ ಅನಿಲ್ ಸಿ... ರಾಜ್ಯಸಭಾ ಚುನಾವಣೆ 2018 LIVE: ಮತದಾನ ಬಹಿಷ್ಕಾರಕ್ಕೆ ಜೆಡಿಎಸ್ ಚಿಂತನೆ

ಬೇರೆಯವರ ಬಗ್ಗೆ ಗೊತ್ತಿಲ್ಲ, ನಾನಂತೂ ಬಿಜೆಪಿಗೆ ಮತಹಾಕಿದ್ದೇನೆಂದು ಬಿಎಸ್ಪಿ ಶಾಸಕ ಅನಿಲ್ ಸಿಂಗ್ ಮಾಧ್ಯಮದವರ ಮುಂದೆ ಹೇಳಿದ್ದಾರೆ. ಬಿಎಸ್ಪಿ ಶಾಸಕರು ಇನ್ನಷ್ಟು ಹೆಚ್ಚು ಕ್ರಾಸ್ ವೋಟಿಂಗ್ ನಡೆಸಿದರೆ, ಪಕ್ಷದ ಅಭ್ಯರ್ಥಿ ಭೀಮ್ ರಾವ್ ಅಂಬೇಡ್ಕರ್ ಅವರಿಗೆ ಸೋಲಾಗಲಿದೆ.

Rajyasabha election in Uttar Pradesh; Cross voting reported from BSP MLAs

ರಾಜ್ಯದಿಂದ ಹತ್ತು ಸ್ಥಾನಗಳು ಖಾಲಿಯಾಗಿದ್ದು, 403 ಸದಸ್ಯರನ್ನು ಹೊಂದಿರುವ ಅಸೆಂಬ್ಲಿಯಲ್ಲಿ ಎನ್ಡಿಎ ಮೈತ್ರಿಕೂಟ 324 ಶಾಸಕರನ್ನು ಹೊಂದಿದೆ. ಹಾಗಾಗಿ, ಹತ್ತರಲ್ಲಿ ಎಂಟು ಎನ್ಡಿಎ ಅಭ್ಯರ್ಥಿಗಳು ನಿರಾಯಾಸವಾಗಿ ಗೆಲ್ಲಲಿದ್ದಾರೆ.

ರಾಜ್ಯಸಭೆ ಚುನಾವಣೆಯಲ್ಲಿ ಗೊಂದಲ, ಮತದಾನ ಬಹಿಷ್ಕರಿಸಿದ ಜೆಡಿಎಸ್ರಾಜ್ಯಸಭೆ ಚುನಾವಣೆಯಲ್ಲಿ ಗೊಂದಲ, ಮತದಾನ ಬಹಿಷ್ಕರಿಸಿದ ಜೆಡಿಎಸ್

ಪ್ರತೀ ಅಭ್ಯರ್ಥಿಗಳಿಗೆ ಜಯಗಳಿಸಲು ಕನಿಷ್ಟ 37 ಮತಗಳು ಬೇಕಾಗಿದ್ದು, ಬಿಜೆಪಿ ಶಾಸಕರು ಪಕ್ಷದ ಎಂಟು ಅಭ್ಯರ್ಥಿಗಳ ಪರ ಮತ ಚಲಾಯಿಸಿದ ಮೇಲೂ 28 ಹೆಚ್ಚುವರಿ ಮತಗಳು ಉಳಿಯಲಿವೆ. ಬಿಜೆಪಿ ಇಲ್ಲಿ ಒಂಬತ್ತು ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದು, ಬಿಎಸ್ಪಿಯ ಕ್ರಾಸ್ ವೋಟಿಂಗ್ ನಿಂದ ಎಲ್ಲಾ ಅಭ್ಯರ್ಥಿಗಳು ಜಯಗಳಿಸುವ ಸಾಧ್ಯತೆ ಇಲ್ಲದಿಲ್ಲ.

ಹೈಡ್ರಾಮಾ : ಚುನಾವಣೆ ನಿಲ್ಲಿಸಿ, ಇದು ಅಕ್ರಮ ಎಂದ ರೇವಣ್ಣಹೈಡ್ರಾಮಾ : ಚುನಾವಣೆ ನಿಲ್ಲಿಸಿ, ಇದು ಅಕ್ರಮ ಎಂದ ರೇವಣ್ಣ

ಕೆಲವು ದಿನಗಳ ಹಿಂದೆ, ಗೋರಖಪುರ ಮತ್ತು ಫೂಲ್ ಪುರ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿಯ ವಿರುದ್ದ, ಎಸ್ಪಿ ಜೊತೆ ಮೈತ್ರಿ ಮಾಡಿಕೊಂಡು ಜಂಟಿ ಅಭ್ಯರ್ಥಿಯನ್ನು ಕಣಕ್ಕಿಳಿಸಿದ್ದ ಬಿಎಸ್ಪಿಗೆ, ತಮ್ಮದೇ ಪಕ್ಷದ ಶಾಸಕರ ಕ್ರಾಸ್ ವೋಟಿಂಗ್ ತಪ್ಪಿಸಲಾಗದೇ ಇದ್ದದ್ದು ವಿಪರ್ಯಾಸ.

English summary
Mayawati and the Bahujan Samaj Party will find it an uphill task to win a Rajya Sabha seat. Voting on 10 Rajya Sabha seats in Uttar Pradesh in underway and reports of cross-voting have started coming in. BSP MLA Anil Singh told reporters that he has voted for the Bharatiya Janata Party.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X