ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿಶೇಷ ಪ್ರಕರಣಗಳಲ್ಲಿ ಗರ್ಭಪಾತ ಗರಿಷ್ಠ ಅವಧಿ ಹೆಚ್ಚಿಸುವ ಮಸೂದೆ ರಾಜ್ಯಸಭೆಯಲ್ಲಿ ಅಂಗೀಕಾರ

|
Google Oneindia Kannada News

ನವದೆಹಲಿ, ಮಾರ್ಚ್ 16: ವಿಶೇಷ ಪ್ರಕರಣಗಳಲ್ಲಿ ಗರ್ಭಪಾತ ಗರಿಷ್ಠ ಅವಧಿ ಮಿತಿಯನ್ನು ಹೆಚ್ಚಿಸುವ ಮಸೂದೆ ಇಂದು ಸಂಸತ್‌ನಲ್ಲಿ ಅಂಗೀಕಾರಗೊಂಡಿದೆ.

ಅತ್ಯಾಚಾರ ಸಂತ್ರಸ್ತೆಯರು, ಲೈಂಗಿಕ ಕಿರುಕುಳಕ್ಕೆ ಒಳಗಾದ ಅಪ್ರಾಪ್ತೆಯರು, ದಿವ್ಯಾಂಗರು ಸೇರಿದಂತೆ ವಿಶೇಷ ಪ್ರಕರಣಗಳಲ್ಲಿ ಗರ್ಭಪಾತಕ್ಕೆ ಅನುಮತಿ ನೀಡುವ ಗರಿಷ್ಠ ಅವಧಿ ಮಿತಿಯನ್ನು ಪ್ರಸ್ತುತವಿರುವ 20 ವಾರಗಳಿಂದ 24 ವಾರಗಳಿಗೆ ಹೆಚ್ಚಿಸುವ ಮಸೂದೆ ರಾಜ್ಯಸಭೆಯಲ್ಲಿ ಮಂಗಳವಾರ ಅಂಗೀಕಾರಗೊಂಡಿದೆ.

ಕೊರೊನಾ ವೈರಸ್: ದಕ್ಷಿಣ ಕನ್ನಡ ಮೂಲದ 7 ತಿಂಗಳ ಗರ್ಭಿಣಿ ದುಬೈನಲ್ಲಿ ಸಾವುಕೊರೊನಾ ವೈರಸ್: ದಕ್ಷಿಣ ಕನ್ನಡ ಮೂಲದ 7 ತಿಂಗಳ ಗರ್ಭಿಣಿ ದುಬೈನಲ್ಲಿ ಸಾವು

ವೈದ್ಯಕೀಯ ಗರ್ಭಪಾತ (ತಿದ್ದುಪಡಿ) ಮಸೂದೆ 2020ನ್ನು ಧ್ವನಿ ಮತದಿಂದ ಸದನ ಅಂಗೀಕರಿಸಿತು. ಲೋಕಸಭೆಯಲ್ಲಿ ವರ್ಷದ ಹಿಂದೆಯೇ ಈ ಮಸೂದೆ ಅಂಗೀಕಾರಗೊಂಡಿತ್ತು.

Rajya Sabha Passes Bill To Raise Upper Limit For Abortions To 24 Weeks In Special Cases

ಜಾಗತಿಕ ಅಭ್ಯಾಸಗಳನ್ನು ಅಧ್ಯಯನ ನಡೆಸಿ, ದೇಶದಲ್ಲಿ ವ್ಯಾಪಕವಾದ ಸಮಾಲೋಚನೆ ಬಳಿಕ ಮಸೂದೆಗೆ ತಿದ್ದುಪಡಿ ಮಾಡಲಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ್ ಹೇಳಿದರು.

ಸದಸ್ಯರು ಪ್ರಸ್ತಾಪಿಸಿದ ಇತರ ಕೆಲವು ತಿದ್ದುಪಡಿಗಳೊಂದಿಗೆ ರಾಜ್ಯಸಭೆಯ ಸೆಲೆಕ್ಟ್ ಕಮಿಟಿಗೆ ಮಸೂದೆಯನ್ನು ಕಳುಹಿಸಬೇಕೆಂಬ ಬೇಡಿಕೆಗೆ ಧ್ವನಿಮತದಲ್ಲಿ ಸೋಲಾಯಿತು. ನಂತರ ತಿದ್ದುಪಡಿ ಮಸೂದೆಯನ್ನು ಅಂಗೀಕರಿಸಲಾಗಿದೆ ಎಂದು ರಾಜ್ಯಸಭಾ ಉಪಾಧ್ಯಕ್ಷ ಹರಿವಂಶ ನಾರಾಯಣ್ ಸಿಂಗ್ ತಿಳಿಸಿದರು.

English summary
Rajya Sabha on Tuesday passed a bill to raise the upper limit for permitting abortions from the present 20 weeks to 24 weeks for “special categories of women” including rape survivors, victims of incest, minors and the differently-abled.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X