ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಾಜ್ಯಸಭೆ ಚುನಾವಣೆ; ಬಿಜೆಪಿಗೆ 9 ಸ್ಥಾನ, ಬಹುಮತವಿಲ್ಲ!

|
Google Oneindia Kannada News

ನವದೆಹಲಿ, ಜೂನ್ 09 : ರಾಜ್ಯಸಭೆ ಚುನಾವಣೆಗೆ ನಾಮಪತ್ರಗಳನ್ನು ಸಲ್ಲಿಸಲು ಮಂಗಳವಾರ ಕೊನೆಯ ದಿನವಾಗಿದೆ. ಜೂನ್ 19ರಂದು ವಿವಿಧ ರಾಜ್ಯಗಳ ವಿಧಾನಸಭೆಯಿಂದ 24 ರಾಜ್ಯಸಭಾ ಸದಸ್ಯರನ್ನು ಆಯ್ಕೆ ಮಾಡಲು ಚುನಾವಣೆ ನಡೆಯಲಿದೆ.

Recommended Video

Sanju Samson talks about his and Rishab Pant Rivalry | Oneindia Kannada

ರಾಜ್ಯಸಭಾ ಚುನಾವಣೆಯಲ್ಲಿ ಬಿಜೆಪಿ 9 ಸ್ಥಾನಗಳಲ್ಲಿ ಜಯಗಳಿಸಲಿದೆ ಎಂದು ನಿರೀಕ್ಷಿಸಲಾಗಿದೆ. ಇದರಿಂದಾಗಿ ಮೇಲ್ಮನೆಯಲ್ಲಿ ಬಿಜೆಪಿಯ ಬಲ 100ಕ್ಕೆ ಏರಿಕೆಯಾಗಲಿದೆ. ರಾಜ್ಯಸಭೆಯಲ್ಲಿ ಸ್ಪಷ್ಟ ಬಹುಮತ ಪಡೆಯಲು 22 ಸದಸ್ಯರ ಕೊರತೆ ಎದುರಾಗಲಿದೆ.

Oneindia explainer; ರಾಜ್ಯಸಭೆ ಚುನಾವಣೆ ಹೇಗೆ ನಡೆಯುತ್ತದೆ?Oneindia explainer; ರಾಜ್ಯಸಭೆ ಚುನಾವಣೆ ಹೇಗೆ ನಡೆಯುತ್ತದೆ?

ಜೂನ್ 19ರಂದು ಚುನಾವಣೆ ನಡೆಯುವ 24 ಸ್ಥಾನಗಳ ಪೈಕಿ 18 ಸ್ಥಾನಗಳ ಚುನಾವಣೆ ಕೊರೊನಾ ವೈರಸ್ ಸೋಂಕಿನ ಕಾರಣದಿಂದಾಗಿ ಮುಂದೂಡಲ್ಪಟ್ಟಿತ್ತು. ಉಳಿದ 6 ಸ್ಥಾನಗಳು ಮುಂದಿನ 40 ದಿನಗಳಲ್ಲಿ ತೆರವಾಗುವಂತಹವು.

ಪರಿಷತ್ ಟಿಕೆಟ್ ಆಕಾಂಕ್ಷಿಯಾಗಿದ್ದ ಈರಣ್ಣ ಕಡಾಡಿ ರಾಜ್ಯಸಭೆಗೆ! ಪರಿಷತ್ ಟಿಕೆಟ್ ಆಕಾಂಕ್ಷಿಯಾಗಿದ್ದ ಈರಣ್ಣ ಕಡಾಡಿ ರಾಜ್ಯಸಭೆಗೆ!

242 ಸದಸ್ಯ ಬಲದ ಮೇಲ್ಮನೆಯಲ್ಲಿ ಯಾವುದೇ ವಿಧೇಯಕ್ಕೆ ಅಂಗೀಕಾರ ಪಡೆಯಲು ಎನ್‌ಡಿಎ ಸರ್ಕಾರಕ್ಕೆ 22 ಮತಗಳ ಕೊರತೆಯಾಗಲಿದೆ. ವಿಧೇಯಕಗಳನ್ನು ಮಂಡಿಸಿದಾಗ ಮಿತ್ರಪಕ್ಷಗಳಾದ ಎಐಎಡಿಎಂಕೆ, ಬಿಜೆಡಿ, ವೈಎಸ್‌ಆರ್‌ಪಿ ಮತ್ತು ಟಿಆರ್‌ಎಸ್‌ಗಳ ಬೆಂಬಲ ಪಡೆಯುವುದು ಅನಿವಾರ್ಯವಾಗಲಿದೆ.

ರಾಜ್ಯಸಭೆ ಚುನಾವಣೆಗೆ ಬಿಜೆಪಿ ಅಭ್ಯರ್ಥಿ ಘೋಷಣೆ ರಾಜ್ಯಸಭೆ ಚುನಾವಣೆಗೆ ಬಿಜೆಪಿ ಅಭ್ಯರ್ಥಿ ಘೋಷಣೆ

ಜೂನ್ 19ರ ಚುನಾವಣೆ

ಜೂನ್ 19ರ ಚುನಾವಣೆ

ವಿವಿಧ ರಾಜ್ಯಗಳ ವಿಧಾನಸಭೆಯಿಂದ 24 ರಾಜ್ಯಸಭಾ ಸದಸ್ಯರನ್ನು ಆಯ್ಕೆ ಮಾಡಲು ಜೂನ್ 19ರಂದು ಚುನಾವಣೆ ನಡೆಯುವ ಸಾಧ್ಯತೆ ಇದೆ. ಆಗ ಬಿಜೆಪಿ 9 ಸ್ಥಾನಗಳಲ್ಲಿ ಜಯಗಳಿಸಲಿದೆ. ಪ್ರಸ್ತುತ ಇರುವ ಪಕ್ಷದ ಸದಸ್ಯರ ಸಂಖ್ಯೆ 75 ರಿಂದ 84ಕ್ಕೆ ಏರಿಕೆಯಾಗಲಿದೆ. ಎನ್‌ಡಿಎ ಮೈತ್ರಿಕೂಟದ ಒಟ್ಟು ಬಲ 100 ಆಗಲಿದೆ.

ಕಾಂಗ್ರೆಸ್ ಬಲವೇನು?

ಕಾಂಗ್ರೆಸ್ ಬಲವೇನು?

ರಾಜ್ಯಸಭೆಯಲ್ಲಿ ಪ್ರಸ್ತುತ ಕಾಂಗ್ರೆಸ್ 39 ಸದಸ್ಯ ಬಲ ಹೊಂದಿದೆ. ಜೂನ್ 19ರ ಚುನಾವಣೆ ಬಳಿಕ ಕಾಂಗ್ರೆಸ್ ಬಲ 37ಕ್ಕೆ ಇಳಿಕೆಯಾಗಲಿದೆ. ಡಿಎಂಕೆಯ 7, ಆರ್‌ಜೆಡಿ 5, ಎನ್‌ಸಿಪಿ 4, ಶಿವಸೇನೆ 3 ಮತ್ತು ಇತರರು ಸೇರಿ ಯುಪಿಎ ಮೈತ್ರಿಕೂಟದ ಬಲ 61 ಆಗಲಿದೆ.

ಸ್ಥಾನಗಳು ತೆರವಾಗಲಿವೆ

ಸ್ಥಾನಗಳು ತೆರವಾಗಲಿವೆ

ರಾಜ್ಯಸಭೆಯ ಸ್ಥಾನಗಳ ಪೈಕಿ ಜುಲೈ 18ರಂದು ಒಟ್ಟು 27 ಸ್ಥಾನಗಳು ತೆರವಾಗಲಿವೆ. ಉತ್ತರ ಪ್ರದೇಶ, ಬಿಹಾರ ಮತ್ತು ಕೇರಳ ವಿಧಾನಸಭೆಯ ತಲಾ ಒಂದು ಸ್ಥಾನ ತೆರವಾಗಲಿದೆ. ಅದಕ್ಕೆ ಚುನಾವಣೆ ನಡೆದಾಗ ಬಿಜೆಪಿ ಜಯಗಳಿಸಿದರೆ ಪಕ್ಷದ ಬಲ ರಾಜ್ಯಸಭೆಯಲ್ಲಿ ಏರಿಕೆಯಾಗಲಿದೆ.

ಕುಸಿದಿದ್ದ ಬಿಜೆಪಿ ಬಲ

ಕುಸಿದಿದ್ದ ಬಿಜೆಪಿ ಬಲ

ಬಿಜೆಪಿ ರಾಜ್ಯಸಭೆಯಲ್ಲಿ 81 ಸದಸ್ಯ ಬಲ ಹೊಂದಿತ್ತು. ಆದರೆ ಮಾರ್ಚ್‌ನಲ್ಲಿ ನಡೆದ ಚುನಾವಣೆ ಬಳಿಕ ಸದಸ್ಯ ಬಲ ಕುಸಿದಿತ್ತು. ವಿಧೇಯಕಗಳಿಗೆ ಅನುಮೋದನೆ ಪಡೆಯುವ ಸಂದರ್ಭದಲ್ಲಿ ಎನ್‌ಡಿಎ ಸರ್ಕಾರ ಎನ್‌ಡಿಎ ಮತ್ತು ಯುಪಿಎ ಮೈತ್ರಿಕೂಟಕ್ಕೆ ಸೇರದ ನಾಮ ನಿರ್ದೇಶಿತ ಸದಸ್ಯರು, ಪಕ್ಷಗಳ ಬೆಂಬಲ ಪಡೆಯಬೇಕು.

English summary
BJP may win 9 seats in Rajya Sabha election scheduled on June 19, 2020 to elect 24 members form various states assembly. Till NDA need 22 seats to get majority in house of 242.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X