ರಾಜ್ಯಸಭೆ ಚುನಾವಣಾ ಫಲಿತಾಂಶ 2018

Posted By: Gururaj
Subscribe to Oneindia Kannada

ಬೆಂಗಳೂರು, ಮಾರ್ಚ್ 23 : 59 ರಾಜ್ಯಸಭಾ ಸದಸ್ಯರನ್ನು ಆಯ್ಕೆ ಮಾಡಲು ಶುಕ್ರವಾರ ಚುನಾವಣೆ ನಡೆಯಿತು. ಕರ್ನಾಟಕ ವಿಧಾನಸಭೆಯಿಂದ 4 ಅಭ್ಯರ್ಥಿಗಳು ರಾಜ್ಯಸಭೆಗೆ ಆಯ್ಕೆಯಾದರು.

ಕರ್ನಾಟಕ ವಿಧಾನಸಭೆಯಿಂದ 4 ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಬಿಜೆಪಿಯ ಒಬ್ಬರು, ಕಾಂಗ್ರೆಸ್ ಪಕ್ಷದ ಮೂವರು ಅಭ್ಯರ್ಥಿಗಳು ಜಯಗಳಿಸಿದರು. ಜೆಡಿಎಸ್‌ ಪಕ್ಷದಿಂದ ಸ್ಪರ್ಧಿಸಿದ್ದ ಬಿ.ಎಂ.ಫಾರೂಕ್ ಸೋಲು ಅನುಭವಿಸಿದರು.

ರಾಜ್ಯಸಭೆ ಚುನಾವಣೆ 2018 : ಕರ್ನಾಟಕದಲ್ಲಿ ಗೆದ್ದವರು, ಸೋತವರು

ಬಿಜೆಪಿಯ ರಾಜೀವ್ ಚಂದ್ರಶೇಖರ್, ಕಾಂಗ್ರೆಸ್‌ನ ಡಾ.ಎಲ್.ಹನುಮಂತಯ್ಯ, ಡಾ.ನಾಸೀರ್ ಹುಸೇನ್, ಜಿ.ಸಿ.ಚಂದ್ರಶೇಖರ್ ರಾಜ್ಯಸಭೆಗೆ ಆಯ್ಕೆಯಾದರು. ಕಳೆದ ಎರಡು ಬಾರಿ ಪಕ್ಷೇತರ ಅಭ್ಯರ್ಥಿಯಾಗಿ ಆಯ್ಕೆಯಾಗಿದ್ದ ರಾಜೀವ್ ಚಂದ್ರಶೇಖರ್ ಈ ಬಾರಿ ಬಿಜೆಪಿ ಅಭ್ಯರ್ಥಿಯಾಗಿ ಆಯ್ಕೆಯಾದರು.

Rajya Sabha election

ದೇಶದ 16 ರಾಜ್ಯಗಳ ವಿಧಾನಸಭೆಯಿಂದ ಆಯ್ಕೆಯಾದ 58 ಸದಸ್ಯರ ಅವಧಿ ಏಪ್ರಿಲ್ 3ಕ್ಕೆ ಅಂತ್ಯಗೊಳ್ಳಿದೆ. ತೆರವಾಗುವ ಸ್ಥಾನಗಳನ್ನು ಭರ್ತಿ ಮಾಡಲು ಇಂದು ಮತದಾನ ನಡೆಯಿತು. 58 ಸ್ಥಾನಗಳ ಪೈಕಿ 33 ಸದಸ್ಯರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಉಳಿದ ಸ್ಥಾನಗಳನ್ನು ಭರ್ತಿ ಮಾಡಲು ಮತದಾನ ನಡೆಯಿತು.

ರಾಜ್ಯಸಭಾ ಚುನಾವಣೆ: 217 ಅರ್ಹ ಮತಗಳ ಪೈಕಿ 188 ಮತಗಳ ಚಲಾವಣೆ

ಇಂದು ಉತ್ತರ ಪ್ರದೇಶದ 10, ಪಶ್ಚಿಮ ಬಂಗಾಳದ 5, ಕರ್ನಾಟಕದ 4, ತೆಲಂಗಾಣದ 3, ಜಾರ್ಖಂಡ್‌ನ 2, ಛತ್ತೀಸ್‌ಗಢದ 1, ಕೇರಳದ 1 ಸ್ಥಾನಗಳಿಗೆ ಚುನಾವಣೆ ನಡೆಯಿತು.

ಚುನಾವಣಾ ಫಲಿತಾಂಶ

* ಪಶ್ಚಿಮ ಬಂಗಾಳ 5 ಸ್ಥಾನ : ಟಿಎಂಸಿ 4, ಕಾಂಗ್ರೆಸ್ 1ರಲ್ಲಿ ಜಯಗಳಿಸಿದೆ.

* ಕರ್ನಾಟಕ 4 ಸ್ಥಾನ : ಕಾಂಗ್ರೆಸ್ 3, ಬಿಜೆಪಿ 1 ಸ್ಥಾನದಲ್ಲಿ ಜಯ.

* ತೆಲಂಗಾಣ 3 ಸ್ಥಾನ : ಟಿಆರ್‌ಎಸ್ 3 ಸ್ಥಾನಗಳಲ್ಲಿ ಜಯ.

* ಜಾರ್ಖಂಡ್‌ 2 ಸ್ಥಾನ : ಬಿಜೆಪಿ ಮತ್ತು ಕಾಂಗ್ರೆಸ್ ತಲಾ 1 ಸ್ಥಾನದಲ್ಲಿ ಜಯ.

* ಛತ್ತೀಸ್‌ಗಢ 1 ಸ್ಥಾನ : ಬಿಜೆಪಿಗೆ ಜಯ

* ಕೇರಳ 1 ಸ್ಥಾನ : ಎಲ್‌ಡಿಎಫ್ ಜಯ.

* ಉತ್ತರ ಪ್ರದೇಶ 10 ಸ್ಥಾನ : 9 ಬಿಜೆಪಿ, 1 ಎಸ್ಪಿ ಜಯ

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Rajya Sabha election held on March 23, 2018 for 58 seats from 16 states including 4 seats of Karnataka. Here is a result.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ