ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇಂಥ ಯುದ್ಧ ವಿಮಾನದಲ್ಲಿ ಪ್ರಯಾಣಿಸುವ ಕನಸನ್ನೂ ಕಂಡಿರಲಿಲ್ಲ: ರಾಜನಾಥ್ ಸಿಂಗ್

|
Google Oneindia Kannada News

ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಮಂಗಳವಾರ ಸಂಜೆ ಮೊದಲ ರಫೇಲ್ ಯುದ್ಧ ವಿಮಾನದಲ್ಲಿ ಪ್ರಯಾಣ ಬೆಳೆಸಿದರು. 87 ನೇ ವಾಯುಸೇನೆ ದಿನದಂದು ಭಾರತ ಸೇನೆಯ ತೆಕ್ಕೆಗೆ ಸೇರಿಕೊಂಡ ರಫೇಲ್ ಫೈಟರ್ ಜೆಟ್ ನಲ್ಲಿ ಪ್ರಯಾಣ ಬೆಳೆಸಿದ ತಮ್ಮ ಅನುಭವವನ್ನು ರಾಜನಾಥ್ ಸಿಂಗ್ ಹಂಚಿಕೊಂಡಿದ್ದಾರೆ.

ರಫೇಲ್ ಯುದ್ಧ ವಿಮಾನದ ನೆತ್ತಿಗೆ 'ಓಂ'ಕಾರ, ಚಕ್ರದಡಿ ನಿಂಬೆಹಣ್ಣುರಫೇಲ್ ಯುದ್ಧ ವಿಮಾನದ ನೆತ್ತಿಗೆ 'ಓಂ'ಕಾರ, ಚಕ್ರದಡಿ ನಿಂಬೆಹಣ್ಣು

ರಫೇಲ್ ಪ್ರಯಾಣಕ್ಕೂ ಮುಂಚೆ ಯುದ್ಧವಿಮಾನಕ್ಕೆ ಕುಂಕುಮ ಹಚ್ಚಿ, ಹೂವು ಏರಿಸಿ, ಅದರ ಚಕ್ರದ ಬಳಿ ನಿಂಬೆ ಹಣ್ಣಿ ಇಟ್ಟು ಆಯುಧ ಪೂಜೆ ನೆರವೇರಿಸಿದ ರಾಜನಾಥ್ ಸಿಂಗ್, ನಂತರ ಈ ವಾನದಲ್ಲಿ ಪ್ರಯಾಣಿಸಿದರು. ವಿವಾದದ ಕೇಂದ್ರಬಿಂದುವಾಗಿದ್ದ ರಫೇಲ್ ಫೈಟರ್ ಜೆಟ್ ಮಂಗಳವಾರ ಅಧಿಕೃತವಾಗಿ ಭಾರತೀಯ ಸೇನೆ ಸೇರಿದೆ.

ನಂತರ ತಮ್ಮ ಅನುಭವವನ್ನು ಹಂಚಿಕೊಂಡರು.

ಕನಸಿನಲ್ಲಿಯೂ ಎಣಿಸಿರಲಿಲ್ಲ!

ಕನಸಿನಲ್ಲಿಯೂ ಎಣಿಸಿರಲಿಲ್ಲ!

"ರಫೇಲ್ ಯುದ್ಧ ವಿಮಾನ ಅತ್ಯಂತ ಮೃದು ಮತ್ತು ಸುಧಾರಿತ ತತ್ರಜ್ಞಾನದ ಫೈಟರ್ ಜೆಟ್. ಇಂಥ ಸೂಪರ್ ಸ್ಪೀಡ್ ಯುದ್ಧ ವಿಮಾನದಲ್ಲಿ ನಾನೊಂದು ದಿನ ಪ್ರಯಾಣ ಮಾಡುತ್ತೇನೆ ಎಂದು ನಾನು ಕನಸಿನಲ್ಲಿಯೂ ನಿರೀಕ್ಷಿಸರಲಿಲ್ಲ" ಎಂದು ರಾಜನಾಥ್ ಸಿಂಗ್ ತಮ್ಮ ಅನುಭವವನ್ನು ಹಂಚಿಕೊಂಡರು.

ಸ್ವರಕ್ಷಣೆಗಾಗಿ ಮಾತ್ರ!

ಸ್ವರಕ್ಷಣೆಗಾಗಿ ಮಾತ್ರ!

ರಫೇಲ್ ಏರ್ ಕ್ರಾಫ್ಟ್ ಅನ್ನು ನಾವು ಯಾರ ಮೇಲೆಯೂ ದಾಳಿ ಮಾಡುವುದಕ್ಕಾಗಿ ಖರೀದಿಸಿಲ್ಲ. ಬದಲಾಗಿ ನಮ್ಮ ಸ್ವರಕ್ಷಣೆಗಾಗಿ ಖರೀದಿ ಮಾಡಿದ್ದೇವೆ ಎಂದು ರಫೇಲ್ ಪ್ರಯಾಣದ ನಂತರ ರಾಜನಾಥ್ ಸಿಂಗ್ ಹೇಳಿದರು.

"ನಮ್ಮ ವಾಯುಸೇನೆ ಜಗತ್ತಿನಲ್ಲೇ ನಾಲ್ಕನೇ ದೊಡ್ಡ ವಾಯುಸೇನೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಇದೀಗ ರಫೇಲ್ ಸಹ ಸೇನೆಗೆ ಸೇರಿರುವುದು ಮತ್ತಷ್ಟು ಬಲ ತಂದಿದೆ. ರಫೇಲ್ ಎಂಬ ಫ್ರೆಂಚ್ ಪದದ ಅರ್ಥ ಹುಮ್ಮಸ್ಸಿನಿಂದ ಬೀಸುವ ಗಾಳಿ ಎಂದರ್ಥ. ನಮ್ಮ ಸೇನೆಗೂ ಇದು ಗಾಳಿಯ ವೇಗವನ್ನು ನೀಡಿದೆ" ಎಂದು ಸಿಂಗ್ ಹೇಳಿದರು.

ಮಂಗಳವಾರ ಮೊದಲ ರಫೇಲ್ ವಿಮಾನ ಭಾರತಕ್ಕೆ: ವಿಶೇಷತೆಗಳೇನು?ಮಂಗಳವಾರ ಮೊದಲ ರಫೇಲ್ ವಿಮಾನ ಭಾರತಕ್ಕೆ: ವಿಶೇಷತೆಗಳೇನು?

ಮೊದಲನೆಯ ಯುದ್ಧ ವಿಮಾನ

ಮೊದಲನೆಯ ಯುದ್ಧ ವಿಮಾನ

RB-01 ಎಂಬ ಹೆಸರಿನ ರಫೇಲ್ ಯುದ್ಧ ವಿಮಾನ ಭಾರತ ಫ್ರಾನ್ಸ್ ನಿಂದ ಖರೀದಿ ಮಾಡಿದ 36 ಯುದ್ಧ ವಿಮಾನಗಳಲ್ಲಿ ಮೊದಲನೆಯದಾಗಿದೆ. ಅತ್ಯಾಧುನಿಕ ತಂತ್ರಜ್ಞಾನವುಳ್ಳ ಈ ಯುದ್ಧ ವಿಮಾನ ಎದುರಾಳಿಗಳ ದಾಳಿಯನ್ನು ಸಮರ್ಥವಾಗಿ ಎದುರಿಸಲು ಮತ್ತು ಸೋಲಿಸಲು ಅತ್ಯಂತ ಸಮರ್ಪಕವಾಗಿದೆ.

ಮೂರು ವರ್ಷಗಳ ಹಿಂದೆ ಒಪ್ಪಂದಕ್ಕೆ ಸಹಿ

ಮೂರು ವರ್ಷಗಳ ಹಿಂದೆ ಒಪ್ಪಂದಕ್ಕೆ ಸಹಿ

36 ರಾಫೆಲ್ ಯುದ್ಧ ವಿಮಾನ ವ್ಯವಹಾರ ಒಪ್ಪಂದಕ್ಕೆ ಸೆಪ್ಟೆಂಬರ್ 23, 2016ರಂದು ಶುಕ್ರವಾರ ಉಭಯ ದೇಶಗಳ ಪ್ರತಿನಿಧಿಗಳು ಸಹಿ ಹಾಕಿದ್ದರು. ಸುಮಾರು 7.8 ಬಿಲಿಯನ್ ಯುರೋ (ಸುಮಾರು 780 ಕೋಟಿ) ವ್ಯವಹಾರಿಕ ಮೊತ್ತ ಇದಾಗಿದೆ. ಅಂದು ಕೇಂದ್ರ ರಕ್ಷಣಾ ಸಚಿವ ಮನೋಹರ ಪರಿಕ್ಕರ್ ಮತ್ತು ಫ್ರಾನ್ಸ್ ರಕ್ಷಣಾ ಸಚಿವ ಜಿಯಾನ್ ವೈವೆಸ್ ಲೆಡ್ರಿಯನ್ ಅವರು ದೆಹಲಿಯಲ್ಲಿ ಈ ಐತಿಹಾಸಿಕ ಒಪ್ಪಂದಕ್ಕೆ ಸಹಿ ಹಾಕಿದ್ದರು.

English summary
Defence Minister Rajnath Singh shares his experience in his Travel in First Rafale Aircraft Received From France.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X