ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚೀನಾ ಹೇಳುವುದು ಒಂದು ಮಾಡುವುದು ಇನ್ನೊಂದು: ರಾಜನಾಥ್ ಸಿಂಗ್ ಆರೋಪ

|
Google Oneindia Kannada News

ನವದೆಹಲಿ, ಸೆಪ್ಟೆಂಬರ್ 17: ದ್ವಿಪಕ್ಷೀಯ ಒಪ್ಪಂದಗಳನ್ನು ಗೌರವಿಸುವುದರಲ್ಲಿ ಚೀನಾ ವಿಫಲವಾಗುತ್ತಿದೆ. ಬೀಜಿಂಗ್ ಹೇಳುವುದಕ್ಕೂ ಅದು ಮಾಡುವುದಕ್ಕೂ ಸಂಬಂಧವೇ ಇಲ್ಲ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಟೀಕಿಸಿದರು.

ರಾಜ್ಯಸಭೆಯಲ್ಲಿ ಗುರುವಾರ ಮಾತನಾಡಿದ ಅವರು, 'ಸೇನಾ ಮಾತುಕತೆಗಳು ನಡೆಯುವ ಸಂದರ್ಭದಲ್ಲಿಯೇ ಮೇ ತಿಂಗಳಿನಲ್ಲಿ ಚೀನಾದ ಪಡೆಗಳು ಎಲ್‌ಎಸಿಯ ಪಶ್ಚಿಮ ವಲಯದ ಹಲವು ಭಾಗಗಳಲ್ಲಿ ಒಳನುಸುಳಲು ಪ್ರಯತ್ನಿಸಿದ್ದವು. ಆಗ ಸೂಕ್ತ ಸಮಯಕ್ಕೆ ನಮ್ಮ ಸೇನಾ ಪಡೆಗಳು ನಡೆಸಿದ ಕಾರ್ಯದಲ್ಲಿ ಅಂತಹ ಪ್ರಯತ್ನಗಳನ್ನು ವಿಫಲಗೊಳಿಸಲಾಯಿತು ಎಂದು ತಿಳಿಸಿದರು.

ಲೌಡ್ ಸ್ಪೀಕರ್‌ನಲ್ಲಿ ಪಂಜಾಬಿ ಹಾಡು ಹಾಕಿದ ಚೀನಾ ಸೈನಿಕರುಲೌಡ್ ಸ್ಪೀಕರ್‌ನಲ್ಲಿ ಪಂಜಾಬಿ ಹಾಡು ಹಾಕಿದ ಚೀನಾ ಸೈನಿಕರು

ಚೀನಾದ ಈ ಚಟುವಟಿಕೆಗಳು 1993 ಮತ್ತು 1996ರ ಒಪ್ಪಂದಗಳ ವಿರುದ್ಧವಾಗಿವೆ. ಗಡಿ ಪ್ರದೇಶಗಳಲ್ಲಿ ತಮ್ಮ ನಿಯೋಜನಾ ಸಾಮರ್ಥ್ಯವನ್ನು ಹೆಚ್ಚಿಸಲು ಚೀನಾವು ಮಹತ್ವದ ಮೂಲಸೌಕರ್ಯ ನಿರ್ಮಾಣ ಚಟುವಟಿಕೆಗಳನ್ನು ಕಳೆದ ಹಲವು ದಶಕಗಳಿಂದ ನಡೆಸುತ್ತಾ ಬಂದಿದೆ. ನಮ್ಮ ಸರ್ಕಾರ ಕೂಡ ಗಡಿ ಭಾಗದ ಮೂಲಸೌಕರ್ಯ ಅಭಿವೃದ್ಧಿಗೆ ಕಳೆದ ಬಾರಿಗಿಂತ ದುಪ್ಪಟ್ಟು ಬಜೆಟ್ ವಿನಿಯೋಗಿಸಿದೆ ಎಂದು ಹೇಳಿದರು.

Rajnath Singh Blames China For Standoff Along LAC In Ladakh

ಭಾರತವು ಗಡಿ ವಿಚಾರದಲ್ಲಿ ಶಾಂತಿಯುತ ಪರಿಹಾರ ಕಂಡುಕೊಳ್ಳಲು ಬಯಸುತ್ತದೆ. ಆದರೆ ದೇಶದ ಸಾರ್ವಭೌಮತೆಯನ್ನು ಉಳಿಸಲು ಅಗತ್ಯವಾದ ಯಾವುದೇ ಕ್ರಮ ತೆಗೆದುಕೊಳ್ಳಲು ಕೂಡ ಹಿಂದೇಟು ಹಾಕುವುದಿಲ್ಲ. ನಮ್ಮ ಸೇನಾ ಪಡೆಗಳು ಒಪ್ಪಂದಗಳಿಗೆ ಬದ್ಧವಾಗಿದೆ. ಆದರೆ ಇದೇ ನೀತಿ ಚೀನಾದ ಕಡೆಯಿಂದ ಕಾಣಿಸುತ್ತಿಲ್ಲ ಎಂದು ಆರೋಪಿಸಿದರು.

English summary
Parliament Monsoon Session 2020: Defence Minister Rajnath Singh in Rajya Sabha said there is no link between what china says and does.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X