ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಿಆರ್‌ಪಿಎಫ್ ನೂತನ ಮುಖ್ಯಸ್ಥರಾಗಿ ರಾಜೀವ್ ರೈ

ಸಿಆರ್‌ಪಿಎಫ್ ಮುಖ್ಯಸ್ಥರಾಗಿದ್ದ ಕೋಡೆ ದುರ್ಗಾ ಪ್ರಸಾದ್ ನಿವೃತ್ತಿ ನಂತರ ಸುಮಾರು ಎರಡು ತಿಂಗಳ ಕಾಲ ಯಾರನ್ನೂ ಸಿಆರ್‌ಪಿಎಫ್ ಮುಖ್ಯಸ್ಥರ ಸ್ಥಾನಕ್ಕೆ ನೇಮಿಸಿರಲಿಲ್ಲ. ಇದೀಗ ನೂತನ ಮುಖ್ಯಸ್ಥರಾಗಿ ರಾಜೀವ್ ರೈರನ್ನು ನೇಮಿಸಲಾಗಿದೆ.

By ವಿಕಾಸ್ ನಂಜಪ್ಪ
|
Google Oneindia Kannada News

ಬೆಂಗಳೂರು, ಏಪ್ರಿಲ್ 26: ಸಿಆರ್‌ಪಿಎಫ್ ನೂತನ ಮುಖ್ಯಸ್ಥರಾಗಿ ರಾಜೀವ್ ರೈ ಭಟ್ನಾಗರ್ ರನ್ನು ನೇಮಿಸಲಾಗಿದೆ. ಛತ್ತೀಸ್ ಘಡ ನಕ್ಸಲ್ ದಾಳಿ ಬೆನ್ನಿಗೆ ಈ ಬದಲಾವಣೆ ಮಾಡಲಾಗಿದೆ.

ಸಿಆರ್‌ಪಿಎಫ್ ಮುಖ್ಯಸ್ಥರಾಗಿದ್ದ ಕೋಡೆ ದುರ್ಗಾ ಪ್ರಸಾದ್ ನಿವೃತ್ತಿ ನಂತರ ಸುಮಾರು ಎರಡು ತಿಂಗಳ ಕಾಲ ಯಾರನ್ನೂ ಸಿಆರ್‌ಪಿಎಫ್ ಮುಖ್ಯಸ್ಥರ ಸ್ಥಾನಕ್ಕೆ ನೇಮಿಸಿರಲಿಲ್ಲ. ಹೀಗಾಗಿ ಛತ್ತೀಸ್ ಘಡ ನಕ್ಸಲ್ ದಾಳಿ ನಡೆದಾಗ ಮುಖ್ಯಸ್ಥರ ಹುದ್ದೆಯನ್ನು ಖಾಲಿ ಬಿಟ್ಟಿದ್ದಕ್ಕೆ ಸರಕಾರ ಭಾರೀ ಟೀಕೆಗೆ ಗುರಿಯಾಗಿತ್ತು. ಇದೀಗ ಡಿಜಿಪಿ ಹುದ್ದೆಗೆ ರಾಜೀವ್ ರೈ ನೇಮಕ ಮಾಡಿ ಕೇಂದ್ರ ಗೃಹ ಇಲಾಖೇ ಆದೇಶ ಹೊರಡಿಸಿದೆ.[ಸಿಆರ್ ಪಿಎಫ್ ಮುಖ್ಯಸ್ಥರ ನೇಮಕ ಸರಕಾರದ ಆದ್ಯತೆ ಆಗಬೇಕು ಏಕೆ?]

Rajiv Rai Bhatnagar is new CRPF chief

ರಾಜೀವ್ ರೈ ಭಟ್ನಾಗರ್ 1983ರ ಉತ್ತರ ಪ್ರದೇಶ ಕೇಡರ್ ಐಪಿಎಸ್ ಅಧಿಕಾರಿಯಾಗಿದ್ದಾರೆ. ಸಿಆರ್‌ಪಿಎಫ್ ಡಿಜಿಯಾಗಿ ನೇಮಕವಾಗುವ ಮೊದಲು ಭಟ್ನಾಗರ್ ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋದಲ್ಲಿ ಎಡಿಜಿಪಿಯಾಗಿ ಕಾರ್ಯ ನಿರ್ವಹಿಸುತ್ತಿದ್ದರು.[ಅಪನಗದೀಕರಣದಿಂದ ನಕ್ಸಲರಿಗೆ ಸಮಸ್ಯೆಯಾಗಿದೆಯಾ? ಖಂಡಿತಾ ಹಾಗನಿಸಲ್ಲ]

ಹಾಗೆ ನೋಡಿದರೆ 1983ರ ಬ್ಯಾಚ್ ಐಪಿಎಸ್ ಅಧಿಕಾರಿಗಳಲ್ಲಿ ಭಟ್ನಾಗರ್ ಗೆ ಮಾತ್ರ ಡಿಜಿಪಿ ಹುದ್ದೆ ಸಿಕ್ಕಿರಲಿಲ್ಲ. ಉಳಿದವರೆಲ್ಲರೂ ಈಗಾಗಲೇ ಡಿಜಿಪಿ ಹುದ್ದೆಗೆ ಬಂದಿದ್ದಾರೆ. ಇದೀಗ ಭಟ್ನಾಗರ್ ಕೂಡಾ ಡಿಜಿಪಿ ಹುದ್ದೆಗೇರಿದಂತಾಗಿದೆ.

English summary
Rajiv Rai Bhatnagar is the new chief of the CRPF. The post was lying vacant for the past two months following the retirement of Kode Durga Prasad. Following the Chhattisgarh attack the government had been criticised for not filling up the post.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X