ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಾಜೀವ್ ಗಾಂಧಿ ಮತ್ತು ಮೋದಿಗಿರುವ ವ್ಯತ್ಯಾಸ: ಸೋನಿಯಾ ಕಂಡಂತೆ

|
Google Oneindia Kannada News

ನವದೆಹಲಿ, ಆ 23: ದಿವಂಗತ ಮಾಜಿ ಪ್ರಧಾನಿ ರಾಜೀವ್ ಗಾಂಧಿ ಮತ್ತು ಹಾಲೀ ಪ್ರಧಾನಿ ನರೇಂದ್ರ ಮೋದಿ ನಡುವಿನ ವ್ಯತ್ಯಾಸವೇನು ಎನ್ನುವುದನ್ನು ಎಐಸಿಸಿ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿ ತನ್ನದೇ ದಾಟಿಯಲ್ಲಿ ಪರೋಕ್ಷವಾಗಿ ಹೇಳಿದ್ದಾರೆ.

"ರಾಜೀವ್ ಗಾಂಧಿ ಕೂಡ 1984ರ ಲೋಕಸಭಾ ಚುನಾವಣೆಯಲ್ಲಿ ಪೂರ್ಣ ಬಹುಮತವನ್ನು ಗಳಿಸಿದ್ದರು, ಆದರೆ, ಅವರು ಭಯದ ವಾತಾವರಣವನ್ನು ಸೃಷ್ಟಿಸಲಿಲ್ಲ ಅಥವಾ ಸರಕಾರೀ ಸಂಸ್ಥೆಗಳ ಸ್ವಾತಂತ್ರ್ಯವನ್ನು ನಾಶಮಾಡಲು ಎಂದಿಗೂ ತಮ್ಮಅಧಿಕಾರವನ್ನು ಬಳಸಿಕೊಂಡಿರಲಿಲ್ಲ" ಎಂದು ಸೋನಿಯಾ ಗಾಂಧಿ ಹೇಳಿದ್ದಾರೆ.

ಸೋನಿಯಾ ಬೇಸ್ತು? ಮೋದಿಗೆ ಉಘೇ ಅಂದ ಮತ್ತೋರ್ವ ಕಾಂಗ್ರೆಸ್ ನಾಯಕಸೋನಿಯಾ ಬೇಸ್ತು? ಮೋದಿಗೆ ಉಘೇ ಅಂದ ಮತ್ತೋರ್ವ ಕಾಂಗ್ರೆಸ್ ನಾಯಕ

ರಾಜೀವ್ ಗಾಂಧಿಯವರ 75ನೇ ಜನ್ಮ ದಿನಾಚರಣೆಯ ಕಾರ್ಯಕ್ರಮದಲ್ಲಿ ಪಕ್ಷದ ಕಾರ್ಯಕರ್ತರ ಸಭೆಯನ್ನುದ್ದೇಶಿಸಿ ಸೋನಿಯಾ ಗಾಂಧಿ ಮಾತನಾಡುತ್ತಿದ್ದರು. ನವದೆಹಲಿಯ ಜಾಧವ್ ಒಳಾಂಗಣ ಕ್ರೀಡಾಂಗಣದಲ್ಲಿ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.

Rajiv Gandhi Never Used Power For Spreading Fear, AICC Interim President Sonia Gandhi

"ಪ್ರಜಾಪ್ರಭುತ್ವದ ತತ್ವಗಳನ್ನು ಅಪಾಯಕ್ಕೆ ಸಿಲುಕಿಸಲು ರಾಜೀವ್ ಗಾಂಧಿ ಎಂದಿಗೂ ತಮ್ಮ ಶಕ್ತಿಯನ್ನು ಬಳಸಲಿಲ್ಲ. ಈ ಸಮಯದಲ್ಲಿ ಕಾಂಗ್ರೆಸ್ ಒಗ್ಗಟ್ಟಾಗಿ ದೇಶಕ್ಕೆ ಎದುರಾಗಿರುವ ಈ ಸಮಸ್ಯೆಯ ವಿರುದ್ದ ನಿಲ್ಲಬೇಕಾಗಿದೆ" ಎಂದು ಸೋನಿಯಾ ಗಾಂಧಿ ಹೇಳಿದ್ದಾರೆ.

"ವೈವಿಧ್ಯತೆಯೇ ಏಕತೆ ಎನ್ನುವ ಸಂದೇಶವನ್ನು ರಾಜೀವ್ ಗಾಂಧಿ ನೀಡಿದರು. ಕೇವಲ ಘೋಷಣೆಗಳಿಂದ ದೇಶದ ಅಭಿವೃದ್ದಿ ಆಗುವುದಿಲ್ಲ, ಅದಕ್ಕೆ ಕಠಿಣ ಪರಿಶ್ರಮದ ಅವಶ್ಯಕತೆಯಿದೆ" ಎಂದು, ಎಲ್ಲೂ ಮೋದಿ ಅಥವಾ ಬಿಜೆಪಿಯ ಹೆಸರು ಉಲ್ಲೇಖಿಸದೇ ಪರೋಕ್ಷವಾಗಿ, ರಾಜೀವ್ ಗಾಂಧಿ ಮತ್ತು ನರೇಂದ್ರ ಮೋದಿ ನಡುವಿನ ವ್ಯತ್ಯಾಸವನ್ನು ಅವರು ಕಂಡಂತೆ ವಿವರಿಸಿದರು.

ಪ್ರಧಾನಿ ವಿರುದ್ದ ಸೋನಿಯಾ ಗಾಂಧಿ ಪರೋಕ್ಷ ಟೀಕೆಗೆ ಪ್ರತಿಕ್ರಿಯಿಸುವ ಅಕಾಲಿದಳ, "ಸೋನಿಯಾ ಗಾಂಧಿ ಯಾವುದೇ ನಾಚಿಕೆಯಿಲ್ಲದೇ ಸುಳ್ಳು ಹೇಳುತ್ತಿದ್ದಾರೆ" ಎಂದು ಪ್ರತಿಕ್ರಿಯಿಸಿದೆ.

English summary
Without naming PM Narendra Modi or the BJP led government, Sonia Gandhi said that Rajiv Gandhi came to power in 1984 with a massive mandate but he never used power for spreading fear.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X