• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ರಜನಿ ಕಾಂತ್ ರಾಜಕೀಯಕ್ಕೆ ಬಿಗ್ ಬಿ ಸಲಹೆಯೇನು?

By ವಿಕಾಸ್ ನಂಜಪ್ಪ
|

ಚೆನ್ನೈ, ಫೆಬ್ರವರಿ 09: ತಮಿಳುನಾಡಿನ ರಾಜಕೀಯದಲ್ಲಿ ಹೊಸ ಸಂಚಲನ ಮೂಡಿಸುವಂಥ ಸುದ್ದಿಯೊಂದು ಗುದ್ದಿಕ್ಕೊಂಡು ಮುಂಬೈಯಲ್ಲಿರುವ ಮೆಗಾ ಸ್ಟಾರ್ ಕಿವಿಗೆ ಬಿದ್ದಿದೆ. ತಕ್ಷಣವೇ ಹೌಹಾರಿದ ಮೆಗಾಸ್ಟಾರ್ ಅಮಿತಾಬ್ ಬಚ್ಚನ್ ಅವರು ಸೂಪರ್ ಸ್ಟಾರ್ ರಜನಿಕಾಂತ್ ಗೆ ಆತ್ಮೀಯ ಸಲಹೆ ನೀಡಿದ್ದಾರೆ.

ಹೌದು ನಿಮ್ಮ ಊಹೆ ನಿಜ. ಹೊಸ ರಾಜಕೀಯ ಪಕ್ಷ, ಸಂಘಟನೆ ಬಗ್ಗೆ ದೇಶದ ಸಿನಿದಿಗ್ಗಜರ ನಡುವೆ ಮಾತುಕತೆಯಾಗಿರುವ ಸುದ್ದಿ ಬಂದಿದೆ.['ರಾಜಕೀಯಕ್ಕೆ ರಜನಿಕಾಂತ್ ಬರುವುದು ಬೇಡ']

ಹೊಸ ಇಂಡಿಯಾ ಟುಡೇಯಲ್ಲಿ ಬಂದಿರುವ ವರದಿ ಪ್ರಕಾರ, ರಜನಿಕಾಂತ್ ಅವರನ್ನು ಭೇಟಿ ಮಾಡಿದ ಆರೆಸ್ಸೆಸ್ ಎಸ್ ಗುರುಮೂರ್ತಿ ಅವರು ಹೊಸ ಪಕ್ಷ ಸ್ಥಾಪಿಸುವಂತೆ ಮನವಿ ಮಾಡಿಕೊಂಡಿದ್ದರು.ಈ ಮೂಲಕ ತಮಿಳುನಾಡಿಗೆ ಬಿಜೆಪಿ ಅಧಿಕೃತವಾಗಿ ಎಂಟ್ರಿ ಕೊಡಲು ಸಿದ್ಧವಾಗಿದೆ. [ಜಯಲಲಿತಾ 'ಕೊಹಿನೂರ್ ವಜ್ರ': ರಜನಿಕಾಂತ್]

ಪ್ರಧಾನಿ ಮೋದಿ ಕಾರ್ಯವೈಖರಿ ಮೆಚ್ಚುವ ಸೂಪರ್ ಸ್ಟಾರ್ ರಜನಿಕಾಂತ್ ಅವರನ್ನುತಮಿಳುನಾಡಿನ ಮುಂದಿನ ಸಿಎಂ ಅಭ್ಯರ್ಥಿಯಾಗಿ ಘೋಷಿಸಲು ಬಿಜೆಪಿ ಅಧ್ಯಕ್ಷ ಮುರಳೀಧರನ್ ಸೇರಿದಂತೆ ಹಿರಿಯ ನಾಯಕರು ಸಿದ್ಧರಾಗುತ್ತಿದ್ದಾರೆ. ಆದರೆ, ಈ ಬಗ್ಗೆ ರಜನಿ ಇನ್ನೂ ಪ್ರತಿಕ್ರಿಯೆ ನೀಡಿಲ್ಲ. [ಮೋದಿಗೆ ಹ್ಯಾಟ್ಸಾಫ್ ಎಂದ ರಜನಿ]

ರಜನಿ ರಾಜಕೀಯ ಎಂಟ್ರಿಗೆ ಕಾಲ ಸನ್ನಿಹಿತ

ರಜನಿ ರಾಜಕೀಯ ಎಂಟ್ರಿಗೆ ಕಾಲ ಸನ್ನಿಹಿತ

ಎಐಎಡಿಎಂಕೆ ಪಕ್ಷದ ಆಂತರಿಕ ಬಿಕ್ಕಟ್ಟು, ತಮಿಳುನಾಡಿನಲ್ಲಿ ಉಂಟಾಗಿರುವ ರಾಜಕೀಯ ಗೊಂದಲದ ಲಾಭ ಪಡೆಯಲು ಬಿಜೆಪಿ ತಂತ್ರ ರೂಪಿಸಿದೆ. ತಮಿಳುನಾಡಿನಲ್ಲಿ ವಿಧಾನಸಭೆ ಚುನಾವಣೆಗೆ ನಾಲ್ಕು ವರ್ಷ ಬಾಕಿ ಇದೆ.

ಈ ಸುದ್ದಿ ಬಗ್ಗೆ ತಿಳಿದ ಅಮಿತಾಬ್ ಅವರು ರಜನಿ ಕಾಂತ್ ಗೆ ಸಲಹೆ ನೀಡಿ, ಯಾವುದೇ ರಾಜಕೀಯ ಸಂಘಟನೆ ಜತೆಗೆ ಗುರುತಿಸಿಕೊಳ್ಳಬೇಡಿ ಎಂದಿದ್ದಾರೆ. ರಾಜಕೀಯ ಪ್ರವೇಶ ಎಂಟ್ರಿ ಬೇಡ, ಪಕ್ಷ ಕಟ್ಟಿ, ಜನರ ವಿಶ್ವಾಸ ಕಳೆದುಕೊಳ್ಳಬೇಡಿ ಎಂದು ಹೇಳಿದ್ದಾರೆ.

ಕಾಂಗ್ರೆಸ್ ನಿಂದ ಗೆದ್ದಿದ್ದ ಬಿಗ್ ಬಿ

ಕಾಂಗ್ರೆಸ್ ನಿಂದ ಗೆದ್ದಿದ್ದ ಬಿಗ್ ಬಿ

ಸಮಾಜವಾದಿ ಪಕ್ಷದ ಜತೆ ಗುರುತಿಸಿಕೊಂಡಿದ್ದ ಅಮಿತಾಬ್, ನಂತರ ಸಾಕಷ್ಟು ಕಿರಿಕಿರಿ ಅನುಭವಿಸಿದ್ದರು. ಅಮರ್ ಸಿಂಗ್ ಅವರು ಇತ್ತೀಚೆಗೆ ಸುದ್ದಿಗೋಷ್ಠಿ ನಡೆಸಿ ಅಮಿತಾಬ್ ಹಾಗೂ ಜಯಾ ಬಚ್ಚನ್ ಒಟ್ಟಿಗೆ ವಾಸಿಸುತ್ತಿಲ್ಲ ಎಂದು ಬಾಂಬ್ ಕೂಡಾ ಸಿಡಿಸಿದ್ದರು.

ಇದಕ್ಕೂ ಮುನ್ನ 1980ರಲ್ಲಿ ಕಾಂಗ್ರೆಸ್ ಟಿಕೆಟ್ ಪಡೆದುಕೊಂಡು ಅಲಹಾಬಾದಿನಲ್ಲಿ ಗೆಲುವು ಸಾಧಿಸಿದ್ದ ಅಮಿತಾಬ್ ನಂತರ ರಾಜಕೀಯದಿಂದ ದೂರ ಉಳಿದಿದ್ದಾರೆ. ಈಗ ತಮ್ಮ ಆತ್ಮೀಯ ಗೆಳೆಯ ರಜನಿಕಾಂತ್ ಅವರು ತಮ್ಮಂತೆ ಕಷ್ಟ ಅನುಭವಿಸಿ, ನೆಮ್ಮದಿ ಕಳೆದುಕೊಳ್ಳುವುದು ಬೇಡ ಎಂದು ಅಮಿತಾಬ್ ಆಶಿಸಿದ್ದಾರೆ.

ಮೋದಿ ಅವರನ್ನು ಭೇಟಿ ಮಾಡಿದ್ದ ರಜನಿಕಾಂತ್

ಮೋದಿ ಅವರನ್ನು ಭೇಟಿ ಮಾಡಿದ್ದ ರಜನಿಕಾಂತ್

ರಜನಿ ಅವರ ಗೆಳೆಯರಾದ ಅಂಬರೀಷ್, ಶತ್ರುಘ್ನ ಸಿನ್ಹಾ, ಮೋಹನ್ ಬಾಬು ಸೇರಿದಂತೆ ಅನೇಕ ಆಪ್ತರು ರಾಜಕೀಯದಲ್ಲಿದ್ದರೂ ರಜನಿ ಮಾತ್ರ ಆದಷ್ಟು ರಾಜಕೀಯ ಪಕ್ಷಗಳಿಂದ ದೂರವೇ ಉಳಿದಿದ್ದಾರೆ. ಕಳೆದ ಲೋಕಸಭೆ ಚುನಾವಣೆ ಸಂದರ್ಭದಲ್ಲಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿದ್ದ ರಜನಿಕಾಂತ್ ಅವರು ಬಿಜೆಪಿಗೆ ಬೆಂಬಲ ನೀಡಿದ್ದರು. ಅಲ್ಲಿಂದ ಮೊದಲುಗೊಂಡು ಇಂದಿನ ತನಕ ಬಿಜೆಪಿ ರಜನಿಕಾಂತ್ ರನ್ನು ಪಕ್ಷಕ್ಕೆ ಸೇರಿಸಿಕೊಳ್ಳಲು ಉತ್ಸಾಹ ತೋರಿದೆ.

ತಮಿಳುನಾಡು ಕಾಂಗ್ರೆಸ್ ಅಭಿಪ್ರಾಯ

ತಮಿಳುನಾಡು ಕಾಂಗ್ರೆಸ್ ಅಭಿಪ್ರಾಯ

ರಜನಿಕಾಂತ್ ಅವರು ರಾಜಕೀಯಕ್ಕೆ ಬರುವುದೇ ಬೇಡ ಎಂಬುದು ನನ್ನ ಅಭಿಪ್ರಾಯ. ಅವರ ಅಭಿಮಾನಿಗಳು ಎಲ್ಲಾ ಪಕ್ಷಗಳಲ್ಲಿದ್ದಾರೆ. ತಮಿಳುನಾಡಿನ ಎಲ್ಲಾ ಜನರಿಗೂ ಅವರು ಬೇಕಾದವರು. ಒಂದು ಪಕ್ಷಕ್ಕೆ ಸೀಮಿತವಾಗುವುದು ಬೇಡ ಎಂದು ತಮಿಳನಾಡಿನ ಕಾಂಗ್ರೆಸ್ ಅಧ್ಯಕ್ಷ ಇಳಂಗೋವನ್ ಅವರು ಪಿಟಿಐ ಪ್ರತಿನಿಧಿಯೊಂದಿಗೆ ಅಭಿಪ್ರಾಯ ಹಂಚಿಕೊಂಡಿದ್ದರು.

ಹೊಸ ಪಕ್ಷದ ಸುದ್ದಿ ಹುಟ್ಟಿಕೊಂಡಿದೆ.

ಹೊಸ ಪಕ್ಷದ ಸುದ್ದಿ ಹುಟ್ಟಿಕೊಂಡಿದೆ.

ಲೋಕಸಭೆ ಚುನಾವಣೆ 2014 ರಲ್ಲಿ ಡಿಎಂಕೆ ಹೀನಾಯ ಸೋಲು ಕಂಡಿತ್ತು. ಜಯಲಲಿತಾ ನೇತೃತ್ವದ ಎಐಎಡಿಎಂಕೆ 39 ಸೀಟುಗಳ 37 ಸೀಟು ಗೆದ್ದುವಿಜಯ ದಾಖಲಿಸಿತ್ತು. ಮೋದಿ ಪರ ರಜನಿ ಹೇಳಿಕೆ ನೀಡಿದ್ದರು. ಈ ನಡುವೆ 2016ರ ವಿಧಾನಸಭೆ ಚುನಾವಣೆ ವೇಳೆ ರಜನಿಕಾಂತ್ ಅವರು ಹೊಸ ಪಕ್ಷ ಕಟ್ಟುತ್ತಾರೆ ಎಂಬ ಸುದ್ದಿಯೂ ಹಬ್ಬಿತ್ತು. ಆದರೆ, ತಟಸ್ಥವಾಗಿ ಉಳಿದರು. ಎಐಎಡಿಎಂಕೆ 136 ಸೀಟು ಗೆದ್ದು ಅಧಿಕಾರ ಸ್ಥಾಪಿಸಿತು. ಈಗ ರಾಜಕೀಯ ಅಸ್ಥಿರತೆ ಉಂಟಾಗಿದ್ದು, ರಜನಿ ಹೊಸ ಪಕ್ಷದ ಸುದ್ದಿ ಹುಟ್ಟಿಕೊಂಡಿದೆ.

ಪ್ರಜಾಪ್ರಭುತ್ವ ಉಳಿಸಬೇಕಿದೆ

ಪ್ರಜಾಪ್ರಭುತ್ವ ಉಳಿಸಬೇಕಿದೆ

ನಾವು ಪ್ರಜಾಪ್ರಭುತ್ವ ಉಳಿಸಬೇಕಿದೆ, ಓ ಪನ್ನೀರ್ ಸೆಲ್ವಂ ಜನಪ್ರತಿನಿಧಿಯಾಗಿದ್ದಾರೆ. ಶಶಿಕಲಾ ಅವರಂತೆ ದಿಢೀರ್ ಆಯ್ಕೆಯಾಗಿಲ್ಲ. ಮತದಾರರಾದ ನಾವು ಎಚ್ಚೆತ್ತುಕೊಳ್ಳಬೇಕಿದೆ. ಈ ಬಗ್ಗೆ ನನ್ನ ವೃತ್ತಿ ಬದುಕಿನ ಗೆಳೆಯರ ನೆರವು ಕೋರುತ್ತೇನೆ ಎಂದು ಕಮಲ್ ಹಾಸನ್ ಅವರು ಹೇಳಿದ್ದನ್ನು ಇಲ್ಲಿ ಸ್ಮರಿಸಬಹುದು.

ಪರಿಸ್ಥಿತಿ ಬಗ್ಗೆ ರಜನಿಗೆ ಅರಿವಿದೆ

ಪರಿಸ್ಥಿತಿ ಬಗ್ಗೆ ರಜನಿಗೆ ಅರಿವಿದೆ

ಜಯಲಲಿತಾ ಅವರನ್ನು ಗೆಲ್ಲಿಸಿದರೆ ತಮಿಳುನಾಡಿಗೆ ದೊಡ್ಡ ದುರಂತ ಕಾದಿದೆ ಎಂದು ರಜನಿ ಘೋಷಿಸುತ್ತಿದ್ದಂತೆ ಜಯಲಲಿತಾ ಅವರು ಸೀಟುಗಳನ್ನು ಕಳೆದುಕೊಂಡು ಡಿಎಂಕೆಗೆ ಅಧಿಕಾರ ನೀಡಬೇಕಾಗಿ ಬಂದಿತ್ತು. ಆದರೆ, ಮುಂದಿನ ಚುನಾವಣೆಯಲ್ಲಿ ರಜನಿ ಯಾವುದೇ ಪಕ್ಷದ ಪರ ಅಥವಾ ವಿರೋಧ ಹೇಳಿಕೆ ನೀಡಲಿಲ್ಲ.ಈ ಹಿಂದೆ ಬಿಜೆಪಿಗೆ ಮತ ಹಾಕಿ ಎಂದಿದ್ದ ರಜನಿ ವಿರುದ್ಧ ಪಿಎಂಕೆ ಪಕ್ಷ ಕಿಡಿಕಾರಿತ್ತು. ರಜನಿ ಅವರ ಆಗ ಬಾಬಾ ಚಿತ್ರ ಪ್ರದರ್ಶನಕ್ಕೂ ಅಡ್ಡಿ ಉಂಟಾಗಿತ್ತು.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Amidst all the political turmoil in Tamil Nadu there is talk that superstar Rajinikanth is set to launch his own political outfit. However his Hum co-star, Amitabh Bachchan has advised him against it.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more